ಸೌಹಾರ್ದತೆ ಕದಡುವ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ – ಸಚಿವರಾದ ಎನ್.ಎಸ್ ಬೋಸರಾಜು.
ಮಲ್ಲಟ ನ.18

ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಎಮ್.ಆರ್.ಹೆಚ್.ಎಸ್ ಹಾಗೂ ಡಾ, ಎನ್ ಮೂರ್ತಿ ಬಣದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಡಾ, ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಗೊಳಿಸಿದರು.ಭಾರತಕ್ಕಾಗಿ ವಿಶ್ವವೇ ಮೆಚ್ಚುವಂತಹ ಗ್ರಂಥ ಸಂವಿಧಾನವನ್ನು ಡಾ, ಅಂಬೇಡ್ಕರ್ ಅವರು ಕೊಟ್ಟರು. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕುತ್ತಿದ್ದೇವೆ. ಜಾತ್ಯಾತೀತತೆಯ, ಸಮ-ಸಮಾನತೆ, ಸಹೋದರತ್ವ ವಿಚಾರದ ಕಲ್ಪನೆ ಇಟ್ಟು ಕೊಂಡಂತಹ ಮಹಾನ್ ವ್ಯಕ್ತಿ ಡಾ, ಬಿ.ಆರ್ ಅಂಬೇಡ್ಕರ್ ಎಂದರು. ಕೆಲ ಕೋಮುವಾದಿ ಶಕ್ತಿಗಳು ಡಾ, ಬಿ.ಆರ್ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ನಮ್ಮ ಶಾಂತಿ, ಸೌಹಾರ್ದತೆಯನ್ನು ಕದಡುತ್ತಿವೆ ಅಂತ ಶಕ್ತಿಗಳ ವಿರುದ್ಧ ಹೋರಾಡ ಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಚಿಗರಳ್ಳಿ ಮಠದ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ, ಜಾಡಲ್ದಿನ್ನಿ ವೀರಭದ್ರೇಶ್ವರ ಸ್ವಾಮೀಜಿ, ಡಾ, ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಎನ್.ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿವಪ್ಪ ಗೊಲ್ಲದಿನ್ನಿ, ಜಿಲ್ಲಾಧ್ಯಕ್ಷರಾದ ಅಬ್ರಾಹಂ ಹೊನ್ನಟಗಿ, ಮಹೇಶ, ಮಲ್ಲಟ ಮಲ್ಲಿಕಾರ್ಜುನ್, ಕಿರಲಿಂಗಪ್ಪ ಕವಿತಾಳ, ಕಾಂಗ್ರೆಸ್ ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಅಂಬಣ್ಣ ಆರೋಲಿಕರ್, ರುದ್ರಪ್ಪ ಅಂಗಡಿ ಜಿ ಶಿವಮೂರ್ತಿ ಬಸವರಾಜ್ ಪಾಟೀಲ್ ಅತನೂರು, ಶಾಂತ ಕುಮಾರ್, ಹುಲುಗಪ್ಪ ಸೈದಾಪುರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ