“ಜಗದಿ ಬಂಧನ ಬಿಡಿಸಿಬದುಕು ಚಂದನವಾಗಿಸಿ”…..

“ಜಗದಿ ಬಂಧನ ಬಿಡಿಸಿ
ಬದುಕು ಚಂದನವಾಗಿಸಿ”
ಸೃಷ್ಠಿಯ ಜೀವಸಂಕುಲಗಳ ಬಂಧನ
ಸೂರ್ಯ ಚಂದ್ರರು ಜಗದ ಕಾವಲು
ಮಾನವ ದೇಹದೊಳ ಆತ್ಮ ಬಂಧನ
ಮಾನವ ಜೀವನ ಚಂದನ
ಭೂದೇವಿ ಒಡಲೊಳು ಸಸ್ಯಕುಲ
ಸರ್ವಜೀವ ಬಂಧನ
84 ಲಕ್ಷ ಜೀವರಾಶಿಗಳ ಚಂದನ
ತಾಯಿ ಒಡಲಲಿ ಮಗು ಬಂಧನ
ಜನಸಿದಾಕ್ಷಣ ಚಂದನ
ವಾಸುದೇವ ಕುಟುಂಬದಿ ಬಂಧನ
ಬಾಳುವ ಕ್ಷಣಗಳು ಚಂದನ
ಬಾಲ್ಯದ ಒಡನಾಟ ಬಂಧನ
ಆಟ ಪಾಟದಿ ನಲಿಯುವ
ಕ್ಷಣಗಳ ಮಧುರತೆಯ ಚಂದನ
ಪ್ರೀತಿ ಕರುಣೆ ಬಂಧನ
ವಿಶ್ವ ಬಾಳ ಪಯಣ ಚಂದನ
ಸ್ನೇಹಿತರ ಒಡನಾಟ ಬಂಧನ
ಖುಷಿಯ ಕ್ಷಣಗಳು ಚಂದನ
ವಿದ್ಯ ಶಿಕ್ಷಣ ಕಲಿಕಾ ಬಂಧನ
ಸಾರ್ಥಕತೆಯ ಸಾಧನೆ ಚಂದನ
ಮಡದಿ ಮಕ್ಕಳ ಭಾವ ಬಂಧನ
ಸುಖ ದುಃಖ ಬಾಳಪಯಣ
ಜಗದಿ ಚಂದನ
ಮಾನವ ಆಸೆ
ದುರಾಸೆಗಳ ಬಿಡಿಸಿ ಬಂಧನ
ವಿಶ್ವ ಮಾನವೀಯ ಮೌಲ್ಯಗಳ
ಉಳಸಿ ಬೆಳಸುವ ಭಾವ
ಜಗದ ನಿಜ ಚಂದನ
ಜಗದಿ ಬಂಧನ ಬಿಡಿಸಿ
ಬದುಕು ಚಂದನವಾಗಿಸಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಮಾನವ ಜೀವರಕ್ಷಕ”
ರಾಷ್ಟ್ರೀಯ ಐಕಾನ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.