“ಸರಳತೆಯ ಸೂತ್ರ ಕಲಿಸಿದ ವಿಶ್ವ ಆಧ್ಯಾತ್ಮಿಕ ಬೆಳಕು”…..
ಓಂ ಶ್ರೀ ಗುರುವೇ ನಮಃ
ಜ್ಞಾನ ಯೋಗ ಜಗದಿ ಬೆಳಗಿದ
ಆಧ್ಯಾತ್ಮಿಕ ಚಿಂತನೆ ಬೆಳಸಿದ
ವಿಶ್ವ ಜ್ಞಾನ ಸೂರ್ಯ
ಶ್ರೀ ಸಿದ್ಧೇಶ್ವರ ಗುರುವೇ ನಮೋನಮಃ
ಸರ್ವರ ಮನ ತಿದ್ದಿ ಶುದ್ಧೀಕರಣದ ರೂವಾರಿ
ನಡೆದಾಡುವ ದೇವರು
ಶ್ರೀ ಸಿದ್ಧೇಶ್ವರ ಗುರುವೇ ನಮೋ ನಮಃ
ದೇಹ ಮನಸ್ಸು ಸಂತೋಷವಾಗಿರಲು
ಸರಳತೆಯ ಸೂತ್ರ ಕಲಿಸಿದ
ವಿಶ್ವದ ಆಧ್ಯಾತ್ಮಿಕ ಬೆಳಕು
ಶ್ರೀ ಸಿದ್ಧೇಶ್ವರ ಗುರುವೇ ನಮೋ ನಮಃ
ನುಡಿ ನಡೆಯಲಿ ಸತ್ಯತೆಯ ಮಾರ್ಗ ತೋರಿದ
ಶ್ರೀ ಸಿದ್ಧೇಶ್ವರ ಗುರುವೇ ನಮೋ ನಮಃ
ಮಾಡುವ ಕಾರ್ಯದಲಿ ದೇವನ ತೋರಿದ
ಮಹಾಮಹಿಮ ಶ್ರೀ ಸಿದ್ಧೇಶ್ವರ ಗುರುವೇ
ನಮೋ ನಮಃ
ಸೃಷ್ಠಿಯ ಸಿರಿ ಉಂಡು ನಗುವ ಜೀವನ
ರೂಢಿಸಿದ
ಶ್ರೀ ಸಿದ್ಧೇಶ್ವರ ಗುರುವೇ ನಮೋ ನಮಃ
ಗಾಳಿ ನೀರು ಆಹಾರ ಬೆಳಕು
ನಿಜ ಸಿರಿತನ ವೆಂದ
ಓಂ ಶ್ರೀ ಸಿದ್ಧೇಶ್ವರ ಗುರುವೇ ನಮೋ ನಮಃ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.