ಅಕ್ರಮ ಮಧ್ಯ ಮಾರಾಟ ತಡೆ ಯಾವಾಗ, ಬಿ.ಬಾಲಗಂಗಾಧರ್ ಸಿ.ಪಿ.ಐ.ಎಂ.ಎಲ್ – ಪಕ್ಷದ ತಾಲೂಕ ಕಾರ್ಯದರ್ಶಿಗಳು.
ರಾಮನಾಯಕನಹಳ್ಳಿ ಡಿ.18

ಕೊಟ್ಟೂರು ತಾಲೂಕಿನ ಹಾರಾಳು ಮತ್ತು ರಾಮನಾಯಕನಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಗಟ್ಟಿ ಮಾರಾಟಗಾರರ ವಿರುದ್ಧ ಮೊಕದಮ್ಮೆ ದಾಖಲಿಸಲು ಮತ್ತು ಅಮಾಯಕರ ಮಹಿಳೆ ಮತ್ತು ಮಕ್ಕಳ ಜೀವನ ಹಾಳಾಗುತ್ತಿದ್ದು ಜೀವನ ನಡೆಸಲು ಸೂಕ್ತ ರೀತಿ ಕ್ರಮ ಕೈಗೊಳ್ಳಲು ಕೋರಿ ಮಾನ್ಯ ತಹಶೀಸಿಲ್ದಾರರಿಗೂ ಹಾಗೂ ಪಿ.ಎಸ್.ಐ ಇವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಲಿವರೇಷನ್ ಸಂಘದ ವತಿಯಿಂದ ಮತ್ತು ಹಾರಳು ಮತ್ತು ರಾಮನಾಯಕನಹಳ್ಳಿ ಮಹಿಳೆಯರು ಮತ್ತು ಪುರುಷರು ಮನವಿ ಮಾಡಿ ಕೊಳ್ಳಲಾಯಿತು. ಹಾರಳು ಮತ್ತು ರಾಮನಾಯಕನ ಹಳ್ಳಿಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಏಗ್ಗಿಲ್ಲದೆ ನಡೆಸುತ್ತಿದ್ದಾರೆ ನಮ್ಮ ಗ್ರಾಮಗಳಲ್ಲಿ ಸಣ್ಣ ಪುಟ್ಟ ಮಕ್ಕಳು ಸಹ ಬೆಳಿಗ್ಗೆ 6 ಗಂಟೆಯಿಂದ ಕುಡಿಯುತ್ತಾರೆ ಮನೆಯಲ್ಲಿ ಇಬ್ಬರು ಮೂವರು ಕುಡಿದರೆ ಸಂಸಾರದಲ್ಲಿ ಕಲಹ ಉಂಟಾಗಿ ನಮ್ಮ ಜೀವನ ಬೀದಿಗೆ ಬರುವಂತಾಗಿದೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ನಮ್ಮ ಊರಿನಲ್ಲಿ ಮಧ್ಯ ಮಾರಾಟ ಮಾಡುವಂತಿಲ್ಲ ಎಂದು ತಿಳಿ ಹೇಳಿದರು.

ಸಹ ಅಕ್ರಮ ಮಧ್ಯ ಮಾರಾಟ ವಾಗುತ್ತದೆ ಕುಡುಕ ಗಂಡರಿಂದ ಹೆಂಡತಿಯರ ಪಾಡಂತೂ ಹೇಳುತಿರದು ಆದ್ದರಿಂದ ತಾವುಗಳು ಮುಂದಿನ 15 ದಿನದ ಒಳಗೆ ಅಕ್ರಮ ಮಧ್ಯ ಬಂದ್ ಮಾಡಿಸ ಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಿ.ಪಿ.ಐ.ಎಂ.ಎಲ್ ಪಕ್ಷದ ಬಣಕಾರ್ ಬಾಲಗಂಗಾಧರ್ ಕೊಟ್ಟೂರ ತಾಲೂಕ ಕಾರ್ಯದರ್ಶಿ ಮತ್ತು ಸಂತೋಷ್ ಗುಳಿದಟ್ಟಿ ಸಿ.ಪಿ.ಐ.ಎಂ.ಎಲ್ ಪಕ್ಷದ ಜಿಲ್ಲಾ ಮುಖಂಡರು ಮತ್ತು ಸಂಘದವರು ವನಜಾಕ್ಷಮ್ಮ ಗೋಣಿ ಬಸಮ್ಮ ರೇಖಮ್ಮ ರತ್ನಮ್ಮ ಪಕೀರಮ್ಮ ದುರ್ಗಮ್ಮ ನಾಗಮ್ಮ ಗಂಗಮ್ಮ ಮತ್ತಿತರರು ನಮ್ಮ ಪತ್ರಿಕೆಗೆ ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು