“ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ ಆರ್ಯವರ್ಧನ್” ಕೋಟಿಗೆ ಈಗ – “ಕರುನಾಡ ಸಿರಿ” ಪ್ರಶಸ್ತಿ.
ರೋಣ ನ.25

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನ್ನುವಂತೆ ಈ 4 ವರ್ಷದ ಪೋರ “ಆರ್ಯವರ್ದನ್ ಕೋಟಿ” ಇವನ ಅತ್ಯದ್ಭುತ ಜ್ಞಾಪಕ ಶಕ್ತಿಯನ್ನು ಮೆಚ್ಚಿ ಇಂಡಿಯಾ ಬುಕ್ ಆಫ್ ರೇಕಾರ್ಡನವರು ಇಂಡಿಯಾ ಬುಕ್ ಆಫ್ ರೇಕಾರ್ಡ್ ಪುಸ್ತಕದಲ್ಲಿ ಹೆಸರನ್ನು ದಾಖಲಿಸಿ ಕೊಂಡಿದ್ದು, ಇದರ ಜೊತೆಗೆ ವರ್ಲ್ಡ್ ಯೂನಿವರ್ಸಿಟಿ ಯಿಂದ “ಗ್ರ್ಯಾಂಡ್ ಮಾಸ್ಟರ್” ಎಂದು ಅವಾರ್ಡ್ ಪಡೆದು ರಾಜ್ಯದ ಜನರ ಗಮನ ಸೆಳೆದು ಸಾಧನೆ ಮಾಡಿದ್ದಾನೆ. ತಾಲೂಕಿನ ಹೊಳೆ ಆಲೂರು ಗ್ರಾಮದವರಾದ ಕನ್ನಡ ಭಾಷಾ ಶಿಕ್ಷಕಿ ಮಂಜುಳಾ ಒಣರೊಟ್ಟಿ ಹಾಗೂ ಪ್ರಕಾಶ ಕೋಟಿ ಅವರ ಸುಪುತ್ರ ಆರ್ಯವರ್ಧನ್ ಕೋಟಿ ಎಂಬ ಬಾಲಕನು ನವಲಗುಂದ ಶ್ರೀ ಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ವಿಭಾಗದಲ್ಲಿ ಓದುತ್ತಿದ್ದು, ಈ ಪೋರನ ಸಾಧನೆಯನ್ನು ಗುರುತಿಸಿ, ರಾಣಿಬೆನ್ನೂರಿನಲ್ಲಿ 69 ನೇ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ “ಕರುನಾಡು ಸಿರಿ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಕರ್ನಾಟಕದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳ ಹೆಸರುಗಳನ್ನು ಎಂ.ಎಲ್.ಎ ಕ್ಷೇತ್ರಗಳು ಕೇವಲ ನಾಲ್ಕು ವರ್ಷದ ಪುಟ್ಟ ಪೊರನಿಂದ. ನರೇಂದ್ರ ಮೋದಿಜಿ ಅವರ ಕ್ಯಾಬಿನೆಟ್ ಸಚಿವರ ಹೆಸರು ಮತ್ತು ಖಾತೆ, ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಮಂತ್ರಿಗಳ ಹೆಸರು ಮತ್ತು ಖಾತೆ. ಕರ್ನಾಟಕದ ಮುಖ್ಯಮಂತ್ರಿಗಳ ಹೆಸರು ಅನುಕ್ರಮವಾಗಿ 1947 ರಿಂದ 2024 ರ ವರೆಗೆ. ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳು,1947 ರಿಂದ 2024 ರ ವರೆಗೆ. ಜ್ಞಾನಪೀಠ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ, ನೋಬೆಲ್ ಪ್ರಶಸ್ತಿ, ಕರ್ನಾಟಕದ ಎಲ್ಲಾ ಜಿಲ್ಲೆಗಳು ಭಾರತದ 29 ರಾಜ್ಯಗಳು ಮತ್ತು ರಾಜಧಾನಿಗಳ ಹೆಸರು.

ಭಾರತ ಸೇನಾ ಪ್ರಶಸ್ತಿಗಳು, ಭಗವದ್ಗೀತೆ 18 ಅಧ್ಯಾಯಗಳು, ಪುರ 18 ಪುರಾಣಗಳು, 27 ನಕ್ಷತ್ರಗಳು, 15 ತಿಥಿಗಳು, ಮಣ್ಣಿನ ಪ್ರಕಾರಗಳು, ಭೂಕಂಪನ ದಾಖಲಾತಿ ಕೇಂದ್ರಗಳು ಕಲ್ಲಿದ್ದಲಿನ ವಿಧಗಳು, ವೇದಗಳು ಭಾರತದೊಂದಿಗೆ ಗಡಿ ಹಂಚಿ ಕೊಂಡ ರಾಷ್ಟ್ರಗಳು ರೈಲ್ವೆ ಗೇಜ್ಗಳು ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳು, ಕರ್ನಾಟಕ ದಲ್ಲಿರುವ ಪೊಲೀಸ್ ವಲಯಗಳು, ಕರ್ನಾಟಕ ಜಿಲ್ಲೆಗಳ ವಿಶೇಷ ಹೆಸರುಗಳು, ಕರ್ನಾಟಕ ಏಕೀಕರಣ ಮಹತ್ವವಾದ ಮಾಹಿತಿಗಳು, ಕರ್ನಾಟಕದೊಂದಿಗೆ ಗಡಿ ಹಂಚಿ ಕೊಂಡ ಜಿಲ್ಲೆಗಳು, ಜಿ ಸೆವೆನ್ ರಾಷ್ಟ್ರಗಳು, ಡಾ, ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿರುವ 31 ಚಲನ ಚಿತ್ರಗಳು ಡಾಕ್ಟರ್, ರಾಜಕುಮಾರ್ ನಟಿಸಿರುವ 206 ಚಲನ ಚಿತ್ರಗಳ ಹೆಸರುಗಳು, ದೇಶದ ಕರೆನ್ಸಿ, ಅಯೋಧ್ಯೆ ರಾಮ ಮಂದಿರ, ಸಾಮಾಜಿಕ ಜಾಲತಾಣ ಪಿತಾಮಹರು, ವಚನಕಾರರ ಅಂಕಿತನಾಮ, ಸ್ವತಂತ್ರ ಹೋರಾಟಗಾರರು ಘೋಷ ವಾಕ್ಯಗಳು, ರಾಷ್ಟ್ರೀಯ ಲಾಂಛನ, ಪ್ರಪ್ರಥಮ ಮಹಿಳಾ ಸಾಧಕೀಯರು, ಕವಿಗಳ ಬಿರುದುಗಳು, ವಿವಿಧ ರಾಷ್ಟ್ರೀಯ ಹೂಗಳು, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರುಗಳು, ಸಮ್ ಇಂಪಾರ್ಟೆಂಟ್ ಫುಲ್ ಫಾರ್ಮ್ಸ್ ರಾಜ್ಯ ವಿಶೇಷಗಳು, ಗ್ರಹಗಳು ಖಂಡಗಳು ಮೇಲಿನ ಇವೆಲ್ಲವನ್ನೂ ಕುರಿತು 2500 ಕ್ಕೂ ಹೆಚ್ಚು ಜಿ.ಕೆ ಪ್ರಶ್ನೆಗಳಿಗೆ ಪಟ ಪಟನೆ ಉತ್ತರಿಸುತ್ತಾನೆ ಈ ಪೋರ. ಆರ್ಯವರ್ಧನ್ ಕೋಟಿ ಈ ಪೋರನ ಜ್ಞಾಪಕ ಶಕ್ತಿ ಹಾಗೂ ಅವನ ಬುದ್ದಿವಂತಿಕೆಯನ್ನು ಪರೀಕ್ಷಿಸಲು ARYAVARDHAN KOTI YOUTUBE CHANNEL ನ್ನು ವಿಕ್ಷೀಸಿ.
ಬಾಕ್ಸ್:-
ಈತನ ಅತ್ಯದ್ಭುತ ಜ್ಞಾಪಕ ಶಕ್ತಿಯನ್ನು ಮೆಚ್ಚಿ ಇಂಡಿಯಾ ಬುಕ್ ಆಪ್ ರೆಕಾರ್ಡ್’ನವರು ಇಂಡಿಯಾ ಬುಕ್ ಆಪ್ ರೆಕಾರ್ಡ್ ಪುಸ್ತಕದಲ್ಲಿ ಹೆಸರನ್ನ ದಾಖಲಿಸಿದ್ದಾರೆ. ಇದರ ಜೊತೆಗೆ ವರ್ಲ್ಡ್ ರೇಕಾರ್ಡ ಯುನಿವರ್ಸಿಟಿಯವರು “ಗ್ರ್ಯಾಂಡ್ ಮಾಸ್ಟರ್” ಎಂಬ ಅವಾರ್ಡನ್ನು ನೀಡಿದ್ದಾರೆ. ಜೊತೆಗೆ ನನ್ನ ಮಗನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು,ಗಣ್ಯ ವ್ಯಕ್ತಿಗಳು ಇವರ ಪ್ರತಿಭೆ ಗುರುತಿ ಸನ್ಮಾನಿಸಿ ಸತ್ಕರಿಸಿವೆ. ಮುಂದೆಯೂ ದೊಡ್ಡ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದ್ದಾರೆ. -ಪೋಷಕರು ಮಂಜುಳಾ ಒಣರೊಟ್ಟಿ ಹಾಗೂ ಪ್ರಕಾಶ ಕೋಟಿ.
ಬಾಕ್ಸ್:-
ಆರ್ಯವರ್ದನ ಕೋಟಿ ಎಂಬ ಮಹಾನ್ ಬಾಲಕ ಉತ್ತಮವಾದ ಬೌದ್ಧಿಕ ಪ್ರೌಢಿಮೆಯನ್ನು ಹೊಂದಿದ್ದಾನೆ. ಅನೇಕ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಇಂದಿನ ಯುವ ಜನತೆ ನಾಚಿಸುವಂತಹ ಬುದ್ಧಿ ಶಕ್ತಿಯನ್ನು ಹೊಂದಿದ್ದಾನೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ಇಂಥ ಜ್ಞಾನ ಹೊಂದಿರುವುದು ನಿಜಕ್ಕೂ ಅದ್ಭುತ. ಇಂತಹ ಮಗುವಿಗೆ ಜನ್ಮ ಕೊಟ್ಟ ತಂದೆ ತಾಯಿಗಳು ನಿಜಕ್ಕೂ ಭಾಗ್ಯ ಶಾಲಿಗಳು ಅವನಿಗೆ ಮುಂದಿನ ದಿನ ಮಾನಗಳಲ್ಲಿ ಉತ್ತಮವಾದ ಸ್ಥಾನ ಮಾನಗಳು ಸಿಗಲಿ ಎಂದು ಆಶಿಸುತ್ತೇವೆ.-ಎಸ್.ವಿ.ಸಂಕನಗೌಡ್ರಕೆ.ಎಸ್.ಎಸ್.ಕಾಲೇಜು ಉಪನ್ಯಾಸಕರು.
ಬಾಕ್ಸ್:-
ಗ್ರ್ಯಾಂಡ್ ಮಾಸ್ಟರ್ ಆರ್ಯವರ್ಧನ್ ಕೋಟಿ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಬುದ್ದಿ ಜಾಣತನ ದೇವರು ಕೊಟ್ಟ ವರ ಆಗಿದೆ. ಈ ಬಾಲಕನ ಸಾಧನೆಗೆ ತಂದೆ ತಾಯಿಯ ಪರಿಶ್ರಮ ಬಹಳ ಇದೆ. ಮುಂದೆಯೂ ದೊಡ್ಡ ಸಾಧನೆ ಮಾಡಬೇಕು ಎಂಬ ಗುರಿಯನ್ನು ಹೊಂದಿರುವ ಬಾಲಕನಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು. -ಸೋಮಯ್ಯ ದೊಡ್ಡಮನಿ – ನಿವೃತ್ತ ಕಾಲೇಜು ಉಪನ್ಯಾಸಕರು (ಧಾರವಾಡ ಆಕಾಶವಾಣಿ ಕಲಾವಿದರು)
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ