ತಾಲೂಕಾ ಆಡಳಿತ ಸೌಧದಲ್ಲಿ ಕನಕ ಜಯಂತಿ – ಆಚರಿಸಿದ ಶಾಸಕರು.
ಮೊಳಕಾಲ್ಮುರು ನ.18
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧದಲ್ಲಿ ಕನಕ ಜಯಂತಿಯನ್ನು ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಇವರು ಮತ್ತು ಕುರುಬ.ಸಮುದಾಯದ ತಾಲೂಕ್ ಅಧ್ಯಕ್ಷರು ಜಗದೀಶ್ ಹಾಗೂ ಮುಖಂಡರುಗಳು ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಪ್ರಮುಖರು ಸೇರಿ ಕನಕ ಜಯಂತಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಪೂಜೆ ಮಂಗಳಾರತಿ ಮಾಡಿ ಕೈ ಮುಗಿದ ಶಾಸಕರು. ಮತ್ತು ಇದಾದ ನಂತರ ಶಾಸಕರು ಸಭೆಯಲ್ಲಿ ಮಾತನಾಡಿದರು. ಕನಕದಾಸರು ಜ್ಞಾನವಂತರು ಸಾಕ್ಷಾತ್ ಭಗವಂತನನ್ನು ಕಂಡ ವ್ಯಕ್ತಿ ಎಂದರೆ ಅದು ಕನಕದಾಸರು ಎಂದು ಶಾಸಕರು ತಿಳಿಸಿದರು. ದೇಶದ ಉದ್ದಗಲಕ್ಕೂ ಧರ್ಮವನ್ನೇ ಸಾರಿದ ಕನಕದಾಸರು ವಿಜಯನಗರ ಸಾಮ್ರಾಜ್ಯದಲ್ಲಿ ಹುಟ್ಟಿ ಬಂದಂತ ವ್ಯಕ್ತಿ ಮತ್ತು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ಕನಕ ಎಂಬ ಪ್ರಖ್ಯಾತ ಹೆಸರು ಪಡೆದ ಕನಕದಾಸರು ಈ ಕನಕದಾಸರಿಗೆ ಬೆನ್ನೆಲುಬು ಆಗಿ ನಿಂತಂತ. ಶ್ರೀ ಕೃಷ್ಣ ಪರಮಾತ್ಮ ಈ ಜಯಂತಿಯನ್ನು ಅದ್ದೂರಿಯಾಗಿ ಮಾಡಬೇಕೆಂದು ನಾವು ಅಂದು ಕೊಂಡಿದ್ದೇವೆ. ಆದರೆ ಈಗ ಸೂಕ್ಷ್ಮವಾಗಿ ಜಯಂತಿಯನ್ನು ಮಾಡಿದ್ದೇವೆ ಮುಂದಿನ ದಿನದಲ್ಲಿ ಕನಕ ಜಯಂತಿಯ ಭವನ ಮತ್ತು ಪುತ್ತಳಿಯನ್ನು ಮಾಡಬೇಕೆಂದು ಸರ್ಕಾರದಿಂದ ಜಾಗವನ್ನು ರೂಪಿಸಿ ಮೊಳಕಾಲ್ಮುರು ಪಟ್ಟಣದಲ್ಲಿ ಈ ಜಾಗಕ್ಕೆ ಅನುದಾನ ಬಿಡುಗಡೆ ಮಾಡಿಸಿ ಈ ಕೆಲಸವನ್ನು ಮುಗಿಸಿದ ನಂತರ ಅದ್ದೂರಿಯಾಗಿ ಕನಕ ಜಯಂತಿ ಮೆರವಣಿಗೆ ಮತ್ತು ಉದ್ಘಾಟನೆ ಮಾಡಬೇಕೆಂದು ಶಾಸಕರು ಸಭೆಯಲ್ಲಿ ಕನಕದಾಸರು ಎಲ್ಲಾ ವರ್ಗಕ್ಕೆ ಸೀಮಿತ ವ್ಯಕ್ತಿಯಾಗಿ ಮಾತನಾಡಿದರು. ಮತ್ತು ನಾವು ಹೇಗಿರಬೇಕು ನಮ್ಮ ಮನಸ್ಸುಗಳು ಹೇಗಿರಬೇಕು ನಮ್ಮಲ್ಲಿರೋ ಕೆಟ್ಟ ಮನಸುಗಳನ್ನು ತೆಗೆದ ಹಾಕಬೇಕು ಸ್ವಾಭಿಮಾನದ ಮನಸ್ಸಿರ ಬೇಕು ಯಾರಿಗೆ ಯಾರು ದೊಡ್ಡವರಲ್ಲ ನಿಮ್ಮ ಜಾಣತನ ನಿಮಗೆ ಗೊತ್ತಿರ ಬೇಕು ಎಂದು ತಿಳಿಸಿದರು. ಹಣೆಬರಕ್ಕೆ ಹೊಣೆ ಯಾರು ಇಲ್ಲ ಅವರವರ ಪಡೆದಿರುವಂತ ಫಲ ಈ ಕಾಲದಲ್ಲಿ ಸಂಸ್ಕೃತವಂತರಾಗಿ ಬದುಕಬೇಕು ಒಂದು ಮಠ ಇದೆ ಅಂದರೆ ಒಬ್ಬ ಗುರು ಇರಲೇಬೇಕು ಗುರುವಿನ ಆಶೀರ್ವಾದ ಯಾರು ಪಡೆಯುತ್ತಾರೋ ಆ ಗುರು ಯಾರಿಗೂ ಹೊಲಿಮೆ ಕೊಡುತ್ತಾರೋ ಅವರಿಗೆ ಯಾವ ಕೆಲಸನೂ ಅಡ್ಡಿ ಆತಂಕ ಬರುವುದಿಲ್ಲ ಸಲೀಸಾಗಿ ಕೆಲಸಗಳಾಗುತ್ತವೆ ಆಡಳಿತವನ್ನು ಸರಿಯಾದ ರೀತಿಯಲ್ಲಿ ನಡೆಸಿ ಕೊಂಡು ಹೋಗಬಹುದು ಎಂದು ತಿಳಿಯಬೇಕು ಅದನ್ನು ಬಿಟ್ಟು ಗುರು ಇಲ್ಲದೇನೆ ನಾನೇ ಗುರು ಎಂದು ಆಡಳಿತ ನಡೆಸಲು ಹೋದರೆ ಸಾಗದ ಕೆಲಸ ಎಂದು ತಿಳಿಯಬೇಕು ಗುರು ಎಂದರೆ ನ್ಯಾಯ ನೀತಿ ಧರ್ಮ ಪ್ರಕೃತಿ ನಿಯಮ ತಿಳಿದಂತವರಿಗೆ ಮಾತ್ರ ಗುರುವಿನ ಭಾಗ್ಯ ಒಲಿದು ಬರುತ್ತದೆ ಎಂದು ತಿಳಿಯಬೇಕು ಪಡೆದರೆ ಪಲ್ಪೂಜೆ ಗತಿಗೇಡದವರಿಗೆ ಹಂಪೆ ಜಾತ್ರೆ ಹಿಂದೆ ಯುಗದಲ್ಲಿ ಬರೆದಂತ ಕವನ ಎಂದು ತಿಳಿಯಬೇಕು ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಸಮುದಾಯದ ಮುಖಂಡರುಗಳು, ತಹಸಿಲ್ದಾರ್ ರಾದ ಟಿ.ಜಗದೀಶ್ ಕನಕದಾಸರ ಸಮಾಜದ ತಾಲೂಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಮೊಳಕಾಲ್ಮುರಿನ ಪಟ್ಟಣದ ಎಲ್ಲ ಪ್ರಮುಖರು ಗಣ್ಯ ಮಾನ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ..ಹೊಂಬಾಳೆ.ಮೊಳಕಾಲ್ಮುರು