ಕನ್ನಡ ತಾಯಿ ಭುವನೇಶ್ವರಿ ದೇವಿಗೆ ನುಡಿ ನೈವೇದ್ಯ – ಕುಮಾರಿ.ಹಾರಿಕಾ. ಮಂಜುನಾಥ್.
ಕೋಗಳಿ ನ.24

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಶನಿವಾರ ದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಯೋಗಿರಾಜೇಂದ್ರ ಶ್ರೀಗಳು ಗರ್ಭಿಣಿ ಸ್ತ್ರೀಯರಿಗೆ ಉಡಿ ತುಂಬುವ ಕಾರ್ಯದಲ್ಲಿ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜವನ್ನ ನಿರ್ಮಾಣ ಮಾಡಲು ಮಕ್ಕಳನ್ನ ಕೊಡುಗೆಯಾಗಿ ನೀಡಿರಿ ಎಂದು ಆಶೀರ್ವಾಚನ ನೀಡಿದರು. ಕುಮಾರಿ ಹಾರಿಕಾ ಮಂಜುನಾಥ್ ಅವರು ಕನ್ನಡ ತಾಯಿ ಭುವನೇಶ್ವರಿ ದೇವಿಗೆ ನುಡಿ ನೈವೇದ್ಯ ಎಂಬ ವಿಷಯ ಕುರಿತು ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ, ಕೋಗಳಿಯ ಇತಿಹಾಸದಲ್ಲಿ ಬರುವ ಜೈನ ಮುನಿಗಳ ಬಗ್ಗೆ ಮತ್ತು ರಾಮಾಯಣ ಕಥೆಯ ಪಾತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿ ಕಣ್ಣು ಕಟ್ಟುವ ರೀತಿಯಲ್ಲಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೆ.ಎಂ ವೀರಸಂಗಯ್ಯ ನವರಿಗೆ ಮತ್ತು ಕಲಾವಿದ ಕೋಗಳಿ ಕೊಟ್ರೇಶ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಸಂಗಯ್ಯನವರು ಪ್ರಸ್ತುತ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ನಾಲ್ಕು ದಶಕಗಳ ಕಾಲ ಹೋರಾಡಿದ ರೈತ ಪರವಾದ ಹೋರಾಟದ ದಿನಗಳನ್ನು ಕುರಿತು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಉಪಾಧ್ಯಕ್ಷರಾದ ಐ ದಾರುಕೇಶ್, ಕೊಟ್ಟೂರು ಪ.ಪಂ ಉಪಾಧ್ಯಕ್ಷರಾದ ಸಿದ್ದಯ್ಯ ಸ್ವಾಮಿ, ಕೋಗಳಿ ಸಹಕಾರ ಸಂಘದ ಅಧ್ಯಕ್ಷ ಹೇಮಗಿರಿ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ರೇಣುಕಮ್ಮ, ಕನ್ನಡ ಉಪನ್ಯಾಸಕ ಪದ್ಮಣ್ಣ, ಕೆ ನಿಜಗುಣ, ಎನ್ ರಾಜಣ್ಣ, ಶೆಟ್ರು ಪಂಪಣ್ಣ, ಮರುಳಸಿದ್ದಯ್ಯ, ಎಂ. ಮಲ್ಲಿಕಾರ್ಜುನ, ಕಂಬಿ ಕೊಟ್ರಪ್ಪ, ಕುರುಬರ ಸಿದ್ದೇಶ್, ಸುದೇಶ, ಉಮೇಶ,ಚಂದ್ರಧರ, ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವೀರಭದ್ರ ಶೆಟ್ಟರ್ ಪ್ರಾರ್ಥನೆ ಹಾಡಿದರು, ಕವಿತಾ ಕುಮಾರ ಸ್ವಾಮಿ ನಿರೂಪಿಸಿದರು, ವಿ.ರವಿ ಸ್ವಾಗತಿಸಿದರು. ಕೆ.ರಾಜು ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು