ಕನಕದಾಸರು ಒಂದು ಜಾತಿಗೆ ಸೀಮಿತರಲ್ಲ – ಜಿ.ಎಚ್ ಶ್ರೀ ನಿವಾಸ್.

ತರೀಕೆರೆ ನ.18

ಕ್ಷೇತ್ರದ ಅಭಿವೃದ್ಧಿಗೆ ರೂ, 150 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ತಾಲೂಕ ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ತರೀಕೆರೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ವರ್ಷಗಳ ಅವಧಿಯನ್ನು ಪೂರ್ಣ ಮುಖ್ಯ ಮಂತ್ರಿಯಾಗಿರುತ್ತಾರೆ ಎಂದು ಹೇಳಿದರು. ಕನಕದಾಸರು,ಮಡಿವಾಳ ಮಾಚಿದೇವ, ಬಸವಣ್ಣನವರು ವಾಲ್ಮೀಕಿ ರವರು ಸಮಾಜದ ಸುಧಾರಕ ರಾಗಿದ್ದಾರೆ. ಅವರು ಯಾವುದೇ ಜಾತಿಗೆ ಸೀಮಿತರಾಗಿಲ್ಲ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಕವಾಲಿ ರವರು ಮಾತನಾಡಿ ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ, ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣದ ಗುರಿ ಹೊಂದಿದ್ದರು ಎಂದು ಹೇಳಿದರು. ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಕನಕದಾಸರು ಭಕ್ತಿಯ ಮಾರ್ಗದಲ್ಲಿ ಸಮಾಜ ಸುಧಾರಣೆಗೆ ತೊಡಗಿದರು. ಮಡಿವಂತಿಕೆ ಮನಸಿನಲ್ಲಿರ ಬೇಕು. ಶಿಕ್ಷಣ ಮತ್ತು ಆಧ್ಯಾತ್ಮಿಕ ಜ್ಞಾನದ ಅರಿವಿನ ಬಗ್ಗೆ ಮಹತ್ವ ನೀಡಿದ್ದಾರೆ. ಅವರ ಕೀರ್ತನೆಗಳು, ಆದರ್ಶಗಳು ಸಮಾಜದ ಬದಲಾವಣೆಯನ್ನು ಬಯಸಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಟಿ.ಎಸ್ ರಮೇಶ್ ಮಾತನಾಡಿ ಕುರುಬ ಸಂಘ 1944 ರಿಂದ ಸಂಘಟಿತವಾಗಿದೆ, ದಿವಂಗತ ನಾಗಪ್ಪ, ಪರಮೇಶ್ವರಪ್ಪ, ಟಿ.ಹೆಚ್ ಶಿವಶಂಕರಪ್ಪ, ಹಾಗೂ ಎರಡು ಬಾರಿ ಜಿ.ಎಚ್ ಶ್ರೀನಿವಾಸ್ ರವರು ಶಾಸಕ ರಾಗಿದ್ದಾರೆ, ಹೀಗೆ ನಾಲ್ಕು ಜನರು ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ ಸಂಘವು ಸಮಾಜ ಸೇವೆಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದೆ ಎಂದು ಹೇಳಿದರು. ಪುರಸಭಾ ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್, ಎಂ ನರೇಂದ್ರ, ಡಾ, ಭರತ್ ಅಂಚೆ, ಲಕ್ಷ್ಮಿದೇವಮ್ಮ ಮಾತನಾಡಿದರು. ನವೀನ್ ಕುಮಾರ್ ಉಪನ್ಯಾಸ ನೀಡಿದರು. ಇದೆ ಸಂದರ್ಭದಲ್ಲಿ ಡಾ, ಶಿವಶಂಕರ್, ಡಾ. ದ್ರಾಕ್ಷಿಯಾನಿ, ಎಂ ನರೇಂದ್ರ, ಲಕ್ಷ್ಮೀದೇವಮ್ಮ, ಭಾಗ್ಯಮ್ಮ, ಧನ್ಯಶ್ರೀ, ಟಿ ಜಿ ಮಂಜುನಾಥ್, ಆರ್ ದೇವಾನಂದ, ಟಿ ವಿ ಶಿವಶಂಕರಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವೇದಿಕೆಯಲ್ಲಿ ಪೊಲೀಸ್ ಉಪಾ ಅಧೀಕ್ಷಕರಾದ ಹಾಲುಮೂರ್ತಿ ರಾವ್, ತಸೀಲ್ದಾರ್ ವಿಶ್ವಜಿತ್ ಮೆಹತಾ, ಪೊಲೀಸ್ ನಿರೀಕ್ಷಿಕರಾದ ರಾಮಚಂದ್ರನಯ್ಕ್, ಪುರಸಭೆ ಮುಖ್ಯಧಿಕಾರಿ ಎಚ್ ಪ್ರಶಾಂತ್,ಗಂಗಾಧರ್, ಇ.ಓ. ಡಾ, ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪುರಸಭಾ ಸದಸ್ಯರಾದ ಟಿಜಿ ಶಶಾಂಕ್, ಚೇತನ್, ಗೀತಾ ಗಿರಿರಾಜ್, ಉಪಸಿತರಿದ್ದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಸ್ವಾಗತಿಸಿ ದರ್ಶನ್ ನಿರೂಪಿಸಿ ವಂದಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button