ಅಪಘಾತ ತಡೆಯಲು ವಾಹನಗಳಿಗೆ ರೇಡಿಯಂ ಅಳವಡಿಕೆ – ಪೋಲಿಸ್ ಅಧಿಕಾರಿಗಳಿಂದ ಸಾರ್ವಜನಿಕರಲ್ಲಿ ಜಾಗೃತಿ.
ನರೇಗಲ್ ನ.22
ಇತ್ತೀಚಿನ ದಿನಗಳಲ್ಲಿ ಪಟ್ಟಣದ ಹೋಬಳಿಯ ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ಸ್ವತಃ ವಿಶೇಷ ಕಾರ್ಯಾಚರಣೆ ಕೈಗೊಂಡು ಟ್ರ್ಯಾಕ್ಟರ್, ಟಾಟಾ ಎಸಿ, ಟಾಟಾ ಕಾರ್ಗೋ, ಎತ್ತಿನಬಂಡಿ. ರಾಶಿ ಮಿಷನ್ ಸೇರಿದಂತೆ ಇನ್ನೂ ಅನೇಕ ವಾಹನಗಳಿಗೆ ಮುಂಭಾಗ, ಹಿಂಭಾಗ, ಅಕ್ಕ ಪಕ್ಕದಲ್ಲಿ ಹೊಳೆಯುವ ರೇಡಿಯಂ ಅಂಟಿಸುವ ಮೂಲಕ ಹಾಗೂ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಯಿತು.ಗದಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಈ ಕಾರ್ಯವನ್ನು ನರೇಗಲ್ಲ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸಾರ್ವಜನಿಕರಲ್ಲಿ ನರೇಗಲ್ಲ, ನಿಡಗುಂದಿ, ಬೂದಿಹಾಳದಲ್ಲಿ ಜಾಗೃತಿ ಮೂಡಿಸಿದರು.
ರಾತ್ರಿ ಹೊತ್ತು ಅಪಘಾತಗಳು ಹೆಚ್ಚು ಸಂಭವಿಸದಂತೆ ಮುಂದೆ ಹೋಗುವ ವಾಹನಗಳಿಗೆ ಹಿಂದೆ ಬರುವ ವಾಹನಗಳ ಲೈಟಿನ ಬೆಳಕಿಗೆ ರೇಡಿಯಂ ಬೆಳಕಿನಿಂದ ಹೊಳೆಯುತ್ತದೆ ಇದರಿಂದ ಮುಂದೆ ವಾಹನ ಇದೆ ನಾವು ಸಾವಕಾಶವಾಗಿ ಚಲಿಸಬೇಕು ಎಂಬುವುದು ಅರಿವಾಗುತ್ತದೆ ಇದರಿಂದ ರಸ್ತೆ ವಾಹನ ಅಪಘಾತಗಳನ್ನು ತಡೆಗಟ್ಟಬಹುದು ಎಂಬುವುದೇ ಈ ರಸ್ತೆ ಸಂಚಾರಿ ಸುರಕ್ಷತೆಯ ಉದ್ದೇಶವಾಗಿದೆ ಎಲ್ಲಾ ವಾಹನ ಚಾಲಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸ ಬೇಕು ಎಂದು ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ತಿಳಿಸಿದರು. ಈ ವೇಳೆ ಹವಾಲ್ದಾರ್ ಎಮ್.ಎನ್. ಮಾಟರಂಗಿ, ಕ್ರೈಂ ಬ್ರಾಂಚ್‌ನ ಕಿರಣಕುಮಾರ ಹಿರೇಮಠ, ರವಿ ರುದ್ರಾಕ್ಷಿ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ.