ಡಾಂಬರೀಕರಣ ನೆಪದಲ್ಲಿ 4 ಕೋಟಿ ರೂಪಾಯಿ ಲೂಟಿ – ಪಿ.ಡಬ್ಲ್ಯೂ.ಡಿ ಅವ್ಯವಸ್ಥೆಯ ಆಗರ.
ಮಾನ್ವಿ ಡಿ.18





ಗ್ರಾಮೀಣ ಭಾಗದ ರಸ್ತೆ ಮಾಡುವುದಕ್ಕಾಗಿ ಲೋಕೋಪಯೋಗಿ ಇಲಾಖೆ ಮೂಲಕ ಸರಕಾರ ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತೆ. ಆದರೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ಪೋತ್ನಾಳ್ ಚರ್ಚ್ ನಿಂದ ವೆಂಕಟೇಶ ಕ್ಯಾಂಪ್ ವರೆಗೂ ಲೋಕೋಪಯೋಗಿ ಇಲಾಖೆಯಿಂದ ಅಪೆಂಡಿಕ್ಷ್ ಇ ಯೋಜನೆಯಡಿ ನಡೆದ ಡಾಂಬರೀಕರಣ ಕಾಮಗಾರಿ ನೆಪದಲ್ಲಿ 4 ಕೋಟಿ ರೂಪಾಯಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ.
2018-19 ನೇ. ಸಾಲಿನ ಅಪೆಂಡೆಕ್ಸ್ ಇ ಯೋಜನೆಯಡಿ ಗುತ್ತಿಗೆದಾರ ವೆಂಕಟೇಶ ಯಾದವ್ ಕಾಮಗಾರಿ ಕೈಗೊಂಡು ಮಾನ್ವಿ ಲೋಕೋಪಯೋಗಿ ಅಭಿಯಂತರ ಹಾಗೂ ಎ.ಇ.ಇ ಸಾಮುವೇಲಪ್ಪ ಸಾಹೇಬ್ರು ಸೇರಿಕೊಂಡು ಕಳಪೆ ಕಾಮಗಾರಿ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣನಾಯಕ ಗಂಭಿರವಾಗಿ ಆರೋಪಿಸಿದ್ದಾರೆ.
ಎ.ಇ.ಇ ಸಾಮುವೇಲಪ್ಪ ಸಾಹೇಬ್ರ ಡಾಂಬರೀಕರಣ ಕಾಮಗಾರಿ ರಸ್ತೆ ಕಿತ್ತೋಗಿದೆ ಅಂದ ಮೇಲೆ ನಿಮಗೆಷ್ಟು ಪಾಲು ಮುಟ್ಟಿದೆ ಅನ್ನುವುದಕ್ಕೆ ರಸ್ತೆ ದಿವಾಳಿ ಎದ್ದಿರುವುದೇ ಇದಕ್ಕೆ ಸಾಕ್ಷಿ ಎಂದು ಎದ್ದು ಕಾಣುತ್ತಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ