ಕಳಕಪ್ಪ ಬಂಡಿ ವಿದ್ಯಾರ್ಥಿಯ ಸೃಜನಶಿಲತೆಯಲ್ಲಿ ಅರಳಿದ – ಮಣ್ಣಿನ ಆದಿಯೋಗಿ ಮೂರ್ತಿ.
ಜಕ್ಕಲಿ ಡಿ.05

ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯ 9 ನೇ. ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಕಳಕಪ್ಪ ನಾಗಪ್ಪ ಬಂಡಿ ಆದಿಯೋಗಿಯ ಅದ್ಭುತವಾದ ಮಣ್ಣಿನ ಮೂರ್ತಿ ತಯಾರಿಸಿದ್ದಾನೆ. ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ನಲ್ಲಿ ನಡೆಯುವ ಸ್ಪರ್ಧೆಗಾಗಿ ಈ ಮಣ್ಣಿನ ಮೂರ್ತಿಯನ್ನು ಕಳಕಪ್ಪ ತಯಾರಿಸಿದ್ದಾನೆ.

ಅವನಿಗೆ ಶಾಲೆಯ ಚಿತ್ರಕಲಾ ಶಿಕ್ಷಕ ನೆಹರೂ ಮನೋಳಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಕಳಕಪ್ಪನ ಈ ಕಾರ್ಯಕ್ಕೆ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ/ಕಿಯರ ವೃಂದ ಹಾಗೂ ಸಿಬ್ಬಂದಿಯವರ ಸಹಕಾರ ದೊರೆತಿರುವುದು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗಿದೆ. ವಿದ್ಯಾರ್ಥಿಯ ಈ ಕಲಾ ಪ್ರತಿಭೆಗೆ ಗ್ರಾಮಸ್ಥರು, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ ರೋಣ