ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ – ಡಾ, ಎನ್.ಟಿ ಶ್ರೀನಿವಾಸ್.
ಕೂಡ್ಲಿಗಿ ಡಿ.05

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಬರುವ ಸಮುದಾಯದ ಭವನದ ಆವರಣದಲ್ಲಿ ಕೂಡ್ಲಿಗಿ ಪಟ್ಟಣಕ್ಕೆ ಪ್ರತ್ಯೇಕ ಶಾಶ್ವತ ಕುಡಿಯುವ ನೀರನ ಯೋಜನೆಯನ್ನು ಬುಧವಾರ ರಂದು ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿಯಲ್ಲಿ ಪಾವಗಡ ಹಾಗೂ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಶಿವಪುರದ ಜಲ ಶುದ್ದಿಕರಣ ಶುದ್ಧ ನೀರು ಪೈಪ್ ನ್ನು ಮೂಲವಾಗಿಟ್ಟು ಕೊಂಡು ಈ ಯೋಜನೆಯು ಸುಮಾರು 54.67 ಕೋಟಿಗಳು ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ಟಿ ಶ್ರೀನಿವಾಸ್ ರವರು ಉದ್ಘಾಟನೆ ಮಾಡುವುದರ ಮೂಲಕ ಜನರಿಗೆ ಮೂಲ ಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಪಟ್ಟಣಕ್ಕೆ ಇನ್ನೂ 30 ವರ್ಷಗಳಿಗೂ ಸದಾ ಶಾಶ್ವತವಾಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಯಾವ ಕಾಲಕ್ಕೂ ಬರ ಬಾರದು ಎನ್ನುವ ಮುಂದಾಲೋಚನೆ ಯಿಂದ ಈ ಮಹತ್ತರವಾದ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಎನ್.ಟಿ ಶ್ರೀನಿವಾಸ್ ಶಾಸಕರು ವೇದಿಕೆಯ ಮೂಲಕ ತಿಳಿಸಿದರು, ಈ ಸಂದರ್ಭದಲ್ಲಿ ಶಾಶ್ವತ ಕುಡಿಯುವ ನೀರಿನ ಬಗ್ಗೆ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಹಾಗೂ ದಲಿತ ಮುಖಂಡರಾದ ಎಸ್.ದುರ್ಗೇಶ್ ಹಾಗೂ ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸುನಿಲ್ ಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ್ರು ಕೂಡ್ಲಿಗಿ ತಾಲೂಕಿನ ಹಿಂದುಳಿದ ಹಣೆಪಟ್ಟೆಯ ಅಳಿಸುವುದ ರೊಂದಿಗೆ ಅಭಿವೃದ್ಧಿ ವಿಷಯವಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ ಅಭಿವೃದ್ಧಿಯ ಶಂಕುಸ್ಥಾಪನೆಗೆ ಚಾಲನೆ ನೀಡುತ್ತಿದ್ದು.

ತಾಲೂಕಿನಾದ್ಯಂತ ಜನರ ನಿರೀಕ್ಷೆ ಗಳನ್ನು ಮೀರಿ ಎಲ್ಲಿ ನೋಡಿದರೂ ಕಾಮಗಾರಿಗಳು ನಡೆಯುತ್ತಿರುವುದನ್ನು ಕಂಡು ತಾಲೂಕಿನ ಜನತೆ ಕೂಡ್ಲಿಗಿ ತಾಲೂಕು ವಿವಿಧ ಕ್ಷೇತ್ರಗಳ ಅಭಿವೃದ್ದಿ ಮಾಡುತ್ತಿರುವಂತಹ ಶಾಸಕರ ಕುರಿತು ಹಾಗೂ ತುಂಬಾ ಸಂತೋಷ ಪಡುವಂತಹ ವಿಷಯ ಕುರಿತು ಮುಖಂಡರು ವೇದಿಕೆ ಮೂಲಕ ಡಾ, ಎನ್.ಟಿ ಶ್ರೀನಿವಾಸ್ ಶಾಸಕರು ರವರಿಗೆ ಧನ್ಯವಾದಗಳು ತಿಳಿಸಿದರು. ಕೂಡ್ಲಿಗಿ ಪಟ್ಟಣಕ್ಕೆ ಕೆಲವೇ ತಿಂಗಳಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಅನೇಕ ಕೂಡ್ಲಿಗಿ ತಾಲೂಕಿನ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಪ್ರಭಾಕರ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯರಾದ ತಳಸದ ವೆಂಕಟೇಶ್ ಮಾದಳ್ಳಿ ನಜೀರ್ ಸಾಬ್ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ. ಕೂಡ್ಲಿಗಿ.ವಿಜಯನಗರ