“ಮುಗುಳು ನಗೆ ಬಾಳಿನ ಬೆಳಕು”…..
ಮುಗುಳು ನಗೆ ಬಾಳಿನ ಬೆಳಕು
ಜೀವನ ಚಕ್ರದ ಕಲೆಯ ಸುಖದ ಹೊನಲು
ಮುಗುಳು ನಗೆ ಸರ್ವ ಮನ ಸೋಲುವುದು
ನಿಶ್ಚಿತ ದ್ವೇಷ ರೋಷ ಕಳೆಯುವುದು
ನೋವುಗಳ ತಡೆಯುವ ಕಲೆ
ಜೋಲು ಮುಖಗಳ ಸೆಳೆ ಸ್ನೇಹ ಜೀವಿಗಳ
ಮನ ಸೆಳೆಯುವುದು
ಜೀವನದ ಬದುಕಿನ ಹೊಳಪು
ಎದುರಾಳಿಗಳಿಗೆ ನಗು ಹೂ ಬಾಣದ ಮೊಳೆ
ಮುಗುಳ ನಗು ಮರೆಸುವುದು ನೋವಿನ ಗೆರೆ
ಸುಮನದ ನಗೆ ಮೋಹಕ ನವಿಲು ಗೆರೆ
ಮನಸಿಗೆ ಮುದ ಸೃಷ್ಠಿಯ ಸೌಂಧರ್ಯ ಸವಿ
ಮುಖದಲಿ ನಗೆ ಗೆರೆ ಸಿರಿ ದುಃಖದ ಸನ್ನಿವೇಶ
ಅಳಿಸುವ ಮುಗುಳು ನಗೆ
ಮೂಡುವುದು ಮುಗುಳ ನಗೆ ಗೆರೆ
ಸ್ನೇಹ ಸಂಬಂಧ ಗಟ್ಟಿತನದಿ ತೋರುವ ನಗೆ
ಅನಾರೋಗ್ಯಕರ ಸಮಸ್ಯೆಗಳಿಗೆ ಮುಗುಳು
ನಗೆಯೇ ದಿವ್ಯೌಷಧಿ ಘಾಸಿ ಮನಸಿಗೆ ನಗೆ
ಚಟಾಕಿ ನಿಜ ಆರೈಕೆ ಮುಗುಳು ನಗು ಜೀವನ
ಬಾರ ಹಗುರ ಮುಗುಳು ನಗೆ ಮಗು ಮನ
ಮನಗೆ ಶೃಂಗಾರ
ತಂಗಾಳಿಗೆ ಜಗದ ಹಸಿರು ಸಿರಿಯ ಮುಗುಳು
ನಗು ಚೆಲುವ ಚೆನ್ನ
ವಯೋವೃದ್ಧರ ಅನುಭವದ ಮುಗುಳ ನಗೆ
ಬದುಕಿನ ದಾರಿಯ ಬೆಳಗು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ