ಕಾರ್ಯದರ್ಶಿಗಳು ಕಾರ್ಯಾಧಕ್ಷತೆಯನ್ನು ಕಾಯಕವೆಂದು ಭಾವಿಸಿದರೆ ಹಾಲು ಉತ್ಪಾದಕರು ಹಾಗೂ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ – ಎಸ್.ಡಿ ಸೋನಾಲ್ ಗೌಡ.

ತರೀಕೆರೆ ಡಿ. 11

ಟಿ.ಎ.ಪಿ.ಎಂ.ಎಸ್ ನ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲ ನಿಯಮಿತ ಬೆಂಗಳೂರು ಜಿಲ್ಲಾ ಸಹಕಾ ರಯೂನಿಯನ್ ಚಿಕ್ಕಮಂಗಳೂರು ಹಾಸನ ಹಾಲು ಒಕ್ಕೂಟ ಹಾಸನ ಹಾಗೂ ಸಹಕಾರ ಇಲಾಖೆ ಚಿಕ್ಕಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತರೀಕೆರೆ ಅಜ್ಜಂಪುರ ಎನ್.ಆರ್ ಪುರ ಕೊಪ್ಪ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ಕಾರ್ಯಾಧಕ್ಷತೆ ಶುದ್ಧ ಹಾಲು ಉತ್ಪಾದನೆ ಹಾಗೂ ರಾಸು ಗಳ ಆರೋಗ್ಯ ನಿರ್ವಾಹಣೆ ಬಗ್ಗೆ. ಒಂದು ದಿನದ ವಿಶೇಷ ಸಹಕಾರಿ ತರಬೇತಿ ಕಾರ್ಯಗಾರರನ್ನು ಉದ್ಘಾಟಿಸಿ ಮಾತನಾಡುತ್ತಾ ಹಾಲು ಹಾಗೂ ಹೈನುಗಾರಿಕೆಯಲ್ಲಿ ದೇಶದಲ್ಲಿ ಉತ್ತರ ಪ್ರದೇಶ ಮಧ್ಯಪ್ರದೇಶ ಗುಜರಾತ್ ರಾಜ್ಯಸ್ಥಾನಗಳು ಈಗ ಕರ್ನಾಟಕವೂ ಈ ರಾಜ್ಯ ಗಳಿಗೆ ಹೋಲಿಸಿದರೆ ಈ ವರ್ಷದ ನಾಲ್ಕರಷ್ಟನ್ನು ಹಾಲಿನ ಉತ್ಪಾದನೆ ಹೆಚ್ಚಿಸಿ ಕೊಂಡು ಮುಂದೆ ಸಾಗುತ್ತಿದ್ದು ಇದಕ್ಕೆ ಕರ್ನಾಟಕ ಮಿಲ್ಕ್ ಫೆಡರೇಶನ್ ಅವರು ತುಂಬಾ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯದರ್ಶಿಗಳು ಪ್ರಾಮಾಣಿಕತೆ ಯಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದನೆ ಮಾಡುವುದರ ಮುಖಾಂತರ ಶುದ್ಧ ಹಾಲನ್ನು ಉತ್ಪಾದಿಸುವ ಸಲವಾಗಿ ಕೆ.ಎಂ.ಎಫ್ ವತಿಯಿಂದ ನೀಡಬಹುದಾದ ಸವಲತ್ತು ಹಾಗೂ ಸೌಲಭ್ಯಗಳನ್ನು ಕೊಡಿಸುವ ಮುಖಾಂತರ ಹೈನುಗಾರಿಕೆ ಯಿಂದ ಅವಲಂಬಿತವಾದ ರೈತರಿಗೆ ಸಹಾಯ ಮಾಡುವ ಕರ್ತವ್ಯ ಕಾರ್ಯದರ್ಶಿ ಗಳವರದಾಗಿದ್ದು ಈ ನಿಟ್ಟಿನಲ್ಲಿ ಅವರಿಗೆ ಮಾರ್ಗದರ್ಶಿಗಳಾಗಿ ರಾಸು ಮತ್ತು ವ್ಯವಹಾರ ಹಾಗೂ ಸಂಘದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿಳಿಸಿದರೆ ಭ್ರಷ್ಟಾಚಾರ ಮುಕ್ತ ಹಾಲು ಉತ್ಪಾದಕರ ಸಂಘಗಳಾಗಿ ಪರಿವರ್ತನೆ ಗೊಂಡು ದೇಶಕ್ಕೆ ಉತ್ತಮ ಆದಾಯ ತರುವ ನಿಟ್ಟಿನಲ್ಲಿ ಸಹಕಾರಿ ಆಗಬೇಕೆಂದು ಕಾರ್ಯದರ್ಶಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಹಕಾರ ಯೂನಿಯನ್ ನ ಉಪಾಧ್ಯಕ್ಷರಾದ ದಿನಾಕರ್ ಅವರು ಮಾತನಾಡಿ ಪ್ರಸ್ತುತವಾಗಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನೆ ಈ ದೇಶದಲ್ಲಿ ವಿವಿಧ ತಿನಿಸುಗಳ ಮುಖಾಂತರ ದೇಶಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು. ಹಾಲು ಉತ್ಪಾದಕರು ಗುಣ ಮಟ್ಟದ ಹಾಲನ್ನು ಅಳೆಯುವುದರ ಮುಖೇನ. ನಮ್ಮ ಹೆಮ್ಮೆಯ ಕೆ.ಎಂ.ಎಫ್ ಅನ್ನು ಬಲಿಷ್ಠ ಗೊಳಿಸ ಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ. ಸಾಕಾರ ರತ್ನ ಪುರಸ್ಕೃತ ಎಂ.ನರೇಂದ್ರ ಮಾತನಾಡಿ. ಕಾರ್ಯದರ್ಶಿಗಳು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರದ ಜೊತೆಯಲ್ಲಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾದ ಗುಣಮಟ್ಟದ.

ಆಹಾರ ಪದ್ಧತಿಯನ್ನು ಬಯಸುವ ಜನತೆಗೆ. ಉತ್ಕೃಷ್ಟ ಉತ್ಪಾದನೆಯನ್ನು ನೀಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದ್ದು. ಸರ್ಕಾರದ ಹಾಗೂ ಫೆಡರೇಶನ್ ನಲ್ಲಿ ಸವಲತ್ತನ್ನು ಪಡೆದು. ರಾಸುಗಳ. ಆರೋಗ್ಯ ಮತ್ತು. ಸದಸ್ಯರುಗಳಿಗೆ ಲಾಭ ದಾಯಕವಾಗುವ. ಹಾಲು ಉತ್ಪಾದನೆ ಹೆಚ್ಚಿಸುವ ಮಾರ್ಗದರ್ಶನ ನೀಡುವ ಕರ್ತವ್ಯ ಕಾರ್ಯದರ್ಶಿಗಳದಾಗಿದೆ ಎಂದರು. ಕಾರ್ಯಕ್ರಮದಲ್ಲಿ. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ. ಕೆ.ಎಂ.ಎಫ್ ವೈದ್ಯಾಧಿಕಾರಿ ಡಾಕ್ಟರ್ ಪ್ರಸನ್ನ ಹಾಗೂ. ಸಹಾಯಕ ವ್ಯವಸ್ಥಾಪಕ ರನ್ನಕುಮಾರ್. ವಿಶೇಷ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಟಿ.ಕೆ ಜಗದೀಶ್. ಚೈತ್ರ ಇವರು ಭಾಗವಹಿಸಿ ಕಾರ್ಯಕ್ರಮದಲ್ಲಿ ಸಾಕಾರ ನಿರ್ದೇಶಕರಾದ ಶಶಿಕುಮಾರ್. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶಸ್.ಹೆಚ್. ಕೆ kmf ತನಾಧಿಕಾರಿಗಳಾದ ಯದುರಾಜ್ ಭರತ್ ಹಾಗೂ ಅಕ್ಕನಾಗಮ ಮತ್ತು ಇಂದ್ರೇಶ್ ಅವರು ನಿರೂಪಿಸಿ ವಂದಿಸಿದರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button