ಜಗನ್ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನ ಭೂಮಿ ಪೂಜಾ ಸಮಾರಂಭ – ಧರ್ಮಸಭೆ.
ಕಲಕೇರಿ ನ.18

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಕಾಳಿಕಾದೇವಿ ದೇವಸ್ಥಾನ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ರಾಜೂಗೌಡ ಪಾಟೀಲ ಕುದರಿ ಸಾಲವಾಡಗಿ ಜರುಗಿಸಿದರು.ಬೆಳಿಗ್ಗೆ ವಿಶ್ವಕರ್ಮ ಧ್ವಜಾರೋಹಣ ಹಾಗೂ ಹೋಮ ಪೂಜಾ ಕಾರ್ಯಕ್ರಮ ಬಹಳ ವಿದ್ಯುಕ್ತವಾಗಿ ನಡೆಯಿತು. ನಂತರದಲ್ಲಿ ಕಲಕೇರಿ ಆರಾಧ್ಯ ದೈವವಾದ ಶ್ರೀ ವೀರಘಂಟಿ ಮಡಿವಾಳೇಶ್ವರ ದೇವಸ್ಥಾನ ದಿಂದ ಪೂಜ್ಯರನ್ನು ಹಾಗೂ ಗಣ್ಯರನ್ನು ವಿವಿಧ ವೇಧಘೋಷ, ಪೂರ್ಣ ಕುಂಬ, ಛತ್ರಿ ಚಾಮರ ಹಾಗೂ ವಾದ್ಯ ವೈಭವದೊಂದಿಗೆ ನೂತನ ದೇವಸ್ಥಾನದ ಭೂಮಿ ಪೂಜೆಯ ಸ್ಥಳಕ್ಕೆ ಬಹಳ ಅದ್ದೂರಿಯಾಗಿ ಕರೆತರಲಾಯಿತು.
ಧರ್ಮ ಸಭೆ:-
ಈ ವೇಳೆ ಆಗಮಿಸಿದ ಸ್ವಾಮೀಜಿಯವರು, ರಾಜಕೀಯ ಮುಖಂಡರು, ಹಾಗೂ ಅತಿಥಿಗಳು ಮಾತನಾಡುತ್ತಾ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ, ಇಡೀ ಸಮಾಜದಲ್ಲಿ ನೀರು, ಅಗ್ನಿ ಯನ್ನ ಪೂಜ್ಯ ಭಾವದಲ್ಲಿ ಕಂಡು ಸೂಕ್ಷ್ಮ ಕೆತ್ತನೆಗಳಲ್ಲಿ ಪರಿಣತಿಯನ್ನು ಕಂಡು ಇಡೀ ವಿಶ್ವವೆ ನಿಬ್ಬೆರಾಗಗುವಂತೆ ಮಾಡಿರುವ ಕೀರ್ತಿ ಈ ಸಮಾಜಕ್ಕೆ ಸಲ್ಲುತ್ತದೆ.ಈ ಕಾಳಿಕಾ ದೇವಸ್ಥಾನದ ಕಟ್ಟಡ ಆಗುವವರೆಗೂ ನಿರಂತರವಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದರು.ಶಹಾಪುರದ ಶ್ರೀ ವಿಶ್ವಕರ್ಮ ಏಕದಂಡಿಗೆ ಮಠದ ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳು, ಶಹಾಪುರದ ಶ್ರೀ ವಿಶ್ವಕರ್ಮ ಏಕದಂಡಿಗೆ ಮಠದ ಪೂಜ್ಯ ಶ್ರೀ ಕಾಳ ಹಸ್ತೇಂದ್ರ ಮಹಾಸ್ವಾಮಿಗಳು, ನಾಲತವಾಡದ ಶ್ರೀ ಬ್ರಹ್ಮಾಂಡಬೆರಿ ಮಠದ ಪಂಪಪಾತಿ ಮಹಾಸ್ವಾಮಿಗಳು, ಅಳಮೇಲ್ -ಸಿಂದಗಿ ಶ್ರೀ ಮೂರು ಝಾವಾಧೀಶ್ವರ ಮಠದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.ಬೋರಗಿ ಪುರದಾಳದ ಶ್ರೀ ವಿಶ್ವರಾಧ್ಯ ಬ್ರಹ್ಮ ವಿದ್ಯಾಶ್ರಮದ ಶ್ರೀ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡಿದ್ದರು.

ಕಲಕೇರಿ ಗುರು ಮರುಳಾರಾಧ್ಯ ಸಂಸ್ಥಾನದ ಶ್ರೀ ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು. ತೆಲಗಿ ವಾಮನ ಮುತ್ಯಾ ಧ್ಯಾನ ಮಂದಿರದ ಬಾಲಯೋಗಿ ವಾಮನರಾವ ಶ್ರೀಧರ ಪತ್ತಾರ್, ವಡವಡಗಿಯ ಶ್ರೀ ಕಾಳಿಕಾಂಬ ಶಕ್ತಿಪೀಠದ ಬಾಲಯೋಗಿ ಶ್ರೀ ಗುರುರಾಜ್ ಶಿವಾನಂದ ಶಿಲ್ಪಿ ಸಮ್ಮುಖ ವಹಿಸಿಕೊಂಡಿದ್ದರು. ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಪ್ರಭುಗೌಡ ಲಿಂಗದಳ್ಳಿ ಜಗನ್ಮಾತೆ ಕಾಳಿಕಾದೇವಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆಯಲ್ಲಿ ಮುಖಂಡರಾದ ಇಂಡಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಕನಕರಾಜ್ ವಡ್ಡರ, ಸುರೇಶಗೌಡ ಪಾಟೀಲ, ಸಿದ್ದು ಬುಳ್ಳಾ,ಲಕ್ಕಪ್ಪ ಬಡಿಗೇರ, ಅಶೋಕಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜಹ್ಮಮ್ಮದ ಸಿರಸಗಿ, ವಸಂತ ಬಡಿಗೇರ, ವಿಜಯಪುರದ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಬಾಳು ಗಿರಗಾಂವಕರ, ಉಪಾಧ್ಯಕ್ಷರಾದ ಪ್ರಮೋದ ಬಡಿಗೇರ, ಈರಣ್ಣ ಗುರುಬಾಳಪ್ಪ ಪತ್ತಾರ, ಸೇರಿದಂತೆ ಅನೇಕರು ಇದ್ದರು. ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀಶೈಲ್ ಪತ್ತಾರ್. ಮುರಳಿಧರ್ ಪತ್ತಾರ್. ಶಾಮರಾವ್ ಪತ್ತಾರ್. ಈರಣ್ಣ ಪತ್ತಾರ್. ದೇವೇಂದ್ರ ಬಡಿಗೇರ್. ಇನ್ನೂ ಅನೇಕ ವಿಶ್ವಕರ್ಮ ಸಮಾಜದವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು.ಮನೋಹರ ಪತ್ತಾರ ಪ್ರಾಸ್ತಾವಿಕ ನುಡಿಗಳನ್ನ ಹೇಳಿದರು. ಶಿವಾನಂದ ಸಜ್ಜನ್ ನಿರೂಪಿಸಿ ಹಾಗೂ ಈರಣ್ಣ ಝಳಕಿ ವಂದಿಸಿದರು. ಇದೆ ಸಂದರ್ಭದಲ್ಲಿ ಹಲವಾರು ಗಣ್ಯರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು. ಸಂಜೆ ಕಲಾ ಸಿಂಚನ ಮೆಲೋಡಿಸ್ ವತಿಯಿಂದ ರಸ ಮಂಜರಿ ಕಾರ್ಯಕ್ರಮ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ