ಕರ ವಸೂಲಾತಿ ಮಾಸಾಚರಣೆ ಅಭಿಯಾನ.
ತೂಲಹಳ್ಳಿ ನ.29

ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2024-25 ನೇ. ಸಾಲಿನ ಕರ ವಸೂಲಾತಿ ಮಾಸಾಚರಣೆ ಅಭಿಯಾನ ಪ್ರಾರಂಭ ಮಾಡಲಾಯಿತು. ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಹಾತ್ಮ ಗಾಂಧಿಯವರ ಕನಸು ನನಸಾಗ ಬೇಕಾದರೆ ಪ್ರತಿಯೊಬ್ಬ ನಾಗರಿಕನು ತಮ್ಮ ಕರ್ತವ್ಯವನ್ನು ಅರಿತುಕೊಂಡು ಪ್ರತಿಯೊಂದು ಮನೆಯ ತೆರಿಗೆ ಹಾಗೂ ನೀರಿನ ತೆರಿಗೆ ಗ್ರಾಮ ಪಂಚಾಯಿತಿಗೆ ಕಟ್ಟಿ ಸಹಕರಿಸುವುದರ ಮೂಲಕ ತಮಗೆ ಒದಗಿಸುವ ಮೂಲಭೂತ ಸೌಕರ್ಯಗಳನ್ನು ಸುಲಭವಾಗಿ ಪಡೆದು ಕೊಳ್ಳಬಹುದು ಎಂದು ತಿಳಿಸುತ್ತಾ ತೂಲಹಳ್ಳಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ್ ಕುಮಾರ್, ಸದಸ್ಯರಾದ ಸಲೀಂ ಭಾಷಾ, ಕಾರ್ಯದರ್ಶಿಗಳಾದ ಮರಿಯಪ್ಪ,ಬಿಲ್ ಕಲೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ವರ್ಗದವರು ಅಭಿಯಾನ ಪ್ರಾರಂಭ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

