ಶಾಲೆಯನ್ನು ದತ್ತು ಸ್ವೀಕಾರ ಮಾಡುವ ಮೂಲಕ ಶಿಕ್ಷಣಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ ಎಂದು ಹೇಳಿದ – ಪುರಸಭೆ ಅಧ್ಯಕ್ಷ ವಸಂತ್ ಕುಮಾರ್.

ತರೀಕೆರೆ ಡಿ.02

ತರೀಕೆರೆ ಪಟ್ಟಣದ ಪುರಸಭೆಯು ಅಂಬೇಡ್ಕರ್ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ಅಂಗವಾಗಿ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪುರಸಭೆಯು ಈಗಾಗಲೇ ಕೆಲವು ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಿದೆ. ಇದೀಗ ಶಾಲೆಯನ್ನು ದತ್ತು ಸ್ವೀಕಾರ ಮಾಡುವ ಮೂಲಕ ಶಿಕ್ಷಣಕ್ಕು ತನ್ನ ಸೇವೆಯನ್ನು ವಿಸ್ತರಿಸಿದೆ ಎಂದು ಹೇಳಿದರು. ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ಮಾತನಾಡಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಾಲೆಗಳು ಉಳಿದರೆ ಸಮಾಜ ಉಳಿದಂತೆ. ಶಾಲೆಗಳ ಅಭಿವೃದ್ಧಿಗೆ ಪುರಸಭೆ ಸಹಕರಿಸಲಿದೆ ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಮಾತನಾಡಿ ಕೌನ್ಸಿಲಿಂಗ್ ಸಭೆಯ ನಿರ್ಣಯದ ಮೂಲಕ ಕನ್ನಡದ ಉಳಿವಿಗಾಗಿ ಸರ್ಕಾರಿ ಶಾಲೆ ದತ್ತು ಪಡೆಯಲಾಗಿದೆ. ಹಂತ ಹಂತವಾಗಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಸರ್ವ ಸದಸ್ಯರ ಪ್ರಯತ್ನ ದಿಂದಾಗಿ ಈ ದತ್ತು ಸ್ವೀಕಾರ ನಡೆದಿದೆ. ಪುರಸಭೆಯು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದು, ಮಾದರಿಯಾಗಿದೆ ಎಂದರು.ಸದಸ್ಯ ಟಿ.ಎಂ ಬೋಜರಾಜ್ ಮಾತನಾಡಿ ಸರ್ಕಾರಿ ಶಾಲೆಗಳು ಬದುಕನ್ನು ರೂಪಿಸುತ್ತವೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣದ ಶಾಲೆಗಳು ಅಭಿವೃದ್ಧಿಯಲ್ಲಿ ಕುಂಠಿತವಾಗಿವೆ ಎಂದು ಹೇಳಿದರು.ಸದಸ್ಯ ಟಿ.ದಾದಾಪೀರ್ ಮಾತನಾಡಿ ಸರ್ಕಾರಿ ಶಾಲೆಗಳ ಉಳಿವಿಗೆ ಸ್ಥಳೀಯ ಆಡಳಿತಗಳು ಮನಸ್ಸು ಮಾಡಬೇಕು. ತರೀಕೆರೆ ಪುರಸಭೆಯ ಈ ಕಾರ್ಯಕ್ರಮ ಆಂಧೋಲನವಾಗಿ ಮುಂದುವರಿಯಲಿ ಎಂದು ಹೇಳಿದರು. ಸದಸ್ಯ ಅಶೋಕ್ ಕುಮಾರ್ ಮಾತನಾಡಿ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿದರು ಮಕ್ಕಳ ದಾಖಲಾತಿ ಕೊರತೆ ಬೇಸರ ತರುತ್ತದೆ. ಪೋಷಕರು ಸರ್ಕಾರಿ ಶಾಲೆಗಳ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್.ವೆಂಕಟೇಶ್ ಮಾತನಾಡಿ ಪೌರ ಕಾರ್ಮಿಕರ ಹಾಗೂ ದಲಿತ ಮಕ್ಕಳು ಹೆಚ್ಚು ಓದುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವುದು ಸಂಸ ತಂದಿದೆ. ಈ ಹಿಂದೆಯೂ ಪುರಸಭೆ ಕಟ್ಟಡಕ್ಕೆ 3 ಲಕ್ಷರೂ ಒದಗಿಸಿತ್ತು ಎಂದು ಹೇಳಿದರು.ಬಿ.ಇ.ಓ ಪರುಶುರಾಮ ಮಾತನಾಡಿ ಸಮಾಜದ ಸಹಭಾಗಿತ್ವ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕಾರಿ ಯಾಗಲಿದೆ. ಪುರಸಭೆಯ ದಿಟ್ಟ ನಿರ್ಧಾರ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೆಶಕ ರಾಮಚಂದ್ರಪ್ಪ ಮಾತನಾಡಿ ಸರ್ಕಾರ ಇನ್ನಷ್ಟು ಸಹಕಾರವನ್ನು ನೀಡಿದರೆ ಒಳಿತು. ಪಟ್ಟಣದ ಎಲ್ಲಾ ಶಾಲೆಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಮನವಿ ಮಾಡಿದರುಸದಸ್ಯರಾದ ರಿಹಾನ ಪರ್ವಿನ್, ರಂಗನಾಥ, ಪಾರ್ವತಮ್ಮ ,ಆದಿಲ್ ಪಾಷ, ಸಿ.ಆರ್.ಪಿ‌. ಶಿಲ್ಪ, ಮುಖ್ಯ ಶಿಕ್ಷಕಿ ಮೆಹರುನ್ನೀಸಾ. ಎಸ್.ಡಿ.ಎಂ.ಸಿ ಅಧ್ಯಕ್ಷೆ ಗಿರಿಜಾ ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button