ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಒತ್ತಾಯಿಸಿ, ನಡೆದ ಧರಣಿ ಸತ್ಯಾಗ್ರಹ – 10 ನೇ. ದಿನಕ್ಕೆ ಕಾಲಿಟ್ಟಿದೆ.
ಬೆಳಗಾವಿ ಡಿ.19

ವೇದಿಕೆಯನ್ನು ಅಲಂಕರಿಸಿ ಮಾತನಾಡಿದ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಚಿಕ್ಕೋಡಿ ಜಿಲ್ಲೆ ಆಗುವುದರಿಂದ ಕೇವಲ ಚಿಕ್ಕೋಡಿ ಜನರಿಗೆ ಮಾತ್ರ ಉಪಯೋಗವಾಗದೆ, ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ಭಾಗದ ಎಲ್ಲ ಜನರಿಗೂ ಸಹಕಾರಿಯಾಗಲಿದೆ, 50 ಲಕ್ಷಕ್ಕೂ ಮೀರಿ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿಯ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ಮಾಡುವ ಅವಶ್ಯಕತೆ ಇದೆ, ಸದನದಲ್ಲಿ ಚಿಕ್ಕೋಡಿ ಜಿಲ್ಲೆಗಾಗಿ ಧ್ವನಿ ಎತ್ತಿರುವ ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಜಿಲ್ಲೆಗಾಗಿ ಕೈಜೋಡಿಸಿರುವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಮತ್ತು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಇವರಿಗೆ ಅಭಿನಂದನೆ ಸಲ್ಲಿಸಿದರು, ಇವರೆಲ್ಲರ ಹಾಗೆ ಚಿಕ್ಕೋಡಿ ಭಾಗದ ಎಲ್ಲ ಶಾಸಕರು ಧ್ವನಿ ಎತ್ತಿ ಬೆಳಗಾವಿ ಜಿಲ್ಲೆಯ ವಿಭಜನೆಗೆ ಮುಂದಾಗಬೇಕು.

ನಾವು ಅಖಂಡ ಕರ್ನಾಟಕವನ್ನು ಬಯಸುವ ಜನರು, ನಮ್ಮ ಆಸೆಯನ್ನು ನೆರೆವೇರಿಸದಿದ್ದರೆ, ಬರುವ ದಿನಗಳಲ್ಲಿ ದಿ. ಉಮೇಶ್ ಕತ್ತಿ ಅವರು ಬಯಸಿದ ಹಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.ವೇದಿಕೆಗೆ ಚಿಕ್ಕೋಡಿ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ರವೀಂದ್ರ ಹಂಪಣ್ಣವರ ಭೆಟ್ಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು, ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆಯಾಗಲೇ ಬೇಕು, ಚಿಕ್ಕೋಡಿ ಜಿಲ್ಲೆ ಆಗುವುದರಿಂದ, ಸರ್ವತೋಮುಖ ಅಭಿವೃದ್ಧಿ ಕಾಣಲಿದೆ, ಉದ್ಯಮಗಳು ಬರುವುದರಿಂದ ಯುವಕರಿಗೆ ಉದ್ಯೋಗಗಳು ಸಿಗಲಿವೆ, ಮಾರುಕಟ್ಟೆಯ ಅಭಿವೃದ್ಧಿ ಆಗಿ ವ್ಯಾಪಾರ ವಹಿವಾಟು ಹೆಚ್ಚಲಿದೆ, ಅಥಣಿಯ ಕೊನೆಯ ಊರಿನ ಜನರಿಗೆ ದೂರದ ಬೆಳಗಾವಿಗೆ ಅಲಿದಾಡುವ ಕೆಲಸ ತಪ್ಪಲಿದೆ, ಕೂಡಲೇ ಜನಪ್ರತಿನಿಧಿಗಳು ಒಮ್ಮತದಿಂದ ಆಸಕ್ತಿ ತೋರಿಸಿ, ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಿಸಬೇಕೆಂದು ಹೇಳಿದರು.ಈ ಸಂಧರ್ಭದಲ್ಲಿ ರವೀಂದ್ರ ಮಾಳಿ, ಖಾನಪ್ಪಾ ಬಾಡಕರ, ದುರದುಂಡೇಶ್ವರ ಬಡಿಗೇರ, ರುದ್ರಯ್ಯಾ ಹಿರೇಮಠ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಚಿದಾನಂದ ಶಿರೋಳೆ, ದಾದಾ ಮಗದುಮ್, ಸಂಜು ಲಟ್ಟೆ, ಅಪ್ಪಾಸಾಹೇಬ ಹಿರೆಕೋಡಿ, ಅಮೂಲ ನಾವಿ, ರಮೇಶ ಡಂಗೇರ, ಮಾಳಪ್ಪಾ ಕರೆಣ್ಣವರ, ದುಂಡಪ್ಪಾ ಚೌಗುಲೆ, ಶಿವಾನಂದ ಮದಾಳೆ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ