ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ – ಸದಸ್ಯರಿಗೆ ಸಮವಸ್ತ್ರ ವಿತರಣೆ.
ಹುನಗುಂದ ಡಿ.19

ಹುನುಗುಂದ ಮತ್ತು ಬಾಗಲಕೋಟೆ ತಾಲೂಕಿನಲ್ಲಿ ಶೌರ್ಯ ಘಟಕದ ಸ್ವಯಂ ಸೇವಕರ ಜೀವನ ರಕ್ಷಣಾ ಕೌಶಲ್ಯ ತರಬೇತಿಯಲ್ಲಿ ಹುನಗುಂದ ತಾಲೂಕಿನ ತಹಶೀಲ್ದಾರಾದ ನಿಂಗಪ್ಪ ಬಿರಾದರ್ ಉದ್ಘಾಟನೆ ಮಾಡಿದರು, ಮತ್ತು ಅಧ್ಯಕ್ಷತೆಯನ್ನು ಶಕ್ರಪ್ಪ ಹೂಗಾರ ವಹಿಸಿ ಕೊಂಡಿದ್ದರು. ರಕ್ಷಣೆಗೆ ಮಾಡಿಕೊಂಡು ವಿಪತ್ತು ನಿರ್ವಹಣೆ ಮಾಡುವ ಸಲುವಾಗಿಯೇ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಕಾಲ ಕಾಲಕ್ಕೆ ಸಂಬಂಧಪಟ್ಟ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಚನ್ನಕೇಶ ರವರು ಹೇಳಿದರು.

ಅದೇ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ಸಮವಸ್ತ್ರವನ್ನು ವಿತರಿಸಿದರು.ತರಬೇತುದಾರರಾದ ಸಂತೋಷ ಪೀಟರ್ ಡಿಸೋಜ ಅವರು, ವಿಪತ್ತು ಎದುರಾದಾಗ ಸನ್ನದ್ದತೆ, ಅಪಾಯ ಗುರುತಿಸುವಿಕೆ, ತಕ್ಷಣದ ಸ್ಪಂದನೆಗೆ ಅಗತ್ಯ ಕ್ರಮಗಳು, ಅಗತ್ಯ ಪರಿಕರಗಳು, ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಘಡ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳು ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಹುನಗುಂದ ತಾಲೂಕಿನ ಪಿ.ಎಸ್.ಐ ಪ್ರಕಾಶ್ ಹಾಗೂ ಶೌರ್ಯ ವಿಪತ್ತು ಯೋಜನಾ ಅಧಿಕಾರಿಗಳಾದ ಶ್ರೀ ಕಿಶೋರ್ ಕುಮಾರ್, ಜನಜಾಗೃತಿ ಯೋಜನಾ ಅಧಿಕಾರಿಗಳಾದ ನಾಗೇಶ್ ವೈ,ಎ ಕ್ಷೇತ್ರ ಯೋಜನಾ ಅಧಿಕಾರಿಗಳಾದ ಸಂತೋಷ, ಕೃಷಿ ಮೇಲ್ವಿಚಾರಕರು ತಾಲೂಕು ವಿಚಕ್ಷಣಾಧಿಕಾರಿಗಳು ಹುನಗುಂದ ಬಾಗಲಕೋಟೆ ಶೌರ್ಯ ಘಟಕದ ಕ್ಯಾಪ್ಟನ್ ಘಟಕದ ಸಂಯೋಜಕೀಯರು ಹಾಗೂ ಹುನಗುಂದ ಮತ್ತು ಬಾಗಲಕೋಟ ತಾಲೂಕಿನ ಎಲ್ಲಾ ಶೌರ್ಯ ಘಟಕದ ಸ್ವಯಂ ಸೇವಕರು ಭಾಗವಹಿಸಿದ್ದರು.