ಬೆಳಗಾವಿ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹತ್ತಿರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ – ಎನ್.ವೈ ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮುರು ಡಿ.19

ಇಂದು ಬೆಳಗಾವಿಯ ಚಳಿಗಾಲ ಅಧಿವೇಶನ ಹಿನ್ನೆಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರೊಂದಿಗೆ ಕೆಲವು ಕ್ಷೇತ್ರದ ಅಭಿವೃದ್ಧಿಯ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಹಿಂದೆ ನಾನು ಶಾಸಕನಾಗಿದ್ದಾಗ ರಸ್ತೆಗಳು ಮಾಡಿಸಿದ್ದೆ ಈಗ ಸುಮಾರು 15 ವರ್ಷದಿಂದ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದಾವೆ ನೀವು ಲೋಕೋಪಯೋಗಿ ಸಚಿವರಾಗಿದ್ದೀರಿ ನಮ್ಮ ಕ್ಷೇತ್ರಕ್ಕೆ ರಸ್ತೆಗಳು ಮಾಡಿಸುವುದಕ್ಕೆ ಅನುದಾನ ಬಿಡುಗಡೆ ಮಾಡಿಸಿ ಕೊಡಬೇಕೆಂದು ಮಾನ್ಯ ಲೋಕ ಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹತ್ತಿರ ಮೊಳಕಾಲ್ಮೂರು ಕ್ಷೇತ್ರದ ಗೋಪಾಲಕೃಷ್ಣ ಶಾಸಕರು ಕ್ಷೇತ್ರದ ಅಭಿವೃದ್ಧಿ ಗೋಸ್ಕರ ಕೇಳಿ ಕೊಂಡಿದ್ದಾರೆ ಇದರ ಜೊತೆಗೆ ಕೂಡ್ಲಿಗಿ ಕ್ಷೇತ್ರದ ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು