ಶ್ರೀ ಹಜರತ್ ಲಾಡ್ಲೇಮ್ಯಾಶ್ಯಾಕ ಯಲಗೋಡ ಜಾತ್ರೆ.
ಯಲಗೋಡ ಡಿ.03

ದೇವರ ಹಿಪ್ಪರಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಜರತ್ ಲಾಡ್ಲೇಮಶ್ಯಾಕ ದರ್ಗಾದ ಜಾತ್ರೆ ನಡೆಯುತ್ತದೆ, ತಾಲೂಕಿನ ಯಲಗೋಡ ಗ್ರಾಮದಲ್ಲಿ ಹಜರತ್ ಲಾಡ್ಲೇಮಶ್ಯಾಕ ದೇವರ ಉರುಸಿನ ಅಂಗವಾಗಿ, ಬುಧವಾರ ರಂದು ಗಂಧೋತ್ಸವ ಸಂಜೆ 8 ಘಂಟೆಗೆ ಪ್ರಾರಂಭದವಾಗಿ ಬೆಳಿಗ್ಗೆ 6 ಕ್ಕೆ ಮೆರವಣಿಗೆಯ ಮುಖಾಂತರ ದರ್ಗಾ ತಲುಪುವದು, ಗುರುವಾರ ರಂದು ದೀಪೋತ್ಸವ ಹಾಗೂ ರಾತ್ರಿ 10, ಘಂಟೆಗೆ ಶ್ರೀದೇವಿ ಮಹಾತ್ಮೆ ಅರ್ಥಾತ್ ಶುಂಭ ನಿಶುಂಭರ ವಧೆ ಎಂಬ ಪೌರಾಣಿಕ ಬೈಲಾಟ ಇರುತ್ತದೆ.

ಹಾಗೂ ಶುಕ್ರವಾರ ರಂದು 7 ಘಂಟೆಗೆ ಶ್ರೀಗುರು ಪುಟ್ಟರಾಜ ಮೇಲೋಡಿಸ್ ಆರ್ಕೆಸ್ಟ್ರಾ ಮತ್ತು ಸಂಗೀತ ನೃತ್ಯ. ಹಾಸ್ಯ ಸಂಜೆಯ ಕಾರ್ಯಕ್ರಮವನ್ನು ಇರುತ್ತದೆ, ಹಾಗೂ ಶನಿವಾರ ರಂದು ಮತ್ತೆ ಬೈಲಾಟಿ ಇರುತ್ತದೆ, ಈ ಜಾತ್ರೆಗೆ ಎಲ್ಲಾ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಬೇಕು ಎಂದು ದರ್ಗಾದ ಕಮೀಟಿಯವರು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ