ವ್ಯಕ್ತಿ ಕಾಣೆ – ಪತ್ತೆಗಾಗಿ ಪ್ರಕಟಣೆ.
ಮಾರ್ಕಬ್ಬಿನಹಳ್ಳಿ ಡಿ.14

ದೇವರ ಹಿಪ್ಪರಗಿ ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಯಲ್ಲಪ್ಪ ಸಿದ್ದಪ್ಪ ಪಡಗಾನೂರ ಇವರು ಹೆಂಡತಿ ಮಕ್ಕಳ ಜೊತೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಹುಲಿಕಟ್ಟಿ ಗ್ರಾಮಕ್ಕೆ ಹನ್ನೊಂದು ತಿಂಗಳ ಹಿಂದೆ ಇಟ್ಟಿಗೆ ತಯಾರಿಕೆ ಕೆಲಸಕ್ಕೆ ಉಪ ಜೀವನಕ್ಕಾಗಿ ಹೋಗಿರುತ್ತಾರೆ.ಯಲ್ಲಪ್ಪ ಪಡಗಾನೂರ ಇವರ ಮಗ ಕೆಂಚಪ್ಪ ಪಡಗಾನೂರ ವಯಾ 25 ವರ್ಷ, ಜಾತಿ ಹಿಂದೂ ಕುರುಬ, ಉದ್ಯೋಗ ಕೂಲಿ ಕೆಲಸ ಎಸ್.ಎಫ್.ಎಸ್ ಇಟ್ಟಂಗಿ ಬಟ್ಟಿಯಿಂದ ದಿನಾಂಕ: 16/01/2024 ರಂದು ಮಧ್ಯಾಹ್ನ ಎರಡು ಘಂಟೆ ಸುಮಾರಿಗೆ ಹುಲಿಕಟ್ಟಿ ಗ್ರಾಮದ ಎಸ್.ಎಫ್.ಎಸ್ ಇಟ್ಟಂಗಿ ಬಟ್ಟಿಯಿಂದ ವಾಸವಿದ್ದ ರೂಮ್ಮಿನಿಂದ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲೋ ಹೋಗಿ ಕಾಣಿಯಾಗಿದ್ದಾನೆ.ನೆಂಟರಿಷ್ಟರ ಮನೆ ಮತ್ತು ಆತನಿಗೆ ಹುಡುಕಾಟ ನಡೆಸುವುದರ ಜತೆಗೆ ಉಳಿದ ಕಡೆ ಹುಡುಕಾಟ ನಡೆಸಿದರು ಪ್ರಯೋಜನವಾಗದೆ. ಕಾಣಿಯಾಗಿರುವ ಬಗ್ಗೆ ಆತನ ತಂದೆ ಯಲ್ಲಪ್ಪ ಪಡಗಾನೂರ ರವರು ಕುಮಾರ ಪಟ್ಟಣಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಾಣಿಯಾದ ವ್ಯಕ್ತಿಯ ತಂದೆ ವಾಸ ಮಾರ್ಕಬ್ಬಿನಹಳ್ಳಿ ಗ್ರಾಮದ ದೇವರ ಹಿಪ್ಪರಗಿ ತಾಲ್ಲೂಕಿನ ವಿಜಯಪುರ ಜಿಲ್ಲೆಯಲ್ಲಿ ಇರುತ್ತಾರೆ.ಕಾಣಿಯಾಗಿರುವ ವ್ಯಕ್ತಿಯ ವಯಸ್ಸು 25, ಆತ ತೆರಳುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಚಹರೆ, ಸುಮಾರು 05 ಅಡಿ 1 ಇಂಚು, ಎತ್ತರ, ಗೋದಿ ಕೆಂಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು, ನೀಟಾದ ಮೂಗು,ಕನ್ನಡ ಭಾಷೆ ಮಾತನಾಡುತ್ತಾನೆ. ವ್ಯಕ್ತಿ ಎಲ್ಲಿಯಾದರು ಪತ್ತೆಯಾದರೆ. (08373) 242208, ಮೊಬೈಲ್ ನಂಬರ್, 9480804553, ಸಂಪರ್ಕಿಸಲು ಕೋರಲಾಗಿದೆ.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ