ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ – ಬಿಜೆಪಿ ಮುಖಂಡರು.

ಮಾನ್ವಿ ನ.20

ಪಟ್ಟಣ ದಿಂದ ತಹಸೀಲ್ದಾರ್ ಕಚೇರಿವರೆಗೂ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಒಂದು ಕೋಟಿ ವೆಚ್ಚದ ಕಾಮಗಾರಿ ವಿವಾದಾತ್ಮ ಕವಾಗಿದ್ದು, ಮಾಜಿ ಶಾಸಕ ಗಂಗಾಧರನಾಯಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮಾನ್ವಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.

ಲೋಕೋಪಯೋಗಿ ಇಲಾಖೆಯ ಎ.ಇ.ಇ ಸಾಮುವೇಲಪ್ಪ ವಿರುದ್ಧ ಹಾಗೂ ಶಾಸಕ ಹಂಪಯ್ಯ ನಾಯಕ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುಡುಗಿದರು.

ಒಟ್ಟಾರೆಯಾಗಿ ನೋಡಿದರೆ ಮಾನ್ವಿ ಪಟ್ಟಣದ ಬಸವ ವೃತ್ತದಿಂದ ನಡೆಯುತ್ತಿರುವ ಕಾಮಗಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜಿದ್ದಾ ಜಿದ್ದಿ ಪೈಪೋಟಿ ನಡುವೆ ಕಾಮಗಾರಿ ನಡೆಯುತ್ತಿದೆ.

ಎ.ಇ.ಇ ಸಾಮುವೇಲಪ್ಪ ಮಾತ್ರ ನಮಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದು. ಎ.ಇ.ಇ ಸಾಮುವೇಲಪ್ಪ ಅವರ ಕುಮ್ಮಕ್ಕಿನಿಂದ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವ ದಂಧೆ ಇದು ಎಂದು ಬಿಜೆಪಿ ಮುಖಂಡರು ಸರಕಾರದ ವಿರುದ್ಧ ಗುಡುಗಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button