ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರಾಧಿಕಾಗೆ – ಅದ್ದೂರಿ ಸ್ವಾಗತ.

ನರೇಗಲ್ ನ.18

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಕುಸ್ತಿ ಕ್ರೀಡಾಪಟು ರಾಧಿಕಾ ತೊಂಡಿಹಾಳ ಇವರು ಚಿಕ್ಕೋಡಿ ತಾಲ್ಲೂಕಿನ ನಾಗರ ಮುನವಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಮಹಿಳಾ ಕುಸ್ತಿ ಪದ್ಯಾವಳಿಯಲ್ಲಿ ಗೆದ್ದು 1.5 ಕೆಜಿ ಬೆಳ್ಳಿಗದೆ ಹಾಗೂ 70 ಸಾವಿರ ನಗದು ಬಹುಮಾನ ಪಡೆದು ಜಯ ಶಾಲಿಯಾದರು. ಸತತ 3 ವರ್ಷಗಳಿಂದ ಪ್ರಶಸ್ತಿ ಯೊಂದಿಗೆ ಕುಸ್ತಿ ಕ್ರೀಡಾಪಟು ರಾಧಿಕಾ ತೊಂಡಿಹಾಳ ನರೇಗಲ್ ಬಸ್‌ ನಿಲ್ದಾಣಕ್ಕೆ ಆಗಮಿಸಿದಾಗ ಸ್ಥಳೀಯ ವೀರಶೈವ ಲಿಂಗಾಯತ ಪಂಚಮಸಾಲಿ ಸೇವಾ ಸಂಘದ ಅಧ್ಯಕ್ಷ ಮುತ್ತಣ್ಣ ಪಲ್ಲೇದ ಹಾಗೂ ವೈದ್ಯ ಡಾ, ಕೆ.ಬಿ ಧನ್ನೂ ಸೇರಿದಂತೆ ಕ್ರೀಡಾಭಿಮಾನಿಗಳು, ಮಹಿಳೆಯರು ಹೂಮಾಲೆ ಹಾಕಿ, ಆರತಿ ಬೆಳಗಿ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಊರಿನ ಗಣಪತಿ ದೇವಸ್ಥಾನದ ವರೆಗೆ ಕರೆ ತಂದರು. ನಂತರ ಸಮಾಜದ ಮುಖಂಡರು, ಮಹಿಳೆಯರು ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಮುತ್ತಣ್ಣ ಪಲ್ಲೆದ, ಮಹಿಳೆಯರಿಗೆ ಪ್ರೋತ್ಸಾಹ ನೀಡಿದರೆ. ಅವರು ಸಹ ತಮ್ಮಲ್ಲಿನ ಸಾಮರ್ಥ್ಯದ ಪ್ರಕಾರ ಯಾವುದೇ ಕ್ಷೇತ್ರದಲ್ಲಾದರು ಸಾಧನೆ ಮಾಡುತ್ತಾರೆ. ಅದೇ ರೀತಿ ಕುಸ್ತಿಪಟು ರಾಧಿಕಾ ನಮ್ಮೂರಿಗೆ ಹಿರಿಮೆ ತರುವ ಕೆಲಸ ಮಾಡಿದ್ದಾರೆ ಎಂದರು. ಜ್ಯೋತಿ ಪಾಯಪ್ಪಗೌಡ್ರ, ಐಶ್ವರ್ಯ ಪಲ್ಲೇದ, ಬಿ.ಕೆ ಪಾಟೀಲ, ದ್ಯಾಮಪ್ಪ ಗೌಳಿ, ಶಶಿಧರ ಸಂಕನಗೌಡ್ರ, ಕಲ್ಮೇಶ ತೊಂಡಿಹಾಳ, ನಿಂಗಪ್ಪ ಕಣವಿ, ಸಿದ್ಪಪ್ಪ ನರಗುಂದ, ಶಾಂತಪ್ಪ ಚಿಕ್ಕೊಪ್ಪದ, ಎಸ್. ಬಿ. ಬೆಟಗೇರಿ, ಬಿ. ಬಿ. ಕುರಿ, ಈರಪ್ಪ ಹುಯಿಲಗೋಳ, ಕಸ್ತೂರಿ ಧನ್ನೂರ, ರಾಜೇಶ್ವರಿ ತೊಂಡಿಹಾಳ, ಸುಜಾತಾ ಹಳ್ಳಿ, ಸೀಮಾ ಕೊಂಡಿ, ರೇಣುಕಾ ತೊಂಡಿಹಾಳ, ಬಸವರಾಜ ಮಾಳವಾಡ, ಎಂ. ಕೆ. ಬೇವಿನಕಟ್ಟಿ ಇದ್ದರು.ಚಿಕ್ಕೋಡಿಯಲ್ಲಿ ನಡೆದ ಮಹಿಳಾ ಕುಸ್ತಿ ಪದ್ಯಾವಳಿಯಲ್ಲಿ ಗೆದ್ದು ಬಂದ ನರೇಗಲ್ ಪಟ್ಟಣದ ಕುಸ್ತಿ ಕ್ರೀಡಾಪಟು ರಾಧಿಕಾ ತೊಂಡಿಹಾಳ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರುಚಿಕ್ಕೋಡಿಯಲ್ಲಿ ನಡೆದ ಮಹಿಳಾ ಕುಸ್ತಿ ಪದ್ಯಾವಳಿಯಲ್ಲಿ ಗೆದ್ದು ಬಂದ ನರೇಗಲ್ ಪಟ್ಟಣದ ಕುಸ್ತಿ ಕ್ರೀಡಾಪಟು ರಾಧಿಕಾ ತೊಂಡಿಹಾಳ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್. ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button