ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ – ಪದಾಧಿಕಾರಿಗಳಿಗೆ ಸನ್ಮಾನ.
ರೋಣ ನ.29

ಕೋವಿಡ್ ಸಮಯದಲ್ಲಿ ಔಷಧ ವ್ಯಾಪಾರಸ್ಥರು ಜನರಿಗೆ ನೀಡಿದ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಿ ಕೊಳ್ಳಬೇಕು. ಜನರ ಆರೋಗ್ಯ ಹಿತ ರಕ್ಷಣೆ ಉದ್ದೇಶದಿಂದ ಔಷಧಿ ವ್ಯಾಪಾರಿಗಳು ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಗದಗ ಜಿಲ್ಲಾ ಸಹಾಯಕ ನಿಯಂತ್ರಕ ನೀಲಕಂಠ ರಾಠೋಡ ಅವರು ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕ ಔಷಧ ವ್ಯಾಪಾರಸ್ಥರ ಸಂಘ ವತಿಯಿಂದ ನೂತನ ಸಹಾಯಕ ಔಷಧ ನಿಯಂತ್ರಕರಿಗೆ ಹಾಗೂ ಗದಗ ಜಿಲ್ಲಾ ವ್ಯಾಪಾರಸ್ಥರ ಸಂಘದ ಸರ್ವ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ನಿರಂತರ ಕಲಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಔಷಧ ವ್ಯಾಪಾರಸ್ಥ ಸಂಜಯ್ ರಡ್ಡೆರ ಮಾತನಾಡಿ ಔಷಧ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸಮಸ್ಯೆಗಳಿಗೆ ಸ್ಪಂದಿಸ ಬೇಕು. ಎಲ್ಲಾ ವ್ಯಾಪಾರಸ್ಥರಿಗೆ ಸಂಘವು ಎಲ್ಲ ರೀತಿಯ ಸಹಕಾರ ನೀಡಬೇಕು.ಆ್ಯಂಟಿ ಬಯೊಟಿಕ್ (ಪ್ರತಿಜೀವಕ) ಔಷದಗಳು ಬಹುತೇಕ ನಕಲಿ ವೈದ್ಯರಿಗೆ ಪೂರೈಕೆ ಯಾಗುತ್ತಿದ್ದು. ಈ ರೀತಿಯ ಔಷಧ ಪೂರೈಕೆ ತಡೆಯುವಲ್ಲಿ ಔಷದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಔಷದ ವ್ಯಾಪಾರಸ್ಥರ ಸಂಘದರಾಜ್ಯ ಸದಸ್ಯರಾದ ಮಹಾದೇವಗೌಡ ಲಿಂಗನಗೌಡ್ರ, ಎಂ.ಜಿ ರಮಣಿ, ಜ್ಞಾನೇಶ ಖೋಕಲೆ, ಎಂ.ಡಿ ಕಾಬಳ್ಳಿ, ವಿಶ್ವನಾಥ ವನಕಿಯವತ, ಬಿ.ಮಂಜುನಾಥರಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಿ.ಬಿ ಪರಡ್ಡಿ, ವಸುರೇಶ ನೀಡಗುಂದಿ, ಎಸ್.ಆರ್ ನವಲಿ, ಉಮೇಶ ಮೆಣಸಗಿ, ರಂಜಾನಸಾಬ ನದಾಫ, ಚಂದ್ರಗೌಡ ಪಾಟೀಲ, ಮಹೇಸಾ ಬಾಗಲಕೋಟಿ, ರಮೇಶ ಕಲಾರಿ, ಐ.ಜಿ ಪಾಟೀಲ, ಶಶಿಧರ ಮಲ್ಲನಗೌಡ್ರ, ಎಸ್.ಐ ದಿಂಡೂರ ಸೇರಿದಂತೆ ಇತರರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ ರೋಣ