ನರೇಗಾ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ – ಸ್ವಚ್ಛತೆಗೆ ಆದ್ಯತೆ:ಇಂದು ಪ್ರಶಸ್ತಿಗೆ ಪ್ರಧಾನ.

ಹುನಗುಂದ ಅಕ್ಟೋಬರ್.1

ಸ್ವಚ್ಚ ಮತ್ತು ಪಾರದರ್ಶಕ ಆಡಳಿತ ಹಾಗೂ ಗ್ರಾಮ ನೈರ್ಮಲ್ಯಕ್ಕೆ ವಿಶೇಷ ಆಧ್ಯತೆಯನ್ನು ನೀಡಿ ರೈತರ,ಜನಸಾಮಾನ್ಯರಿಗೆ ಪಂಚಾಯತ ಇಲಾಖೆಯ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿ ಸೈ ಎನ್ನಿಸಿಕೊಂಡು ತಾಲೂಕಿನ ಗಂಜೀಹಾಳ ಗ್ರಾಮ ಪಂಚಾಯತಿಗೆ ಮಹಾತ್ಮ ಗಾಂಧಿ ಪುರಸ್ಕಾರದ ಗರಿಯು ಒಲಿದು ಬಂದಿದೆ.ಇದು ಗ್ರಾಮ ಪಂಚಾಯತಿಯ ಸಮಗ್ರ ಆಡಳಿತಕ್ಕೆ ಮತ್ತು ಗ್ರಾ.ಪಂ ಸದಸ್ಯರ ಪ್ರಾಮಾಣಿಕ ಆಡಳಿತ ಮತ್ತು ಪಿಡಿಓ ಹಾಗೂ ಸಿಬ್ಬಂದಿಗಳ ಕಾರ್ಯ ಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಅ.೨ ರಂದು ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದು ಕೊಡಮಾಡುವ ೨೦೨೨-೨೩ ನೆಯ ಸಾಲಿನ ಗಾಂಧಿ ಪುರಸ್ಕಾರಕ್ಕೆ ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮ ಪಂಚಾಯತಿ ಆಯ್ಕೆಯಾಗುವ ಮೂಲಕ ಸರ್ಕಾರ ಕೊಡಮಾಡುವ ಪ್ರಶಸ್ತಿ ಮತ್ತು ೫ ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದ್ದು. ಗ್ರಾ.ಪಂ ವ್ಯಾಪ್ತಿಯ ಗಂಜೀಹಾಳ ಮತ್ತು ನಂದನೂರ ಗ್ರಾಮದ ಸಾರ್ವಜನಿಕರಲ್ಲಿ ಹರ್ಷ ಮನೆಮಾಡಿದೆ.ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿಗದಿ ಪಡಿಸಿದ ಗುರಿ ಗಿಂತಲ್ಲೂ ಹೆಚ್ಚಿನ ಸಾಧನೆಯನ್ನು ಮಾಡಿದ್ದು.ನರೇಗಾ ಯೋಜನೆಯಲ್ಲಿ ಕಳೆದ ವರ್ಷ ೨೩೫೦೦ ಮಾನವ ದಿನಗಳನ್ನು ನಿಗದಿ ಗೊಳಿಸಿತ್ತು ಆದರೆ ೩೪ ಸಾವಿರಕ್ಕೂ ಅಧಿಕ ಮಾನವ ದಿನಗಳನ್ನು ಕೂಲಿ ಕಾರ್ಮಿಕರ ಬೇಡಿಕೆಗೆ ತಕ್ಕಂತೆ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸವನ್ನು ನೀಡುವ ಮೂಲಕ ಹೆಚ್ಚಿನ ಗುರಿ ಸಾಧಿಸಿದ ಕೀರ್ತಿ ಗಂಜೀಹಾಳ ಗ್ರಾ.ಪಂ ಸಲ್ಲುತ್ತದೆ.ಗಂಜೀಹಾಳ ಗ್ರಾ.ಪಂ ವ್ಯಾಪ್ತಿಯ ರೈತರ ಅನುಕೂಲಕ್ಕೆ ತಕ್ಕಂತೆ ೧೫ ಕ್ಕೂ ಹೆಚ್ಚು ದನ ಮತ್ತು ಕುರಿ ಶೆಡ್ಡಗಳನ್ನು ನಿರ್ಮಾಣ,ಗಂಜೀಹಾಳ ಹಿರಿಯ ಪ್ರಾಥಮಿಕ ಶಾಲೆಯ ಗಂಡು ಮಕ್ಕಳ ಮತ್ತು ಅಂಗವಿಕಲರಿಗೆ ಸರ್ವ ಸೌಲಭ್ಯಯುಳ್ಳ ಶೌಚಾಲಯಗಳ ನಿರ್ಮಾಣ,೩೫ ಕ್ಕೂ ಅಧಿಕ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರ ಜಮೀನನಲ್ಲಿ ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸ ಕಾರ್ಯವನ್ನು ಮಾಡಿದ್ದು ಪ್ರಶಸ್ತಿಗೆ ಪಡೆಯಲು ಸಹಕಾರಿಯಾಗಿದೆ.

ಕರ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ-ಗಂಜೀಹಾಳ ಗ್ರಾ.ಪಂ ವ್ಯಾಪ್ತಿ ಗಂಜೀಹಾಳ ಮತ್ತು ನಂದನೂರ ಗ್ರಾಮದ ಆಸ್ತಿ,ಖಾಲಿ ಜಾಗೆ,ನೀರಿನ ಕರ ಸೇರಿದಂತೆ ಅನೇಕ ಮೂಲದ ತೆರಿಗೆ ಸಂಗ್ರಹಣೆಯಲ್ಲಿ ಶೇ ೧೦೦ ಕ್ಕೆ ೮೦ ರಷ್ಟು ತೆರಿಗೆ ಸಂಗ್ರಹಿಸಿ ಸಾಧನೆ ಮಾಡಿದೆ.ಕರ ಸಂಗ್ರಹಣೆಯಲ್ಲಿ ಪಂಚಾಯತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕ ಕಾರ್ಯವನ್ನು ಮೆಚ್ಚುವಂತದ್ದು.ಸ್ವಚ್ಚತೆಗೆ ಆದ್ಯತೆ-ಸ್ವಚ್ಚ ಮತ್ತು ಸುಂದರ ಗ್ರಾಮವನ್ನಾಗಿಸಲು ಪಂಚಾಯತಿ ವ್ಯಾಪ್ತಿಯಲ್ಲಿ ನಿತ್ಯ ಎರಡು ಗ್ರಾಮಗಳ ಕಸ ವಿಲೇವಾರಿಗಾಗಿ ಪ್ರತಿಯೊಂದು ಮನೆಗಳಿಗೆ ಹಸಿ ಮತ್ತು ಒಣ ಕಸ ವಿಂಗಡಣೆಗೆ ಪ್ಲಾಸ್ಟಿಕ್ ಡಬ್ಬಿಗಳನ್ನು ನೀಡಿ ನಿತ್ಯ ಬೆಳಗ್ಗಿನ ಜಾವ ಗಾಡಿಯ ಮೂಲಕ ಅತ್ಯಂತ ಪಾರದರ್ಶಕವಾಗಿ ಕಸ ವಿಲೇವಾರಿಯನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ರೋಗ ರುಜೀನಗಳು ಬರದಂತೆ ಜಾಗೃತ ವಹಿಸುತ್ತಿರುವುದು ವಿಶೇಷ.ಅದರ ಜತೆಗೆ ಕುಡಿಯುವ ನೀರು ಮತ್ತು ಚರಂಡಿ ಹಾಗೂ ರಸ್ತೆ ನಿರ್ಮಿಸಿಲಾಗಿದೆ.೧೫ ನೆಯ ಹಣಕಾಸು ಸದ್ಭಳಕೆ-ಗಂಜೀಹಾಳ ಗ್ರಾ.ಪಂಯ ೧೫ನೆಯ ಹಣಕಾಸಿನಲ್ಲಿ ನಿಗಧಿಪಡಿಸಿದ ಅನುದಾನವನ್ನು ಸದ್ಭಳಕೆ ಮಾಡಲಾಗಿದ್ದು.ಗಂಜೀಹಾಳ ಗ್ರಾಮದ ರಾಯಣ್ಣ ಸರ್ಕಲ್‌ದಲ್ಲಿ ಒಂದು ಮತ್ತು ಬಸ್ ನಿಲ್ದಾಣದಲ್ಲೊಂದು ಹೈ ಮಾಸ್ಕನ್ನು ಅಳವಡಿಸಿದ್ದು.ಇನ್ನು ನಂದನೂರ ಗ್ರಾಮದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿದೆ.ಅ.೨ ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆಯುವ ಗಾಂಧಿ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ ಇಲಾಖೆಯ ಸಚಿವರ ಸಮ್ಮುಖದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.ಬಾಕ್ಸ್ ಸುದ್ದಿ-ಗಂಜೀಹಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸಲಾಗಿದೆ.ನರೇಗಾ ಯೋಜನೆಯಲ್ಲಿ ರೈತರಿಗೆ,ಕೂಲಿ ಕಾರ್ಮಿಕರಿಗೆ ಅವರ ಬೇಡಿಕೆಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗಿದ್ದು.ಗಾಂಧಿ ಪುರಸ್ಕಾರಕ್ಕೆ ಪಂಚಾಯತಿಯ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರ ಮತ್ತು ಜನರ ಸ್ಪಂಧಿನೆಯೇ ಕಾರಣ.ಎಸ್.ಬಿ.ಚಂದ್ರಗಿರಿ.ಪಿಡಿಓ ಗಂಜೀಹಾಳ.ಬಾಕ್ಸ್ ಸುದ್ದಿ-ಗ್ರಾ.ಪಂ ಮಟ್ಟದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಕಾರ್ಯವನ್ನು ಮಾಡಿದ್ದಕ್ಕೆ ಮತ್ತು ರೈತರಿಗೆ ದನ,ಕುರಿ ಶೆಡ್ಡು ಮತ್ತು ಕೃಷಿ ಹೊಂಡ ನಿರ್ಮಾಣ ಮತ್ತುಕುಡಿಯುವ ನೀರಿ,ಚರಂಡಿ,ರಸ್ತೆ,ಶೌಚಾಲಯ ಸೇರಿದಂತೆ ಅನೇಕ ಜನಪರ ಕೆಲಸ ಮಾಡಿದ್ದಕ್ಕೆ ಪ್ರಶಸ್ತಿ ಸಿಕ್ಕಿದೆ.ನಬಿಸಾಬ ಕೆ.ನಂದನೂರ.ಅಧ್ಯಕ್ಷರು ಗ್ರಾ.ಪಂ ಗಂಜೀಹಾಳ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button