“ಸಾಂತ್ವನದ ನುಡಿ ಜೀವನುತ್ಸಾಹದ ಚಿಗುರು”…..

ಸೂರ್ಯೋದಯ ಹೊಂಗೀರಣಗಳ ನೋಟ




ಆಹ್ಲಾದಕರ
ಶುಭೋದಯದಿ
ಪಕ್ಷಿ ಸಂಕುಲಗಳ ಕಲರವ ನಾದ ನಿನಾದ
ಮಧುರತೆಯು
ಕವಿ ಲೇಖಕ ಗಾಯಕರ ಬರಹ ಸಾಹಿತ್ಯ
ಸಂಗೀತ ಸವಿಯುವ ಕ್ಷಣ ಆನಂದಮಯವು
ಭೂಮಾತೆಯ ಮಡಿಲಲಿ ರೈತರ ಶ್ರಮದ
ಬೇವರ ಹನಿಯ ಹಸಿರು ಪೈರು ಹೊನ್ನ
ಚಲುವು
ಕಾಯಕದಿ ಹಸಿದು ಬಂದಾಗ ತಾಯಿ/ಸತಿ
ಬಡಿಸಿದ ಊಟದ ಸವಿ ರುಚಿಯು
ತಂದೆಯ ಶ್ರಮದ ಆಸೆ ಈಡೀರಿಸಿದ
ಮಕ್ಕಳು ಜಗದಿ ಬಲು ಆನಂದಮಯವು
ಕೆಲಸದಿ ದೇಹ ದಣಿದಾಗ ವಿಶ್ರಾಂತಿಯ
ಕ್ಷಣಗಳು
ಸುಖ ಸುಂದರವು
ಸಂಸಾರ ಜೀವನದಿ ಮನನೋವುಂಡು
ದುಃಖಿಸಿದಾಗ ಅನುಭವಸ್ಥರ
ಸಾಂತ್ವನದ ನುಡಿ ಜೀವನುತ್ಸಾಹದ ಚಿಗುರು
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.