ಜೀವನವು ಭಗವಂತನೆಡೆಗ ಸಾಗುವ ಒಂದು ಯಾತ್ರೆ – ಮಲ್ಲಿಕಾರ್ಜುನ ಶ್ರೀ.
ಗದಗ ನ.21
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ನಮ್ಮ ಜೀವನವು ಭಗವಂತನೆಡೆಗೆ ಸಾಗುವ ಒಂದು ಯಾತ್ರೆ ಯಾಗಿದೆ. ಹೀಗೆ ಸಾಗುವ ದಾರಿಯಲ್ಲಿ ಅನೇಕ ಕಲ್ಲು, ಮುಳ್ಳುಗಳು, ಎಡರು, ತೊಡರುಗಳು ಎದಿರಾಗುತ್ತವೆ. ಇವುಗಳನ್ನೆಲ್ಲ ದಾಟಿ ನಾವು ಗುರಿಯನ್ನು ತಲುಪಬೇಕಾದರೆ ಸಂಸ್ಕಾರವೆಂಬ ಸಂಸ್ಕೃತಿ ನಮ್ಮದಾಗಬೇಕು. ನಾವು ಸುಸಂಸ್ಕೃತರಾಗಲು ಪುರಾಣ ಪ್ರವಚನಗಳು ಸಹಾಯ ಮಾಡುತ್ತವೆ. ಅದಕ್ಕಾಗಿ ಅವುಗಳನ್ನು ಆಲಿಸಲು ನೀವು ಮಠಗಳೆಡೆಗೆ ಬರಬೇಕು ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ನರೇಗಲ್ಲ ಹಿರೇಮಠ ಜಾತ್ರಾ ಮಹೋತ್ಸವದ ನಾಲ್ಕನೆ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭಗವಂತನ ಸಮೀಪಕ್ಕೆ ಹಾಗೇ ಹೋಗಲು ಸಾಧ್ಯವಿಲ್ಲ. ಅದಕ್ಕೆ ಪುಣ್ಯದ ಗಂಟು ಬೇಕಾಗುತ್ತದೆ. ಆ ಗಂಟನ್ನು ನಾವು ನಮ್ಮ ಬದುಕಿನುದ್ದಕ್ಕೂ ಕಟ್ಟಿಕೊಂಡು ಹೋಗ ಬೇಕಾಗುತ್ತದೆ. ಈ ಪುಣ್ಯದ ಗಂಟಿನ ಸಾಧನೆಗೆ ನಾವುಗಳು ದಾನ, ಧರ್ಮ ಮುಂತಾದವುಗಳನ್ನು ಮಾಡಬೇಕು. ಪರೋಪಕಾತರಾರ್ಥಂ ಇದಂ ಶರೀರಂ ಎನ್ನುವುದುನ್ನ ನಾವುಗಳೆಲ್ಲರೂ ಕೇಳಿದ್ದೇವೆ. ನಮಗಾಗಿ ನಾವು ಬದುಕದೆ ಇತರರಿಗಾಗಿಯೂ ಬದುಕುವನ್ನು ಕಲಿಯಬೇಕು. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಹಾನಗಲ್ಲ ಗುರು ಕುಮಾರೇಶ್ವರರು. ಅವರ ಪುರಾಣವನ್ನು ನಿತ್ಯವೂ ಆಲಿಸುತ್ತಿರುವ ನೀವುಗಳೇ ಧನ್ಯರು ಎಂದು ಶ್ರೀಗಳು ಹೇಳಿದರು.ಪುರಾಣಿಕರಾದ ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ ಅನ್ಯ ಧರ್ಮವನ್ನು ಸಹಿಸಿಕೊಂಡು, ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಿ ಉಳಿಸಿ ಕೊಂಡು ಹೋಗುವುದೇ ನಿಜವಾದ ಧರ್ಮ. ಗುರುವಿಗೆ ಸಂಪೂರ್ಣವಾಗಿ ಶರಣಾದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ. ಸಮಾಜ ದೊಂದಿಗೆ ಅನ್ಯೋನ್ಯವಾಗಿ ಬೆರೆತು ಎಲ್ಲರೂ ನಮ್ಮವರೆ ಎಂಬ ಭಾವನೆಯಿಂದ ಬದುಕು ಸಾಗಿಸಬೇಕು. ಇದನ್ನು ಸಾಧಿಸಿ ತೋರಿದವರು ಶ್ರೀ ಗುರು ಕುಮಾರೇಶ್ವರರು. ಅವರ ಜೀವನವೇ ನಮಗೊಂದು ದಾರಿದೀಪ. ಅವರು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿ ಕೊಂಡ ಮಹಾ ಮಹಿಮರು ಎಂದರು. ಗುರುವಿನ ಆದೇಶ ಪರಿ ಪಾಲನೆ ಮಾಡುವುದೇ ನಿಜವಾದ ಧರ್ಮ. ಸದ್ಗುಣಗಳ ಹಿಂದೆ ನಡೆದರೆ ನಮಗೂ ಸದ್ಗುಣಗಳು ಬರುತ್ತವೆ. ಮನೆಯಲ್ಲಿ ನೀವುಗಳು ಸಂಸ್ಕಾರದ ವಾತಾವರಣವನ್ನು ಬಿತ್ತಿದರೆ ನಿಮ್ಮ ಇಡೀ ವಂಶವೇ ಸದ್ಗುಣ ಸಂಪನ್ನಗಳ ಆಗರವಾಗುತ್ತದೆ. ಅದಕ್ಕಾಗಿ ಶ್ರೀ ಗುರು ಕುಮಾರೇಶ್ವರರ ಪುರಾಣವು ನಿಮಗೆ ಮಾರ್ಗದರ್ಶನ ಮಾಡುತ್ತದೆ ಎಂದರು. ಅತಿಥಿಗಳಾಗಿ ಪಾಲ್ಗೊಂಡ ಅಬ್ಬಿಗೇರಿ ಗ್ರಾಮದ ಬಸವರಾಜ ವೀರಾಪೂರ, ಸಿದ್ದಯ್ಯ ಅರಳೆಲಿಮಠ, ಅಂದಪ್ಪ ವೀರಾಪೂರ, ಹಾಗೂ ಕೋಡಿಕೊಪ್ಪ ಗ್ರಾಮದ ಬಸವಣ್ಯಪ್ಪ ನಾಸಿಪೂಡಿ ದಂಪತಿಗಳು ಉಪಸ್ತಿತರಿದ್ದರು. ನಿಡಗುಂದಿ ಗ್ರಾಮದ ಪತ್ರಿವನ ಮಠದ ಮಹಿಳಾ ಮಂಡಳ ಬಳಗದವರು ಕುಮಾರೇಶ್ವರ ನಾಮಾವಳಿ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್: ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ