ಸರ್ಕಾರಿ ವಸತಿ ಗೃಹದ ಮುಂದೆ ತೆರೆದು ಬಿಟ್ಟಿರುವ ಕೊಳವೆ ಬಾವಿ – ಕಣ್ಣು ಮುಚ್ಚಿಕೊಂಡು ಕುಳಿತ ಅಧಿಕಾರಿಗಳು.
ರೋಣ ನ.26

ರಾಜ್ಯದಲ್ಲಿ ಈ ಹಿಂದೆ ಹಲವಾರು ಸಲ ಕೂರೆದ ಕೊಳವೆ ಬಾವಿಗೆ ಬಿದ್ದು ಸಣ್ಣ ಸಣ್ಣ ಮಕ್ಕಳು ಸತ್ತು ಬದುಕಿರುವ ಘಟನೆಗಳು ನಡೆದರು ಮೈ ಮರೆತು ಕುಳತಿರುವ ರೋಣ ತಾಲೂಕ ಮಟ್ಟದ ಅಧಿಕಾರಿಗಳು ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸರ್ಕಾರದ ವಸತಿ ಗೃಹದ ಮುಂದೆ ತೆರೆದು ಬಿಟ್ಟಿರುವ ಕೊಳವೆ ಬಾವಿ ಕಡೆ ಗಮನ ಹರಿಸದೆ ಕಣ್ಣು ಮುಚ್ಚಿಕೊಂಡು ಸುಮ್ಮನೆ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸರ್ಕಾರಿ ಅಧಿಕಾರಿಗಳು ದಿನ ನಿತ್ಯ ಅದರ ಮುಂದೆ ಹಾಯ್ದು ಹೊದರು ಯಾವುದೇ ಅಧಿಕಾರಿ ಆಗಲಿ ಹಾಗೂ ಜನ ಪ್ರತಿನಿಧಿಗಳು ಆಗಲಿ ಅಪಾಯದ ಅಂಚಿನಲ್ಲಿರುವ ಕೊಳವೆ ಬಾವಿ ಗುಂಡಿಯ ಕಡೆ ನೊಡದಿರುವುದು ದೊಡ್ಡ ದುರಂತವಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳುವಾಸ ಇರುವ ವಸತಿ ಗೃಹದ ನಿವಾಸದ ಮುಂದೆ ತಮ್ಮ ಸಣ್ಣ ಪುಟ್ಟ ಮಕ್ಕಳು ಹೊರಗೆ ಆಟ ಆಡಲು ಹೋದಾಗ ತೆರೆದು ಬಿಟ್ಟಿರುವ ಕೊಳವೆ ಬಾವಿ ಕಡೆ ಅಪಾಯ ಇರುತ್ತದೆ ಎಂದು ಆರಿವು ಇಲ್ಲದಂತೆ ಆಗಿರುವುದು ದೊಡ್ಡ ದುರಂತವೇ ಸರಿ.ತಾಲೂಕ ದಂಡಾಧಿಕಾರಿ ನಾಗರಾಜ.ಕೆ ಅವರ ವಸತಿ ಗೃಹ ಅಲ್ಲೇ ಇದ್ದರು. ಇತ್ತ ಕಡೆ ತಹಶೀಲ್ದಾರ ಗಮನ ಹರಿಸದೆ ಕ್ರಮ ಕೈಗೊಳ್ಳದಿರುವುದು ದೊಡ್ಡ ದುರಂತವಾಗಿದೆ ಎಂದು ಸಾರ್ವಜನಿಕರು ಮಾತನಾಡುವಂತೆ ಆಗಿರುತ್ತದೆ. ಹಳೆಯ ಕಾಲದ ಹಾಳು ಆಗಿರುವ ಕೊಳವೆ ಬಾವಿ ಮುಚ್ಚಿ ಹಾಕಲು ಸರ್ಕಾರದ ಆದೇಶ ನಿರ್ದೇಶನ ಇದ್ದರು ಕಂಡರೂ ಕಾಣದಂತೆ ಮೌನವಾಗಿರುವ ರೋಣ ತಾಲೂಕ ಮಟ್ಟದ ಅಧಿಕಾರಿಗಳು ಕಾಟಾಚಾರಕ್ಕೆ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರಿ ವಸತಿ ಗೃಹದ ಮುಂದೆ ತೆರೆದು ಬಿಟ್ಟಿರುವ ಕೊಳವೆ ಬಾವಿ ಮುಚ್ಚಲು ಅಧಿಕಾರಿಗಳು ಮುಂದಾಗ ಬೆಕ್ಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ. ಸಂಕನಗೌಡ್ರ ರೋಣ.