ಕೊಟ್ಟೂರು ಬಸ್ ನಿಲ್ದಾಣದಲ್ಲಿ ರೈತನ – ಜೇಬಿಗೆ ಕತ್ತರಿ.
ಕೊಟ್ಟೂರು ನ.29




ಪಟ್ಟಣದ ಬಸ್ ನಿಲ್ದಾಣದಲ್ಲಿ 28 ನವೆಂಬರ್ ಗುರುವಾರ ದಂದು ಕೊಟ್ಟೂರ್ ಲಕ್ಷ್ಮಿ ದಲ್ಲಾಳಿ ಅಂಗಡಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಿ ಬಂದ 1,10,000 ಹಣ ದೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಕೂಡ್ಲಿಗಿ ತಾಲೂಕ ಕಕ್ಕುಪ್ಪಿ ಗ್ರಾಮದ ಭೋಜರಾಜ್ ಜೆಬಿಗೆ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿ ರೈತನ ಲುಂಗಿ ಚೆಡ್ಡಿಯನ್ನು ನಾಜೂಕಾಗಿ ಬ್ಲೇಡಿನಲ್ಲಿ ಕತ್ತರಿಸಿ ಹಣ ದೋಚಿದ್ದಾರೆ ಬ್ಲೇಡ್ ಚರ್ಮಕ್ಕೆ ತಾಗದಂತೆ ಎಚ್ಚರ ವಹಿಸಿರುವುದು ಆಶ್ಚರ್ವಾಗುತ್ತದೆ. ಈ ಕುರಿತಾಗಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ರೈತನು ಮುಂದಾಗಿದ್ದಾನೆ. ಶ್ರೀ ಕ್ಷೇತ್ರವಾದ ಕೊಟ್ಟೂರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಹೆಸರು ವಾಸಿಯಾದಂತ ಮಾರುಕಟ್ಟೆ ಇಲ್ಲಿ ರೈತರು ಅತಿ ಹೆಚ್ಚಾಗಿ ದವಸ ಧಾನ್ಯಗಳನ್ನು ತರುವುದು ಸಹಜವಾಗಿದೆ ಆದರೆ ರೈತರು ತಮ್ಮ ಖರ್ಚಿಗೆ ಬೇಕಾಗುವಷ್ಟು ಹಣ ಕೈಯಲ್ಲಿ ಪಡೆದು ಉಳಿದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿ ಕೊಳ್ಳಲು ಎಪಿಎಂಸಿಯ ಕಾರ್ಯದರ್ಶಿಗಳಾದ ವೀರಣ್ಣ ನಮ್ಮ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು