ಗಿನ್ನಿಸ್ ದಾಖಲೆ ಪಟ್ಟಿಗೆ, ಕುಮಾರಿ ಆರಾಧನ ಸುಭೋದ ರಾಬಾ – ಹೆಸರು ಸೇರ್ಪಡೆ.
ರೋಣ ಡಿ.17
ಪಟ್ಟಣದ ಗ್ರೀನವುಡ್ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 5 ನೇ. ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಆರಾಧನ ಸುಭೋದ ರಾಭ ಬೆಂಗಳೂರಿನಲ್ಲಿ ನಡೆದ ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಭಾಗವಹಿಸಿ ಪ್ರಾಚೀನ ಕಾಲದ ಗಂಧರ್ವ ವಿದ್ಯಾ ಈಗಿನ ಮೈಂಡ್ ಮಿರಾಕಲ್ ವಿದ್ಯೆಯನ್ನು ಗೋಕುಲ ಧಾಮ ಮಂಗಳೂರಿನ ಮಾತಾ ರೂಪಶ್ರೀ ಜಿ ಗುಡ್ಡದ ಅವರಲ್ಲಿ ತರಬೇತಿ ಪಡೆದು ಕಣ್ಣು ಮುಚ್ಚಿಕೊಂಡು ನಾಲ್ಕು ಬಣ್ಣಗಳ ವಿಂಗಡಣೆ ಹಾಗೂ ಚಿತ್ರಗಳಿಗೆ ಬಣ್ಣ ತುಂಬುವದು ಮತ್ತು ಓದುವುದು ಬರೆಯುವುದನ್ನು ಕೇವಲ 6 ನಿಮಿಷದಲ್ಲಿ ಪೂರ್ಣ ಗೊಳಿಸುವ ಮೂಲಕ ಗಿನ್ನಿಸ್ ದಾಖಲೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾಳೆ. ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಶಾಲೆಯ ಅಧ್ಯಕ್ಷರಾದ ಶ್ರೀ ಅವಿನಾಶ್ ಸಾಲಿಮನಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾ ರಾಬಾ ಶ್ರೀ ಮಹೇಶ ಅಚ್ಚಿನಗೌಡ್ರ ಶಾಲೆಯ ಶಿಕ್ಷಕ, ಶಿಕ್ಷಕಿಯರ ವರ್ಗ ಹಾಗೂ ಚಾಲಕರ ವೃಂದ ಅಭಿನಂದನೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ