ತಾಲೂಕಿನ ಕೊರವಿ ಗ್ರಾಮದ ಮರಿಯಮ್ಮ ಅಜ್ಜಿಯ ಕಷ್ಟದ ಪಡಿಪಾಟಲು – ಕೇಳುವವರ್ಯಾರು….?
ಕೊರವಿ ಡಿ.16

ಸರಕಾರದ ಯೋಜನೆಗಳು ಮನೆ ಬಾಗಿಲಿಗೆ ಮುಟ್ಟಿಸುತ್ತೇವೆ. ಎಂದು ಹೇಳುತ್ತೆ ಸರಕಾರ, ಆದರೆ ಮಾನ್ವಿ ತಾಲೂಕಿನ ಕೊರವಿ ಗ್ರಾಮದ ಮರಿಯಮ್ಮಜ್ಜಿ ವೃದ್ಧಾಪ್ಯ ವೇತನಕ್ಕಾಗಿ ಮಾನ್ವಿ ಕಂದಾಯ ಕಚೇರಿಗೆ ನಿತ್ಯ ಅಲೆಯುತ್ತಿದ್ದಾರೆ.ಶಾಸಕ ಬಸನಗೌಡ ದದ್ದಲ್ ಸಾಹೇಬ್ರೆ ನಿಮ್ಮ ಕ್ಷೇತ್ರವಾದ ಕೊರವಿ ಗ್ರಾಮದ ಮರಿಯಮ್ಮಜ್ಜಿಯ ಪಡಿಪಾಟಲನ್ನ ನೋಡಿಸ್ವಾಮಿ ವೃದ್ಧಾಪ್ಯ ವೇತನಕ್ಕಾಗಿ ತಿಂಗಳುಗಳಿಂದ ಅಲೆ ಯುತ್ತಿದ್ದಾರೆ. ಅಜ್ಜಿಯ ಕಷ್ಟವನ್ನು ನೋಡಿ ಯಾದರು ದರಿದ್ರ್ಯ ಅಧಿಕಾರಿಗಳಿಗೆ ಕರುಣೆ ಬಾರದ ಕಾರಣ ಕಂದಾಯ ಕಚೇರಿಗೆ ಮರಿಯಮ್ಮಜ್ಜಿ ಅಲೆಯುತ್ತಿದ್ದಾರೆ.
ಮಾನ್ವಿ ಕಂದಾಯ ಇಲಾಖೆಯ ಸಿಬ್ಬಂದಿಗೆ ರೊಕ್ಕ ಬಂದಿಲ್ಲ ಸಾಹೇಬ್ರೆ ನೋಡಿ ಸ್ವಾಮಿ ಎಂದು ಕೈ ಮುಗಿದು ಕೇಳಿ ಕೊಂಡರು ಅಜ್ಜಿಯ ಕಷ್ಟ ಯಾರಿಗೆ ಹೇಳಬೇಕು ಎಂಬುದು ತಿಳಿಯದಾಗಿದೆ. ಒಟ್ಟಾರೆಯಾಗಿ ನೋಡಿದರೆ ಬಡವರ ಯೋಜನೆಗಳಿಗಾಗಿ ಯಾವ ರೀತಿ ಅಲೆಯ ಬೇಕಾಗಿದೆ ನೋಡಿಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ