ಕಳ್ಳತನ, ಅಪರಾಧ ಕುರಿತು ಜನರಿಗೆ ಮಾಹಿತಿ ತಿಳಿಸಿದ – ಪಿ.ಎಸ್.ಐ ವೀರಭದ್ರಯ್ಯ ಹಿರೇಮಠ.
ಮಾನ್ವಿ ಡಿ.15

ಮಾನ್ವಿಯ ಜನತೆ ಜಾಗರೂಕತೆ ಯಿಂದ ಇರುವುದರ ಜೊತೆಗೆ ಕಳ್ಳರ ಬಗ್ಗೆ ಎಚ್ಚರ ದಿಂದರ ಬೇಕು ಎಂದು ಪಿ.ಎಸ್.ಐ ವೀರಭದ್ರಯ್ಯ ಹಿರೇಮಠ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸಂತೆ ಮಾರುಕಟ್ಟೆ ಹಾಗು ಸಾರ್ವಜನಿಕರ ಸಂಚಾರ ಇರುವ ಕಡೆ ಜಾಗೃತಿ ಅಭಿಯಾನ ಮಾಡಿ ಪಿ.ಎಸ್.ಐ ವೀರಭದ್ರಯ್ಯ ಹಿರೇಮಠ ಕಾನೂನಿನ ನಿಯಮಗಳ ಬಗ್ಗೆ ತಿಳಿ ಹೇಳಿದರು.
ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ತೆರಳ ಬೇಕಾದರೆ ಎಚ್ವರ ದಿಂದರ ಬೇಕು. ಸಾರ್ವಜನಿಕರು ಕೊರಳಲ್ಲಿ ಬಂಗಾರ ಹಾಕ ಬಾರದು.
ಹಾಗೆಯೇ ಮೊಬೈಲನ್ನು ಸಹ ಕೈಯಲ್ಲಿ ಅಥವಾ ಜೇಬಲ್ಲಿ ಇಟ್ಟು ಕೊಳ್ಳಬಾರದು, ಕಳ್ಳರು ಎಗರಿಸುವ ಕೆಲಸ ಮಾಡುತ್ತಾರೆಂದು ಜಾಗೃತಿ ಮೂಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

