ಡಿಸೆಂಬರ್ 11 ಗದಗದಲ್ಲಿ “ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಉಪ ವರ್ಗೀಕರಣಕ್ಕೆ ಅಡ್ಡಿ ಪಡಿಸುತ್ತಿರುವ” ಸಚಿವ H.K ಪಾಟೀಲರ ವಿರುದ್ದ – ಹೋರಾಟಕ್ಕೆ ಕರೆ.
ಗದಗ ಡಿ.03
ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ H.K ಪಾಟೀಲ ರವರು ಇತ್ತೀಚಿಗೆ ಗದಗದಲ್ಲಿ “ಕೊಲಂಬೋ” ಗಳು ಇತ್ತೀಚಿಗೆ ಒಳ ಮೀಸಲಾತಿ ಜಾರಿ ವಿರೋಧಿಸಿ ನಡೆದ ಹೋರಾಟಕ್ಕೆ ಮಣಿದು ನಿಮ್ಮ ಬೇಡಿಕೆಯಂತೆ ಸರ್ಕಾರದಲ್ಲಿ ಪ್ರಬಲವಾಗಿ ಧ್ವನಿ ಎತ್ತಿ ನಿಮಗೆ ನ್ಯಾಯ ಕೊಡಿಸುವೆ ಅದಕ್ಕಾಗಿ ನನ್ನ ಮೇಲೆ ಭರವಸೆ ಇಡಿ ಎಂದು “ಘಂಟಾ ಘೋಷವಾಗಿ” ಹೇಳಿಕೆ ನೀಡಿರುವುದನ್ನು ನಾವೆಲ್ಲರು ನೋಡಿದ್ದೇವೆ, ಕೇಳಿದ್ದೇವೆ.
ಅದಕ್ಕಾಗಿ ಈ ಗೌಡರ ಧಿಮಾಕಿನ ಮಾತಿಗೆ ಎದಿರೇಟು ನೀಡಲು ಗದಗ ಜಿಲ್ಲೆಯ ಮಾದಿಗ ಮತ್ತು ಪರಿಶಿಷ್ಟ ಜಾತಿಗಳಲ್ಲೆರೂ ಒಗ್ಗಟ್ಟಾಗಿ ಪಾಟೀಲರ ನಡೆ ವಿರುದ್ದ ತೊಡೆ ತಟ್ಟಿ ಸಚಿವ ಸಂಪುಟ ದಿಂದ ಕೈಬಿಡ ಬೇಕೇಂದು ಡಿಸೇಂಬರ್ 11 ರಂದು ಗದಗ ನಗರದಲ್ಲಿ ಬೃಹತ್ ತಮಟೆ ಚಳುವಳಿ ನಡೆಸಲು ನಿರ್ಧಾರ್ ಕೈ ಕೊಳ್ಳಲಾಯಿತು. ಜಿಲ್ಲೆಯ ಎಲ್ಲಾ ದಲಿತ ಸಂಘಟನೆಯ ಮುಖಂಡರು ಹಾಗೂ ಪರಿಶಿಷ್ಟ ಜಾತಿಗಳ ಎಲ್ಲಾರು ಕೂಡಿ ಕೊಂಡು ಅತ್ಯಂತ ಗಂಭೀರವಾಗಿ ಈ ಹೋರಾಟ ಕೈಗೊಳ್ಳುಲು ನಿರ್ಧರಿಸಿದರು. ದುರಗಪ್ಪ ಹರಿಜನ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಊಡಚಪ್ಪ ಹಳ್ಳಿಕೇರಿ, ಡಿ.ಎಚ್ ಕಟ್ಟಿಮನಿ, ಅಶೋಕ್ ಕುಡತಿನಿ, ರಾಘವೇಂದ್ರ ಪರಾಪುರ, ಚಂದ್ರಶೇಕರ್ ಹರಿಜನ, ರಾಮು ಬಳ್ಳಾರಿ, ನಿಂಗಪ್ಪ ದೊಡಮನಿ, ಮಾರುತಿ ಹೊಸಮನಿ, ಮಂಜುನಾಥ್ , ಶಿವಕುಮಾರ್, ಗಣೇಶ್, ಸುರೇಶ್ ಮುಂತಾದವರಿದ್ದರು.
ರಾಜ್ಯ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು.ಬಾಗಲಕೋಟೆ