ಪೊಲೀಸರ ಬೆನ್ನೆಲುಬಾಗುವಲ್ಲಿ – ಗೃಹ ರಕ್ಷಕರು ಯಶಸ್ವಿ.
ಇಂಡಿ ಡಿ.08

ಗೃಹ ರಕ್ಷಕ ದಳದ ಸೇವೆ ಅಮೂಲ್ಯವಾದದ್ದು. ಪೊಲೀಸರಿಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸುವಲ್ಲಿ ಗೃಹ ರಕ್ಷಕ ದಳ ಯಶಸ್ವಿ ಯಾಗಿದೆ ಎಂದು ಇಂಡಿ ಡಿ.ವೈ.ಎಸ್ಪಿ ಎಚ್. ಜಗದೀಶ ಹೇಳಿದರು. ಪಟ್ಟಣದ ಡಿ.ವೈ.ಎಸ್ಪಿ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾ ಗೃಹ ರಕ್ಷಕ ದಳ ಹಮ್ಮಿಕೊಂಡ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಜೀವ ರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹ ರಕ್ಷಕ ದಳದ ಕೊಡುಗೆ ಮಹತ್ತರವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಘಟಕದ ಗೃಹ ರಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಗೃಹ ರಕ್ಷಕ ದಳ ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಚಾರಿ ನಿಯಂತ್ರಣ, ಪ್ರವಾಹ, ಬೆಂಕಿ ಅನಾಹುತ ಇನ್ನಿತರ ಸಂದರ್ಭದಲ್ಲಿ ಜನರಿಗೆ ಸೂಕ್ತ ರಕ್ಷಣೆ ಒದಗಿಸುತ್ತಿದ್ದಾರೆ ಎಂದರು. 1946 ರಲ್ಲಿ ಸ್ಥಾಪನೆ ಗೊಂಡ ಗೃಹ ರಕ್ಷಕ ದಳ ಇಂದಿನ ವರೆಗೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗೃಹರ ಕ್ಷಕ ದಳ ಅವರ ನಿಷ್ಕಾಮಸೇವೆ ನಿಜಕ್ಕೂ ಪ್ರಶಂಸನೀಯ. ಸಮಾಜದಲ್ಲಿ ಸದಾ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಸಮಾಜ ಸೇವೆ ಮಾಡುವ ಗೃಹ ರಕ್ಷಕ ದಳ ಸೇವೆ ಮತ್ತು ಪೊಲೀಸ್ ಇಲಾಖೆಗೆ ಮುಂದುವರೆಯಲಿ ಎಂದರು. ಗೃಹ ರಕ್ಷಕ ದಳವು ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗವಾಗಿದ್ದು, ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಮಾಜಕ್ಕೆ ಉತ್ತಮ ರೀತಿಯ ಸೇವೆ ಸಲ್ಲಿಸಲು ಸಹಕಾರ ನೀಡುತ್ತಿದೆ. ಪೊಲೀಸ್ ರು ಎಲ್ಲಾ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಕೆಲಸ ನಿರ್ವ ಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಪೊಲೀಸ್‌ರೊಂದಿಗೆ ಕೈಜೊಡಿಸಿ ಕೊಂಡು ಬಂದಿರುವ ಇಲಾಖೆ ಗೃಹ ರಕ್ಷಕ ದಳ. ಯಾವುದೇ ಸಮಯದಲ್ಲಿಯೂ ಪೊಲೀಸ್ ಇಲಾಖೆಯ ಕೆಲಸಗಳಿಗೆ ಗೃಹ ರಕ್ಷಕರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಶಿವಾನಂದ ಶಿವೂರ ಮಾತನಾಡಿ, ಗೃಹ ರಕ್ಷಕರು ಖಾಕಿ ಸಮವಸ್ತ್ರ ಧರಿಸಿದಾಗ ಭಿನ್ನವಾಗಿ ಕಾಣಿಸುತ್ತಾರೆ. ಸಮವಸ್ತ್ರ ದಲ್ಲಿರುವಾಗ ಶಿಸ್ತಿನಿಂದ ವರ್ತಿಸುವುದು, ಶ್ರದ್ದೆ ಮತ್ತು ಪ್ರಾಮಾಣಿಕತೆ ಯಿಂದ ಕರ್ತವ್ಯ ನಿರ್ವಹಿಸುವುದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮುಖ್ಯ ಎಂದರು. ಗೃಹ ರಕ್ಷಕರು ಸಮಾಜ ಸೇವೆ ಮಾಡುವುದರೊಂದಿಗೆ ಸಾರ್ವಜನಿಕರ ಜೀವ ರಕ್ಷಣೆಯ ತರಬೇತಿ ಪಡೆದಿರುತ್ತಾರೆ. ವೈದ್ಯರು ಚಿಕಿತ್ಸೆ ನೀಡುವ ಮೊದಲು, ಪ್ರಥಮ ಚಿಕಿತ್ಸೆ ನೀಡುವ ಗೃಹ ರಕ್ಷಕರು ಜೀವಗಳನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸೇವೆಯನ್ನು ಶ್ಲಾಘಿಸಿದರು. ಉಪ ಸಮಾದೇಷ್ಟರಾದ ಬಿ.ಎಸ್ ಕಾಂಬಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗೃಹ ರಕ್ಷಕ ದಳದ ಬೋಧಕ ಮಹಾದೇವ ಪೂಜಾರ,ಸಹಾಯಕ ಬೊಧಕಿ ಕು.ಕೌಸರಬಿ ಮಾತನಾಡಿದರು. ಇಂಡಿ ಘಟಕದ ಘಟಕಾಧಿಕಾರಿ ಎನ್.ಎನ್ ಗವಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರ.ದ ಸಹಾಯಕ ಆರೀಪ ಮುಲ್ಲಾ, ರಾಘವೇಂದ್ರ ಕುಲಕರ್ಣಿ, ಸುವರ್ಣ ದುಬಲಗುಂಡಿ, ಸುನಂದಾ ರೊಟ್ಟಿ, ಬಿ.ಎಸ್.ಹಡಪದ, ಎಸ್.ಪಿ ಸುಲಾಖೆ ಸೇರಿದಂತೆ ಜಿಲ್ಲೆಯ ಘಟಕಗಳ ಘಟಕಾಧಿಕಾರಿಗಳು, ಗೃಹ ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ವಾಲಿಕಾರ ನಿರೂಪಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ. ಹರಿಜನ.ಇಂಡಿ.ವಿಜಯಪುರ