ಅಧಿವೇಶನದಲ್ಲಿ ಪ್ರತ್ಯೇಕ ಬಡ್ಜೆಟ್ ಮಂಡನೆ ಮಾಡಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಎದುರಿಸಬೇಕಾಗುತ್ತದೆ ಎಂದು ದೇವರಮನೆ ಮಹೇಶಪ್ಪ ಎಚ್ಚರಿಕೆ ನೀಡಿದರು.
ಹ್ಯಾಳ್ಯಾ ಜೂನ್.13

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಹ್ಯಾಳ್ಯಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ರಿ) ಹಾಗೂ ಹಸಿರು ಸೇನೆ ಉದ್ಘಾಟಿಸಲಾಯಿತು.ಎಲ್ಲಾ ರೈತರು ಸಂಘಟಿತರಾಗಿ ಹಸಿರು ಶಾಲು ಧರಿಸುವುದರ ಮೂಲಕ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಬಲ ನೀಡಿ ಇವತ್ತಿನ ರಾಜಕೀಯ ವ್ಯಕ್ತಿಗಳು ಹಸಿರು ಶಾಲನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಇಂತಹ ಸಂದರ್ಭದಲ್ಲಿ ರೈತರು ಎಚ್ಚೆತ್ತುಕೊಳ್ಳಬೇಕು ಯಾವುದೇ ಅಧಿಕಾರಿಗಳಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಹಣ ಕೇಳಿದರೆ ನೀಡಬಾರದು ಎಂದು ಎನ್. ಭರಮಣ್ಣ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ತಿಳಿಸಿದರು.ಟ್ರಾನ್ಸ್ಫರಂ ಸುಟ್ಟರೆ ಯಾವುದೇ ರೈತ ಭಯಪಡುವಂತಿಲ್ಲ ಯಾವುದೇ ಅಧಿಕರಿಗೆ ಹಣ ನೀಡುವಂತಿಲ್ಲ.

24 ತಾಸು ಒಳಗಾಗಿ ಟ್ರಾನ್ಸ್ಫಾರಂ ರೈತನಿಗೆ ನೀಡಬೇಕು ಪ್ರತ್ಯೇಕವಾಗಿ ರೈತರಿಗೆ ರಸಗೊಬ್ಬರ ಬೀಜ ಮತ್ತು ಬೆಳೆ ನಷ್ಟವಾದರೆ ಅಧಿವೇಶನದಲ್ಲಿ ಪ್ರತ್ಯೇಕ ಬಡ್ಜೆಟ್ ಮಂಡನೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ನಮ್ಮ ಸುದ್ದಿವಾಹಿ ಮೂಲಕ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸರ್ಕಾರಕ್ಕೆ ದೇವರಮನೆ ಮಹೇಶಪ್ಪ ಎಚ್ಚರಿಕೆ ನೀಡಿದರು.5 ಗ್ಯಾರಂಟಿ ಉಚಿತ ಖಚಿತ ಎಂಬ ನೀತಿಗಳನ್ನು ಬಿಟ್ಟು ನಮ್ಮ ರೈತರಿಗೆ ಈಗಾಗಲೇ ಆಳುವಂತ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವುದಾಗಿ ಬರೀ ಸುಳ್ಳು ಹೇಳಿಕೆಗಳನ್ನು ಕೇಳಿ ಸಾಕಾಗಿದೆ, ಆದರೆ ಇಗಿರುವ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಬೇಡಾ, ರೈತರು ಸರಿಯಾಗಿ ಬೆಳೆದಂತಹ ಬೆಳೆಯ ಫಲಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ ನೀವು ಇಂತಹ ಕೆಲಸ ಮಾಡಿದ್ದೆ ಆದರೆ ಸರ್ಕಾರಕ್ಕೆ ರೈತನೆ ಸಾಲ ನೀಡುತ್ತಾನೆ ಎಂದು ಶಿವನಂದಪ್ಪ ಹಗರಿಬೊಮ್ಮನಹಳ್ಳಿ ರೈತ ಸಂಘದ ತಾಲೂಕು ಅಧ್ಯಕ್ಷರು ತಿಳಿಸಿದರು. ಹಾಗೂ ಕೊಟ್ಟೂರಿನಲ್ಲಿ ಹೊಸದಾಗಿ ತರಕಾರಿ ಮಾರುಕಟ್ಟೆ ತೆರೆದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಎಂದು ಕರಿ ಬಸವರಾಜ್ ಗುಬ್ಬಿ, ಮೇಲೆ ತಿಳಿಸಿದರು ಚನ್ನಬಸಪ್ಪ , ನಾಗಪ್ಪ ,ರೈತ ಸಂಘದ ತಾಲೂಕು ಅಧ್ಯಕ್ಷರುಗಳು ಹಾಗೂ ನಿಜಲಿಂಗಪ್ಪ ಗ್ರಾಮದ ಘಟಕ ಅಧ್ಯಕ್ಷರು, ಹಡಗಲಿ ರೇವಪ್ಪ ಉಪಾಧ್ಯಕ್ಷರು, ಮತ್ತು ಸಂಘದ ಸದಸ್ಯರುಗಳು ಸುತ್ತಮುತ್ತಲಿನ ರೈತ ಸಂಘದ ಸದಸ್ಯರು ಮತ್ತು ಅಧ್ಯಕ್ಷರುಗಳು ಹಾಗೂ ಹ್ಯಾಳ್ಯ ಗ್ರಾಮಸ್ಥರು ಭಾಗವಹಿಸಿದ್ದರು. ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ