ಮಹಿಳೆಯರ ಶೌಚಕ್ಕೆ ನೀರಿಗೆ ಬರ, ಮೂಲಭೂತ ಸೌಲಭ್ಯ ಸಮಸ್ಯೆಗಳ ಆಗರಕ್ಕೆ – ಪಿಡಿಓ ದಿವ್ಯ ನಿರ್ಲಕ್ಷ್ಯಕ್ಕೆ, ಜನಾಕ್ರೋಶ.

ಡಣನಾಯಕನಕೆರೆ ನ.30

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿರುವ ಡಣನಾಯಕನಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರುವ ಇಂದಿರಾ ಗಾಂಧಿ ನಗರದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ಶೌಚಾಲಯಗಳು ಇಲ್ಲದೆ ಬಯಲನ್ನೇ ಆಶ್ರಯಿಸಿದ್ದಾರೆ. ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಗಳಿದ್ದು. ಅಭಿವೃದ್ದಿ ಗೊಳಿಸ ಬೇಕಿರುವ ಪಿ.ಡಿ.ಓ ಇಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ನೀರಿನ ಮೋಟಾರ್ ಸ್ಟಾಟರನ ಕೀಲಿ ಕೈ ಪಿ.ಡಿ.ಓ ಆಪ್ತರ ಬಳಿ ಇದ್ದು. 24*7 ಅವರಿಗೆ ನೀರು ಬೇಕೆಂದಾಗ ಆನ್ ಮಾಡಿಕೊಂಡು ಹೋಗುತ್ತಾರೆ ಇನ್ನೂಳಿದ ವರಿಗೆ ನೀರು ಸಿಗಬೇಕೆಂದರೆ ಕಬ್ಬಿಣದ ಕಡಲೆಯಾಗಿದೆ ಇಲ್ಲಿನ ಸಮಸ್ಯೆಗಳ ಬಗ್ಗೆ ಪಿ.ಡಿ.ಓ ಅವರಿಗೆ ತಿಳಿಸಿದರೂ ಸಂಭಂದವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಇಲ್ಲಿನ ಜನರು ಪಿ.ಡಿ.ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಶಿರಾಜ್ ಶೇಖ್ ಅವರು 2001- 02 ನೇ. ಸಾಲಿನಲ್ಲಿ “ಇಂದಿರಾ ಗಾಂಧಿ ನಗರ” ವನ್ನು ಮರಿಯಮ್ಮನಹಳ್ಳಿ ಭಾಗದಲ್ಲಿನ ಬಡ ಜನರ ವಾಸ್ತವ್ಯಕ್ಕೆ ಅನುಕೂಲ ವಾಗಲೆಂದು ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಎಲ್ಲಾ ಬಡವರು ಒಂದೇ, ಎಲ್ಲರೂ ಜಾತಿ, ಧರ್ಮ, ಬೇದ ಭಾವಗಳನ್ನು ತೊರೆದು ಒಗ್ಗಟ್ಟಾಗಿ ಏಕತೆಯಿಂದ ಬಾಳ ಬೇಕೆನ್ನುವ ಸದುದ್ದೇಶದಿಂದ 60*80 ಅಡಿಯ ಒಂದೇ ನಿವೇಶನದಲ್ಲಿ ತಲಾ 30*40 ರಂತೆ , 16*9 ಅಡಿಯ ಶೀಟಿನ ಮನೆಗಳನ್ನು ಒಂದಕ್ಕೊಂದು ಜಂಟಿಯಾಗಿ ಸುಮಾರು 240 ಮನೆಗಳನ್ನು ನಿರ್ಮಿಸಿ ಅಂದಿನ ಅಗತ್ಯತೆನುಗುಣವಾಗಿ ರಸ್ತೆ, ಚರಂಡಿ, ವಿದ್ಯುತ್ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಫಲಾನುಭವಿಗಳಿಗೆ ಕೊಟ್ಟಿದ್ದರು. ನಗರಕ್ಕೆ ರೂಪ ಕೊಟ್ಟವರು ಇಂದಿರಾ ನಗರಕ್ಕೆ ಮೂಲಭೂತ ಸೌಲಭ್ಯಗಳಿಂದ ಅತಂತ್ರ ಪರಿಸ್ಥಿತಿ ಎದುರಿಸುತಿತ್ತು. ಕಾಲ ಕಳೆಯುತ್ತಿದ್ದಂತೆ ಮೂಲಭೂತ ಸೌಲಭ್ಯಗಳು ಮರೀಚಿಕೆ ಯಾಗುತ್ತಾ ಹೋದವು ಸೌಲಭ್ಯಗಳಿಗಾಗಿ ಇಲ್ಲಿನ ಜನರೊಂದಿಗೆ ವಕೀಲರಾದ ಎಲ್. ಮಲ್ಲಿಕಾರ್ಜುನ, ಜಗದೀಶ, ಗುಂಡ ಸೋಮಣ್ಣ, ಎಲ್. ಪಿ. ಹನುಮಂತಪ್ಪ ಇತರರು ಸೇರಿ ನಿರಂತರವಾಗಿ ಬಳ್ಳಾರಿ ಜಿಲ್ಲಾಧಿಕಾರಿ, ಹೊಸಪೇಟೆಯ ಸಹಾಯಕ ಆಯುಕ್ತರನ್ನು ಮತ್ತು ತಹಶೀಲ್ದಾರರನ್ನು ಸಂಪರ್ಕಿಸಿ ಅಧಿಕಾರಿಗಳಿಂದ ಮೂಲಭೂತ ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದರು. ನಂತರ ಪಟ್ಟಣ ಪಂಚಾಯಿತಿಗೂ, ಡಣನಾಯಕನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ನಿರಂತರ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕೆಂದು ಹೋರಟ ಮಾಡಿದ್ದರಿಂದ ಕೊನೆಗೂ ಇಂದಿರಾ ನಗರವು 2020 – 2021 ನೇ. ಸಾಲಿನಲ್ಲಿ ಡಣನಾಯಕನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಲಾಗಿ ಕೊನೆಗೆ ಒಂದು ರೂಪ ಪಡೆಯಿತು.ನಂತರ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಯಿತು. ಮೊಟ್ಟ ಮೊದಲ ಬಾರಿಗೆ 2021 ನೇ. ಸಾಲಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಇಲ್ಲಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ಅದರಲ್ಲಿ ಅಕ್ಕಮಹಾದೇವಿ ಗುಂಡಾಸ್ವಾಮಿ ಎನ್ನುವವರು ಮೊದಲ ಬಾರಿಗೆ ಅಧ್ಯಕ್ಷರಾದರು.ಸಮಸ್ಯೆ:- ಪ್ರಸ್ತುತವಾಗಿ ನೀರಿನ ವ್ಯವಸ್ಥೆ ಇದ್ದರೂ ಅವೈಜ್ಞಾನಿಕವಾಗಿ ಪೈಪ್ ಲೈನ್ ಮಾಡಿರುವುದರಿಂದ ಕಟ್ಟ ಕಡೆಯ ಮನೆಗೆ ನೀರು ಸಿಗುತ್ತಿಲ್ಲ. ನೀರಿನ ಮೋಟಾರ್ ಸ್ಟಾಟರ್ ಕೀಲಿ ಕೈ ಪಿ.ಡಿ.ಓ ಆಪ್ತರ ಬಳಿ ಇರುವುದರಿಂದ ಅವರಿಗೆ ಬೇಕಾದಾಗ ಆನ್ ಮಾಡಿಕೊಂಡು ಸಾಕಾದಾಗ ಆಫ್ ಮಾಡುತ್ತಾರೆ. ಇನ್ನೂಳಿದ ವರಿಗೆ ನೀರು ಸಿಗುವುದಿಲ್ಲ. ಇಲ್ಲಿ ವಾಟರ್ ಮ್ಯಾನ್ ಇಲ್ಲ, ಲೈಟ್ ಹಾಕುವವರನ್ನು ನೇಮಿಸಬೇಕು. ಸಮಸ್ಯೆ ಕುರಿತು ಎಷ್ಟೋ ಬಾರಿ ಪಿ.ಡಿ.ಓ ಗಮನಕ್ಕೆ ತಂದರೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಕೊಡಲೇ ಭೇಟಿ ನೀಡಿ ಸಮಸ್ಯೆ ಸರಿಪಡಿಸಿ ಪ್ರತಿಯೊಬ್ಬರಿಗೂ ನೀರು ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಪಂಚಾಯಿತಿಯ ವೈಫಲ್ಯದ ವಿರುದ್ಧ ಧರಣಿ ನಡೆಸಲಾಗುವುದು ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.

ಬಾಕ್ಸ್:-

ಸ್ಟಾಟರ್ ಕೀಲಿ ಕೈ ಯಾರ ಬಳಿ ಇದೆ ಗೊತ್ತಿಲ್ಲ ಅದನ್ನು ವಿಚಾರಿಸಿ ಹಿಂಪಡೆಯುತ್ತೇನೆ. ಈ ಮೊದಲು ನೀರು ಬಿಡಲು ವಾಟರ್ ಮ್ಯಾನ್ ಇಟ್ಟಿದ್ದೆವು ಆಂತರಿಕ ಸಮಸ್ಯೆಗಳಿಂದ ಅವರನ್ನು ತೆಗೆದಿದ್ದು. ಮತ್ತೆ ಯಾರನ್ನಾದರೂ ನೇಮಿಸಿ ಬೆಳಗ್ಗೆ ಎರೆಡು ತಾಸು ಸಾಯಂಕಾಲ ಎರಡು ತಾಸು ನೀರು ಬಿಡಲು ಹೇಳುತ್ತೇವೆ. ಇಡೀ ನಗರಕ್ಕೆ ಚರಂಡಿ ಮಾಡಲು ನಮ್ಮಲ್ಲಿ ಅನುದಾನದ ಕೊರತೆ ಆಗುತ್ತದೆ. ನರೇಗಾದಲ್ಲಿ ಎಷ್ಟು ಬೇಕೋ ಅಷ್ಟು ಮಾಡಿಸುತ್ತೇವೆ. ಸಂಪೂರ್ಣವಾಗಿ ರಸ್ತೆ ಮತ್ತು ಚರಂಡಿ ಶಾಸಕರು ಮಾಡಿಸ ಬೇಕಾಗುತ್ತದೆ. ವೈಯಕ್ತಿಕ ಶೌಚಾಲಯಗಳನ್ನು ಈಗಾಗಲೇ ಹಂತ ಹಂತವಾಗಿ ಸ್ಥಳೀಯ ಖಾರ್ಖಾನೆಯ ಸಹಕಾರ ದಿಂದ ಕೊಡುತ್ತಿದ್ದೇವೆ.

– ಜಿಲಾನ್, ಪಿಡಿಓ, ಡಣನಾಯಕನ ಕೆರೆ ಗ್ರಾಮ ಪಂಚಾಯಿತಿ.

ಬಾಕ್ಸ್:-

ಇಂದಿರಾ ನಗರ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಚರಂಡಿಗಳಿಲ್ಲದೇ ಮನೆಯ ತ್ಯಾಜ್ಯ ನೀರು ರಸ್ತೆಯ ಮೇಲೆಲ್ಲಾ ಹರಿಯುತ್ತಿವೆ ಇದರಿಂದ ಜನರಿಗೆ ಕಿರಿ ಕಿರಿಯಾಗುತ್ತಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಿದ್ಯುತ್ ದೀಪಗಳು ಹಾಳಾಗಿವೆ. ನೀರಿನ ಬವಣೆ ಹೇಳ ತೀರದಾಗಿದೆ. ನೀರಿದ್ದರೂ ಕಟ್ಟ ಕಡೆಯ ಮನೆಯವರಿಗೆ ನೀರು ತಲುಪುತ್ತಿಲ್ಲ. ಪಿ.ಡಿ.ಓ ಆಪ್ತರ ಬಳಿ ಮೋಟಾರ್ ಸ್ಟಾಟರ್ ಕೀಲಿ ಕೈ ಇದ್ದು. ಅವರಿಗೆ ಬೇಕೆಂದಾಗ ಆನ್ ಮಾಡಿ ಕೊಳ್ಳುತ್ತಾರೆ ಇತರರಿಗೆ ನೀರ ಸಿಗುವುದಿಲ್ಲ. ಈ ಕುರಿತು ಪಿ.ಡಿ.ಓ ಗೆ ಹೇಳಿದರೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

– ಎಲ್.ಮಂಜುನಾಥ ಡಿ.ಎಸ್.ಎಸ್. ಅಧ್ಯಕ್ಷ ಇಂದಿರಾ ನಗರ ನಿವಾಸಿ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button