ಗಾಂಜಾ ಸೇವಿಸಿ ಕೂಗಾಡುತ್ತಿದ್ದ ಯುವಕರ ವಿರುದ್ಧ – ಪ್ರಕರಣ ದಾಖಲು.
ಕೊಟ್ಟೂರು ಡಿ.01

ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯ ಮರೂರು ಕ್ರಾಸ್ ಬಳಿ ಮತ್ತು ರೈಲ್ವೆ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ಕೂಗಾಡುತ್ತಿದ್ದ ಸಾರ್ವಜನಿಕರ ಮೇಲೆ ವಿನಾಕಾರಣ ಜಗಳ ಕಾಯುತಿದ್ದ ಯುವಕರ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಗೀತಾಂಜಲಿ ಸಿಂಧೇ ಇವರು ಭಾತ್ಮೀದಾರ ದಿಂದ ದೂರವಾಣಿ ಖಚಿತ ಮಾಹಿತಿಯೊಂದಿಗೆ ಪೊಲೀಸ್ ಇಲಾಖೆ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಸ್ಥಳಕ್ಕೆ ಗೀತಾಂಜಲಿ ಸಿಂಧೆ ಪಿ.ಎಸ್.ಐ ಗುರುರಾಜ.ಬಿ ಪೊಲೀಸ್ ಕೊಟ್ರಗೌಡ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಖಚಿತ ಪಡಿಸಿಕೊಂಡು ದಿ:30 ನವೆಂಬರ್ 2024 ರಂದು ಮುಂದಿನ ಕ್ರಮಕ್ಕಾಗಿ ಆರೋಪಿಗಳಾದ ರಂಗಸ್ವಾಮಿ ಮತ್ತು ಭಾಷಾ ಎಂಬುವರ ವಿರುದ್ಧ ಕಾಲಾಂ: 27(B) ಎನ್‌ಡಿಪಿಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು