ಬೈಕ್ ಸವಾರ ಹುಲಿ ಗುಡ್ಡದ ಹತ್ತಿರ ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ವ್ಯಕ್ತಿ.
ಕೊಟ್ಟೂರು ನ. 18
ನೂತನ ತಾಲೂಕು ಕೊಟ್ಟೂರು ಸುತ್ತ ಮುತ್ತಲಿನ ರಸ್ತೆ ಗುಂಡಿಗಳ ಗಂಡಾಂತರ ತಪ್ಪಿಸುವಲ್ಲಿ ಹರ ಸಾಹಸ ಪಡುತ್ತಿರುವ ಪಿ.ಡಬ್ಲ್ಯೂ.ಡಿ ಇಲಾಖೆ. ಹರಪನಹಳ್ಳಿ ಯಿಂದ ಕೊಟ್ಟೂರು ಮಾರ್ಗವಾಗಿ ಕೂಡ್ಲಿಗಿಗೆ ಹೋಗುತ್ತಿರುವ ಅಮಲಾಪುರದ ಬೈಕ್ ಸವಾರ ಹುಲಿ ಗುಡ್ಡದ ಹತ್ತಿರ ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯ ಗೊಂಡಿರುವ.
ವ್ಯಕ್ತಿಯ ಫೋಟೋದಲ್ಲಿ ನೋಡ ಬಹುದಾಗಿದೆ. ಪಿ.ಡಬ್ಲ್ಯೂ.ಡಿ ನಿರ್ಲಕ್ಷ್ಯತನ ಎಷ್ಟರ ಮಟ್ಟಿಗೆ ಇದೆ ಎಂಬುದು ಕೊಟ್ಟೂರು ಸುತ್ತ ಮುತ್ತಲಿನ ನಡೆಯುತ್ತಿರುವ ಅಪಘಾತಗಳಿಗೆ ಸಾಕ್ಷಿಯಾಗಿವೆ. ಆದರೆ ಈ ಅಧಿಕಾರಿಗಳು ಅಕಾಲಿಕ ಮಳೆ ಯಿಂದಾಗಿರುವ ಗುಂಡಿಗಳನ್ನು ತಾತ್ಕಾಲಿಕ ವಾಗಿಯಾದರೂ ಮುಚ್ಚಲು ಪ್ರಯತ್ನ ಏಕೆ ಮಾಡುತ್ತಿಲ್ಲ ಏಕೆ ಸರ್ಕಾರ ಇವರಿಗೆ ಅನುದಾನ ನೀಡುತ್ತೀಲ್ಲ ಎಂಬುದು ಸಾರ್ವಜನಿಕರ ಎಕ್ಸೇ ಪ್ರಶ್ನೆ ಆಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು