ಹಣಕ್ಕೆ ಬೇಡಿಕೆ ಆರೋಪಕ್ಕೆ ದಾಖಲೆ ಬಹಿರಂಗ ಪಡಿಸಿ – ದಲಿತ ಮುಖಂಡರ ಸವಾಲ್.
ಮುದ್ದೇಬಿಹಾಳ ಜು.19

ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ ತಾನೊಬ್ಬ ನಿಜವಾದ ಮುಸ್ಲಿಮನಾಗಿದ್ದರೆ ಕುರಾನ್ ಗ್ರಂಥದ ಮೇಲೆ ಪ್ರಮಾಣ ಮಾಡಿ ದಲಿತ ಮುಖಂಡರ ಮೇಲೆ ಮಾಡಿದ ಹಣಕ್ಕೆ ಬೇಡಿಕೆ ಇರಿಸಿದ ಆರೋಪಕ್ಕೆ ಮೊದಲು ಜನರ ಎದುರಿಗೆ ದಾಖಲೆಗಳನ್ನು ಬಹಿರಂಗ ಪಡಿಸಿ ಮಾತನಾಡುವುದನ್ನು ಕಲಿತು ಕೊಳ್ಳಲಿ ಎಂದು ದಲಿತ ಸಮಾಜದ ಮುಖಂಡರು ಸವಾಲು ಹಾಕಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದರು. ಪಟ್ಟಣದ ತಾಲೂಕ ಪಂಚಾಯತಿ ವಸತಿ ಗ್ರಹಗಳು. ಸಾಮರ್ಥ್ಯ ಸೌಧ ನೆಲಸಮ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ ದಲಿತ ಮುಖಂಡರ ಮೇಲೆ ಮಾಡಿದ ಆರೋಪವನ್ನು ಖಂಡಿಸುವುದಾಗಿ ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಚಲವಾದಿ (ಸರೂರ್) ಹೇಳಿದರು. ತಾ.ಪಂ ಏರಿದ ಆಸ್ತಿಯನ್ನು ನಿಯಮ ಬಾಹಿರವಾಗಿ ನೆಲಸಮ ಮಾಡಿದ್ದು ಅಲ್ಲದೆ ಅಲ್ಲಿದ್ದ ಲಕ್ಷಾಂತರ ರೂಪಾಯಿ. ಕಲ್ಲು ಮಣ್ಣು ಕಟ್ಟಿಗೆ ಕಬ್ಬಿಣವನ್ನು ಹರಾಜು ಹಾಕದೆ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದಕ್ಕೆ ಎಂದು ತಾಲೂಕ ಪಂಚಾಯಿತಿ ಅಧಿಕಾರಿಯನ್ನು ಪ್ರಶ್ನಿಸಿ ಹೋರಾಟ ಹಮ್ಮಿಕೊಂಡಿದ್ದೆವು. ಇದಕ್ಕೆ ತಾಲೂಕ ಪಂಚಾಯಿತಿ ಅಧಿಕಾರಿ ಪುರಸಭೆ ಮುಖ್ಯ ಅಧಿಕಾರಿಗೆ ಸ್ಪಷ್ಟಿಕರಣ ಕೋರಿ ನೋಟಿಸ್ ನೀಡಿದ್ದರು. ಮುಖ್ಯಾಧಿಕಾರಿಗಳು ಉತ್ತರಿಸುತ್ತಿದ್ದರು ಅದು ಬಿಟ್ಟು ಪುರಸಭೆ ಅಧ್ಯಕ್ಷರಾದಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಗೊಳಸಂಗಿಯವರು ದಲಿತ ಸಮಾಜದ ಹೋರಾಟಗಾರರೊಬ್ಬರ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ ಪುರಸಭೆ ಅಧ್ಯಕ್ಷರ ಹೇಳಿಕೆ ಖಂಡಿಸಿ ಪುರಸಭೆ ಎದುರಿಗೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹರೀಶ್ ನಾಟೇಕರ್ ಮಾತನಾಡಿ ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ ನೀನು ಆರಾಧಿಸುವ ಕುರಾನ್ ಗ್ರಂಥವನ್ನು ಪ್ರಮಾಣ ಮಾಡಿ ನಿಜವಾದ ಮುಸ್ಲಿಮನಾಗಿದ್ದರೆ ಆರೋಪ ಮಾಡಿದಂತೆ ನಾನು ಐದು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳುವ ಕುರಿತಾದ ಒಂದೇ ಒಂದು ದಾಖಲೆಯನ್ನು ಜನರ ಮುಂದೆ ಬಿಡುಗಡೆ ಮಾಡಿದರೆ ನಾನು ಗಲ್ಲಿಗೇರಲು ಸಿದ್ಧನಿದ್ದೇನೆ. ನನ್ನ 35 ವರ್ಷದ ಹೋರಾಟದ ಬದುಕಿನಲ್ಲಿ ನನ್ನ ಸ್ವಂತ ಹಣ ಖರ್ಚು ಮಾಡಿ ಶೋಷಿತರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಯಾವುದೇ ಇಲಾಖೆ ಅಧಿಕಾರಿಯ ಬಳಿಯೂ ಕೈ ಚಾಚಿಲ್ಲ. ಪುರಸಭೆಯಲ್ಲಿ ಎಸ್ಸಿ/ಎಸ್ಟಿ ಜನಾಂಗದ ಕಾರ್ಮಿಕರ ಕುರಿತು ಹಗುರವಾಗಿ ಮಾತನಾಡುತ್ತಿದ್ದು. ನಿಮ್ಮ ಮೇಲೆ ಜಾತಿ ನಿಂದನೆ ದೂರು ದಾಖಲಿಸುತ್ತೇನೆ ಎಂದು ಹೇಳಿದರು. ಪುರಸಭೆಯ ಜೆ.ಸಿ.ಬಿ ಬಳಿ ತಾಲೂಕ ಪಂಚಾಯಿತಿ ವಸತಿ ಗ್ರಹಗಳಿಂದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಫೋಟೋ. ವಿಡಿಯೋ. ದಾಖಲೆಗಳು ನಮ್ಮ ಬಳಿ ಇವೆ ಪುರಸಭೆ ಅಧ್ಯಕ್ಷ ಒಬ್ಬ ಗುಂಡಾ ಆಗಿದ್ದು ಆತನ ಮೇಲೆ ರೌಡಿ ಶೀಟರ್ ಕೇಸ್ ದಾಖಲಾಗಿದೆ. ಅಧ್ಯಕ್ಷನಾಗಿ ಇದ್ದುಕೊಂಡು ಜಾತಿವಾದಿ ಯಾಗಿದ್ದೀರಿ. ದಲಿತರ ಗುಡಿಸಲು. ಮನೆ. ಶೆಡ್ಡುಗಳನ್ನು. ನೆಲಸಮ ಮಾಡಿ ನಿಮ್ಮ ಜನಾಂಗದವರು ಮನೆ ಅಂಗಡಿಗಳನ್ನು ತೆರವು ಗೊಳಿಸದೆ. ಹಾಗೆ ಬಿಟ್ಟು ಪಕ್ಷಪಾತ ಧೋರಣೆ ಅನುಸರಿಸಿದ್ದೀರಿ. ನೀವು ಅಧ್ಯಕ್ಷರಾಗಲು ನಾಲಾಯಕ ಎಂದು ಆಕ್ರೋಶ ಹೊರ ಹಾಕಿದರು. ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ನೀವೇ ಆಯ್ಕೆಯಾದಾಗ ದಲಿತರು ಮುಸ್ಲಿಮರು ಅಣ್ಣ ತಮ್ಮಂದಿರು ಎನ್ನುವ ಭಾವನೆಯಿಂದ ನಾವು ಬಂದು ನಿಮಗೆ ಅಭಿನಂದಿಸಿದ್ದೆವು. ದಿ, ರಸುಲ್ ದೇಸಾಯಿ. ದಿ, ಅಲ್ಲಾಭಕ್ಷ ಡವಳಗಿ ಅಂತಹ ಮುಸ್ಲಿಂ ನಾಯಕರು ದಲಿತರೊಂದಿಗೆ ಒಳ್ಳೆಯ ಸಂಬಂಧ ಇಟ್ಟು ಕೊಂಡಿದ್ದರು. ಆದರೆ ನೀವು ದಲಿತರೇದರೆ. ವೈಷಮ್ಯ ಸಾಧಿಸುತ್ತಿದ್ದೀರಿ ಎಂದು ಹರಿಹಾಯ್ದರು. ಸುದ್ದಿ ಗೋಷ್ಠಿಯಲ್ಲಿ ದಲಿತ ಪರ ಸಂಘಟನೆಯ ಪ್ರಶಾಂತ್ ಕಾಳೆ. ಬಸವರಾಜ್ ಸರೂರ್. ಆನಂದ್ ಮುದುರ್. ಹನುಮಂತ ಗುಂಡಕರ್ಜಗಿ. ಬಸವರಾಜ್ ಚಲವಾದಿ. ಪ್ರಕಾಶ್ ಗುಂಡಕರ್ಜಗಿ. ಇದ್ದರು ಕ್ಷೇತ್ರದ ಶಾಸಕರು ದಲಿತರು ಮುಸ್ಲಿಮರ ಒಳ್ಳೆಯ ಸಂಬಂಧವನ್ನು ಹಾಳು ಮಾಡುತ್ತಿರುವ ಮಹಿಬೂಬ್ ಗೊಳಸಂಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು. ದಲಿತ ಪರ ಸಂಘಟನೆಯ ಮುಖಂಡರ ಬಗ್ಗೆ ಆಧಾರ ರಹಿತ ಆರೋಪ ಮಾಡಿರುವ ಪುರಸಭೆ ಅಧ್ಯಕ್ಷರ ವಿರುದ್ಧ ಪುರಸಭೆ ಎದುರಿಗೆ ಜುಲೈ 21 ರಂದು ಧರಣಿ ಸತ್ಯಾಗ್ರ ಆರಂಭಿಸುತ್ತೇವೆ. ಹರೀಶ್.ನಾಟಿಕಾರ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ