ಎಸ್ಸಿ/ಎಸ್ಟಿ ಅನುದಾನ ದುರ್ಬಳಕೆ ಪ್ರಭುರಾಜ ಕೊಡ್ಲಿಯಿಂದ ನಡೆಯುತ್ತಿರುವ – ಧರಣಿ ಸತ್ಯಾಗ್ರಹ.
ಮಾನ್ವಿ ಡಿ.18





ಪ್ರಭುರಾಜ ಕೊಡ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನ ದುರ್ಬಳಕೆ ಯಾಗುತ್ತಿರುವ ಆರೋಪ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ ರಿಂದ ಬಟಾಬಯಲಾ ಗಿರುವುದು ಬೆಳಕಿಗೆ ಬಂದಿದೆ. ಮಾನ್ವಿ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಯ ನಿಯಮಗಳೆ ಬದಲಿಸಿ ಅಧಿಕಾರಿಗಳಿಗೆ ರಾಜಕಾರಣಿಗಳು ಒತ್ತಡ ಏರುತ್ತಿದ್ದ ರಿಂದ ಎಸ್ಸಿ/ಎಸ್ಟಿ ಅನುದಾನ ದುರ್ಬಳಕೆ ಯಾಗುತ್ತಿದೆ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿಯೇ ಬಯಲಾಗಿದೆ.
ಮಾನ್ವಿ ಅಭಿವೃದ್ಧಿ ಯಾಗಬೇಕು, ಆದರೆ ರಾಜಕಾರಣಿಗಳ ಕುತಂತ್ರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಮುಟ್ಟ ಬೇಕಾದ ಅನುದಾನ ಬೇರೆ ಉದ್ದೇಶಕ್ಕಾಗಿ ಬಳಕೆ ಯಾಗಿರುವುದು ನೋಡಿದರೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ