ಪಟ್ಟಣದಲ್ಲಿ ಸಾರ್ವಜನಿಕರ ಪರದಾಟ ಸಾರಿಗೆ ಇಲಾಖೆ ಅಧಿಕಾರಿಗಳ – ದಿವ್ಯ ನಿರ್ಲಕ್ಷ್ಯ, ಮೂಲಭೂತ ಸಮಸ್ಯೆಗಳ ಆಗರ.
ಮಾನ್ವಿ ಡಿ.16

ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಸಾರಿಗೆ ಪ್ರಯಾಣಿಕರು ಬಸ್ ಗಾಗಿ ಬಿಸಿಲೆನ್ನದೆ ರಾಜ್ಯ ಹೆದ್ದಾರಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದ್ದು, ಯಾರಾದರು ಸತ್ತರೆ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡದೆ ಇರುವುದರಿಂದ ನೆರಳಿಲ್ಲವಾಗಿದೆ, ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ಶೌಚಾಲಯ ವ್ಯವಸ್ಥೆ ಮಾಡದ ಕಾರಣ ತಾಲೂಕ ಪಂಚಾಯತಿ ಹಳೆ ಕಚೇರಿಯ ಗೋಡೆಗಳೆ ಆಸರೆಯಾಗಿದೆ ಎಂದು ಕೆ.ಆರ್.ಎಸ್ ಮುಖಂಡರ ಆರೋಪವಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಬಸವ ವೃತ್ತದಲ್ಲಿ ಯಾರು ಇಲ್ಲದ ಕಾರಣ ಯಾವ ಸಮಯಕ್ಕೆ ಯಾವ ಬಸ್ ಬರುತ್ತದೆ ಎಂಬುದು ತಿಳಿಯದಾಗಿದೆ, ಇದನ್ನು ಜವಾಬ್ದಾರಿಯುತವಾಗಿ ನೋಡಬೇಕಾದ ಅಧಿಕಾರಿಗಳು ಮನೆಯಲ್ಲಿ ಮಲಗಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ