ಕೃಷ್ಣಪ್ಪ ವಿರುದ್ಧ ವಿಚಾರವಾದಿ ಗಳಿಂದ – ಗಂಭೀರ ಆರೋಪ.
ಮಾನ್ವಿ ಡಿ.03
ಗೃಹ ಬಳಕೆಯ ಸಿಲಿಂಡರ್ ಮನೆಗಳಿಗೆ ಸಕಾಲಕ್ಕೆ ಮುಟ್ಟದ ಕಾರಣ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಹೋಟೆಲ್, ಡಾಭಾಗಳಿಗೆ ಗೃಹ ಬಳಕೆಯ ಸಿಲಿಂಡರ್ ಸರಬರಾಜು ಆಗುತ್ತಿದ್ದರು, ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಬುದ್ಧಿ ಜೀವಿಗಳು ಗಂಭೀರ ಆರೋಪ ಕೇಳಿ ಬಂದಿದೆ.
ಮಾನ್ವಿ ತಾಲೂಕಲ್ಲಿ ಕಾನೂನು ಅನ್ನೋದು ಇಲ್ಲ ವಾಗಿದ್ದರಿಂದ ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪರ ದುರಾಡಳಿತದಿಂದ ಡಾಭಾ, ಹೋಟೆಲ್ ಹಾಗು ಕಾರ್ಖಾನೆಗಳಿಗೆ ಗೃಹ ಬಳಕೆಯ ಸಿಲಿಂಡರ್ ಸರಬರಾಜಾಗುವುದು ಒಂದು ಕಡೆಯಾದರೆ, ಬ್ಲಾಸ್ಟ್ ಆದರೆ ಇದಕ್ಕೆ ಯಾರು ಹೊಣೆ ಎಂದು ಜನರ ಪ್ರಶ್ನೆಯಾಗಿದೆ.
ಆಹಾರ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದರಿಂದ ಕ್ರಮ ಜರುಗಿಸುವ ಬದಲು ನಮಗೆ ಯಾಕೆ ಬೇಕು ಎಂದು ದೂರ ಸರಿದು ಸಾಗುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಸುಮ್ಮನೆ ಇದ್ದಾರೆಂದು ನೋಡಿದರೆ ಲಂಚ ತಿನ್ನುತ್ತಿದ್ದಾರೆಂದು ಬುದ್ಧಿ ಜೀವಿಗಳ ಆರೋಪವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ