ಬೀದಿ ನಾಯಿಗಳು ಕಚ್ಚಿ ಸಾವನ್ನಪ್ಪಿದ ಕುರಿಗಳ ಮಾಲೀಕರಿಗೆ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ.

ಇಂಡಿ ಮಾರ್ಚ್.21

ಬೀದಿ ನಾಯಿಗಳು ಕಚ್ಚಿ ಸಾವನಪ್ಪಿದ ಕುರಿಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ, ಬುಧವಾರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯಲ್ಲಿರುವ ವಸತಿ ಪ್ರದೇಶದ ಸಾರ್ವಜನಿಕರು ಯುವ ಮುಖಂಡ ಪ್ರಶಾಂತ ಲಾಳಸಂಗಿ ನೇತೃತ್ವದಲ್ಲಿ ಪಟ್ಟಣದ ಪುರಸಭೆಯ ಮುಂದೆ ನಾಯಿಗಳು ಕಚ್ಚಿ ಸಾವನಪ್ಪಿದ ಕುರಿಗಳನ್ನು ಪುರಸಭೆ ಆವರಣದ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಪ್ರಶಾಂತ ಲಾಳಸಂಗಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬಿಜೆಪಿ ಮುಖಂಡ ಅಶೋಕ ಅಕಲಾದಿ, ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ವಾರ ಬೀದಿ ನಾಯಿಗಳು ಕಚ್ಚಿ ೫ ರಿಂದ ೬ ಕುರಿಗಳು ಮೃತಪಟ್ಟಿವೆ. ಮಂಗಳವಾರ ಸಂಜೆ ಮತ್ತೆ ಎರಡು ಕುರಿಗಳಿಗೆ ಬೀದಿನಾಯಿಗಳು ಕಚ್ಚಿದ್ದರಿಂದ ಸಾವನಪ್ಪಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳು ಕಚ್ಚಿ ಮೃತಪಟ್ಟ ಕುರಿ ಮಾಲೀಕರಿಗೆ ಪರಿಹಾರ ನೀಡಬೇಕು. ಬೀದಿ ನಾಯಿಗಳನ್ನು ಬೇರಡೆಗೆ ಸಾಗಿಸಬೇಕು. ಪುರಸಭೆ ಆಡಳಿತಾಧಿಕಾರಿ, ಎಸಿ ಅಬೀದ ಗದ್ಯಾಳ ಅವರು ಧರಣಿ ಸ್ಥಳಕ್ಕೆ ಬರುವವರೆಗೆ ಧರಣಿ ಮುಂದುವರೆಯುತ್ತದೆ ಎಂದು ಪಟ್ಟು ಹಿಡಿದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ಆಡಳಿತಾಧಿಕಾರಿ ಹಾಗೂ ಎಸಿ ಅಬೀದ್ ಗದ್ಯಾಳ ಅವರು, ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಲು ಈಗಾಗಲೇ ನಾಯಿಗಳನ್ನು ಹಿಡಿಯುವವರನ್ನು ಹುಬ್ಬಳ್ಳಿಯಿಂದ ಬರಲು ಕರೆ ಮಾಡಲಾಗಿದೆ. ಇಂದು ಸಂಜೆ ಇಲ್ಲವೆ ನಾಳೆ ನಾಯಿಗಳನ್ನು ಹಿಡಿಸಿ ಬೇರೆಡೆಗೆ ಸಾಗಿಸಲಾಗುತ್ತದೆ. ನಾಯಿ ಕಚ್ಚಿ ಮೃತ ಪಟ್ಟಿರುವ ಕುರಿಗಳ ಮಾಲೀಕರಿಗೆ ೧೫ ದಿನದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಧರಣಿಯನ್ನು ಕೈಬಿಟ್ಟರು.ಅನೀಲಗೌಡ ಬಿರಾದಾರ, ಪ್ರಶಾಂತ ಲಾಳಸಂಗಿ, ಅಶೋಕ ಅಕಲಾದಿ, ರಾಚು ಬಡಿಗೇರ, ಮಲ್ಲಪ್ಪ ಗುಡ್ಲ, ಶ್ರೀಶೈಲ ಪೂಜಾರಿ, ಮಾಳು ಪೂಜಾರಿ, ಬಸು ಪೂಜಾರಿ, ದಶರಥ ಇಂಗಳೆ, ಅಶೋಕ ತಾಂಬೆ, ಜಗದೀಶ ಹೊಟಗಿ, ಸನಗೊಂಡ ಪೂಜಾರಿ, ಸಂಗಮೇಶ ಬಂಡೆನವರ, ಅಮೀನ ಸೈಯದ, ದತ್ತು ಹೆಳವರ, ಮಲ್ಲು ತಾಂಬೆ, ಸುರೇಶ ಹೂಗಾರ ಇದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button