ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ – ಪದಾಧಿಕಾರಿಗಳ ರಚನಾ ಸಭೆ.
ರೋಣ ನ.23





ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ತಾಲೂಕು ಘಟಕದ ಪದಾಧಿಕಾರಿಗಳ ರಚನಾ ಸಭೆ ನಡೆಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕ ಆರ್.ಮೋಹನರಾಜ್ ಸಭೆಯನ್ನುದ್ದೇಶಿಸಿ ಮಾತನಾಡಿದರು.ತಾಲೂಕು ಸಂಚಾಲಕರಾಗಿ ಯಲ್ಲಪ್ಪ ಹಿರೇಮನಿ, ಸಂಘಟನಾ ಸಂಚಾಲಕರಾಗಿ ಶರಣಪ್ಪ ಮಾದರ, ಪ್ರಕಾಶ ಮಾದರ, ಸದಾನಂದ ಬಾರಿಗಿಡದ,ಮಂಜುನಾಥ ಮಾದರ, ಖಜಾಂಚಿಯಾಗಿ ಶಿವಾನಂದ ಪೂಜಾರ, ಸಲಹಾ ಸಮಿತಿಯ ಸದಸ್ಯರಾಗಿ ಕುಮಾರ ಮಾದರ, ಸಾಬಣ್ಣ ಮಾದರ, ಅಯ್ಯಪ್ಪ ದಂಡಿನ, ಮುದಕಪ್ಪ ಪೂಜಾರ, ಶಿವಕುಮಾರ ಮಾದರ, ದುರಗಪ್ಪ ಮಾದರ ಅವರನ್ನು ಆಯ್ಕೆ ಮಾಡಲಾಯಿತು.ಇನ್ನೂ ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ಯುವಕರು ಹಾಜರಿದ್ದರು.