ಶಾಲಾ ಮಕ್ಕಳಿಗೆ ಪೆನ್ನು ಮತ್ತು ಪುಸ್ತಕಗಳನ್ನು ಕೊಡುಗೆ – ಬಿ.ಎಸ್ ಆರ್ ಮೂಗಣ್ಣ.
ಕೊಟ್ಟೂರು ಡಿ. 02
ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ರಿ) ಹಾಗೂ ಸುಮಂಗಲಿ ಸೇವಾಶ ಬೆಂಗಳೂರು ಮತ್ತು ಸುರಕ್ಷ ಅಸೋಸಿಯೇಷನ್ಸ್ (ರಿ) ಮಂಗನಹಳ್ಳಿ ಇವರ ಸಹ ಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ನಾಗರಕಟ್ಟೆ ಗ್ರಾಮ ಪಂಚಾಯತಿಯ ಪಿ.ಡಿ.ಓ ಜಯಮ್ಮ ಅವರು ಕಂಪ್ಯೂಟರ್ ಕಲಿಕೆಯ ಬಗ್ಗೆ ಮಾತನಾಡಿದರು. ಕೊಟ್ಟೂರಿನ ಮುಖಂಡರಾದ ಬಿಎಸ್ಆರ್ ಮೂಗಣ್ಣನವರು ಶಾಲಾ ಮಕ್ಕಳಿಗೆ ಪುಸ್ತಕ ಲೇಖನಗಳನ್ನು ಉಚಿತವಾಗಿ ನೀಡಿದ್ದಾರೆ. ಅವರ ಪರವಾಗಿ ಸುದರ್ಶನ್ ಮಕ್ಕಳಿಗೆ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ನಿಸರ್ಗ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಸಂತೋಷ್ ಭಾಗವಹಿಸಿದ್ದರು.
ಕರ್ನಾಟಕ ಸ್ವಯಂ ಸೇವಾ ಸಂಘಗಳ ಒಕ್ಕೂಟ ಮತ್ತು ಸುಮಂಗಲಿ ಸೇವಾ ಆಶ್ರಮದಿಂದ ಹಲವಾರು ಕಾರ್ಯಕ್ರಮಕ್ಕೆ ಸಹಾಯ ಮಾಡುತ್ತಾ ಬಂದಿದೆ, ಅವರ ಸಹಾಯದ ಒಂದು ಭಾಗವಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ವೃಂದದವರು ನಡೆಸಿ ಕೊಟ್ಟರು. ಸುರಕ್ಷ ಅಸೋಸಿಯೇಷನ್ಸ್ ಅಧ್ಯಕ್ಷರಾದಂತಹ ಸಣ್ಣ ನಿಂಗಮ್ಮನವರು ಹಾಗೂ ಎಸ್‌ಟಿಎಂಸಿ ಸದಸ್ಯರು, ಸುರಕ್ಷಿತ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಎಂ, ಊರಿನ ಪ್ರಮುಖರು ಮತ್ತು ಶಾಲೆ ಮಕ್ಕಳು ಭಾಗವಹಿಸಿದ್ದರು. ಸಂತೋಷ್ ಮತ್ತು ಕೆ.ಎಂ ವಿರೂಪಾಕ್ಷಯ್ಯ ಅವರು ಸುರಕ್ಷ ಅಸೋಸಿಯೇಷನ್ಸ್ ಸಂಸ್ಥೆಯು ಇಲ್ಲಿಯವರೆಗೆ ಮಾಡಿ ಕೊಂಡು ಬಂದ ಕಾರ್ಯಕ್ರಮಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು