ವೀರರಾಣಿ ಕಿತ್ತೂರು ಚೆನ್ನಮ್ಮ 246 ನೇ – ಜಯಂತ್ಯೋತ್ಸ ಕಾರ್ಯಕ್ರಮ ಜರುಗಿತು.
ಗಜೇಂದ್ರಗಡ ನ.18
ಬ್ರಿಟಿಷರ ವಿರುದ್ಧ ಹೋರಾಡಿದ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಿ ಕೊಳ್ಳಬೇಕು ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿ ದೇಶಾಭಿಮಾನ ಮೆರೆದ ಚನ್ನಮ್ಮಳ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಹಾಗೂ ಶಕ್ತಿಯಾಗಲಿ ಎಂದು ಪಂಚಮಸಾಲಿ ತಾಲೂಕಾಧ್ಯಕ್ಷ ಸಿದ್ದಣ್ಣ ಬಂಡಿ ಹೇಳಿದರು. ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯೋತ್ಸ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ ಪ್ರತಿಭಾವಂತರನ್ನು ಸಮಾಜ ಗೌರವಿಸುತ್ತದೆ. ಕಿತ್ತೂರು ಚೆನ್ನಮ್ಮಳು ಒಬ್ಬ ರಾಷ್ಟ್ರ ಪ್ರೇಮಿ, ಸ್ವಾಭಿಮಾನಿ ಯಾಗಿದ್ದಳು. ಯಾರು ಪ್ರತಿಭಾವಂತರು ಹಾಗೂ ಸಾಧಕರನ್ನು ಜಾತಿಯಿಂದ ನೋಡಕೆ ಆಗಲ್ಲ. ವಿದ್ಯಾರ್ಥಿಗಳು ಸಾಧನೆ ಮಾಡುವುದರ ಮೂಲಕ ತಂದೆ ತಾಯಿಗಳ ಆಸೆಯನ್ನು ಈಡೇರಿಸಬೇಕು ಎಂದರು.
ಕೆ.ಎಸ್.ಎಸ್.ಕಾಲೇಜು ಉಪನ್ಯಾಸಕ ಎಸ್.ಎ. ಸಂಕನಗೌಡ್ರ ಅವರು ವೀರರಾಣಿ ಕಿತ್ತೂರು ಚೆನ್ನಮ್ಮಳ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿದ ಅವರು ಇಂದಿನ ಆದುನಿಕ ಯುಗದಲ್ಲಿ ಮಹಿಳೆಯರು ಕಿತ್ತೂರು ಚೆನ್ನಮ್ಮಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು. ಸಮಾಜದಲ್ಲಿ ತಮ್ಮದೆ ಆದ ಚಾಪು ಮೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಯಾವ ಜಾತಿಗೆ ಸೀಮಿತವಾಗಿದೆ ದೇಶದಲ್ಲಿ ಕಿತ್ತೂರು ಚೆನ್ನಮ್ಮಳನ್ನು ಎಲ್ಲರೂ ಗೌರವಿಸಬೇಕು.ಸಮಾಜ ಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವನಾಥ ಜಿಡ್ಡಿಬಾಗಿಲು, ಹನುಮಂತಪ್ಪ ಪ್ರಭಣ್ಣವರ, ಅಂದಪ್ಪ ಸರ್ವಿ,ಶರಣಪ್ಪ ಹೊನ್ನವಾಡ, ವಿರೇಶ ರೊಟ್ಟಿ, ಶರಣಪ್ಪ ರೊಟ್ಟಿ, ಮಲ್ಲಿಕಾರ್ಜುನ ಅಂಗಡಿ, ಅಶೋಕ ಅಂಗಡಿ, ಬಸವರಾಜ ತೊಂಡಿಹಾಳ, ಕೆ.ಎ.ಕೊಪ್ಪದ, ಎಮ್.ಎಸ್ ಹೊನ್ನವಾಡ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ