ಭೂ ಸುಧಾರಣಾ ಕಾಯ್ದೆ ಸಮರ್ಪಕ ಜಾರಿಗೆ ಒತ್ತಾಯಿಸಿ – ಕಾಮ್ರೇಡ್ ಬಳಗದಿಂದ ಪ್ರತಿಭಟನೆ.
ಮಾನ್ವಿ ನ.20

ತಾಲೂಕಿನ ಕುರ್ಡಿ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭೂ ಹೀನರು ಹತ್ತಾರು ವರ್ಷಗಳಿಂದ ಉಳುಮೆ ಮಾಡುತ್ತ ಬಂದಿದ್ದು, ಕೂಡಲೆ ಪಟ್ಟಾ ನೋಂದಣಿ ಮಾಡಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘಟನೆ ಪದಾಧಿಕಾರಿಗಳು ಮಾನ್ವಿಯಲ್ಲಿ ಪ್ರತಿಭಟನೆ ನಡೆಸಿದರು.

ಸಿರವಾರ ತಾಲೂಕಿನ ಕೆ.ಗುಡದಿನ್ನಿ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ಭೂಮಿ ಹಾಗೂ ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದರು ಪ್ರಯೋಜನ ಇಲ್ಲವಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಸರಕಾರದ ಭೂಮಿ ಬಡವರಿಗೋ ಅಥವಾ ಶ್ರೀಮಂತರಿಗೋ ಎಂಬುದು ಸರಕಾರವೇ ತಿಳಿಸಬೇಕಾಗಿದೆ. ರಾಜ್ಯ ಸರಕಾರ ನಮ್ಮ ಹೋರಾಟವನ್ನು ಪರಿಗಣಿಸಿ ಕೂಡಲೇ ಭೂಮಿ ಮಂಜೂರು ಮಾಡುವ ಕೆಲಸ ಮಾಡಬೇಕು ಇಲ್ಲದಿದ್ದರೆ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಕಾಮ್ರೇಡ್ ಬಳಗದವರು ಎಚ್ಚರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ