ಅಂಬೇಡ್ಕರ್ ಕುರಿತು ಅಮಿತ ಶಾ ಹೇಳಿಕೆಗೆ – ತೀವ್ರ ಖಂಡನೆ ಅಂದಪ್ಪ.ಮಾದರ.
ನರೇಗಲ್ ಡಿ.19





ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಡಿ. 17 ರಂದು ಸಂಸತ್ತಿನಲ್ಲಿ ಮಾತನಾಡುವಾಗ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿದ್ದಾನೆ. ಇದು ಖಂಡನೀಯ ಎಂದು ರೋಣ ದಲಿತ ಯುವ ಮುಖಂಡ ಅಂದಪ್ಪ. ಮಾದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಹೇಳಿರುವುದೇನೆಂದರೆ, ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುತ್ತಿರುವುದು. ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ ಏಳು ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು ಎಂದು. ಅಂಬೇಡ್ಕರ್ ಅವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾ ರವರಿಗೆ ಒಂದು ಗಂಭೀರವಾದ ಎಚ್ಚರಿಕೆಯೊಂದನ್ನು ರವಾನಿಸ ಬೇಕಾಗಿದೆ. ಅಮಿತ್ ಶಾ ರವರೆ ನಮಗೆ ಏಳು ಜನ್ಮದ ಪುಣ್ಯ, ಸ್ವರ್ಗ ಬೇಡವೇ ಬೇಡ. ನಮಗೆ ಸ್ವರ್ಗ ನರಕಗಳಲ್ಲಿ ನಂಬಿಕೆ ಇಲ್ಲ. ನಮಗೆ ಅಗತ್ಯವೂ ಇಲ್ಲ. ನಮಗೆ ಅಂಬೇಡ್ಕರ್ ಒಬ್ಬರೇ ಏಕೈಕ ದೇವರು. ಅವರಲ್ಲಿ ಎಂದಿಗೂ ರಾಜಿ ಇಲ್ಲ. ಅಂಬೇಡ್ಕರ್ ಅವರ ಹೆಸರನ್ನು ಉಸಿರಾಗಿಸಿ ಕೊಂಡಿದ್ದೇವೆ. ಕೊನೆಯ ಉಸಿರಿರುವವರೆಗೂ ಅಂಬೇಡ್ಕರ್ ಅವರ ಹೆಸರನ್ನೇ ಉಸಿರಾಗಿಸಿ ಕೊಳ್ಳುತ್ತೇವೆ ಕೂಡಾ ಅಮಿತ್ ಶಾ ರವರೆ ನೀವೆಲ್ಲಾ ಅಂಬೇಡ್ಕರ್ ಅವರ ಸಾಧನೆ, ಏಳಿಗೆಗೆ ಸಹಿಸದೆ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬರುವ ಮೂಲಕ ನಿಮ್ಮ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದೀರಿ. ಅಂಬೇಡ್ಕರ್ ಅವರನ್ನು ಮತ್ತು ಮತ್ತವರ ಸಮುದಾಯಗಳನ್ನು ಒಪ್ಪಿಕೊಳ್ಳಲು ನೀವು ಎಂದಿಗೂ ತಯಾರಿಲ್ಲ. ಇಡೀ ವಿಶ್ವವೇ ಒಪ್ಪಿಕೊಂಡು ವಿಶ್ವ ಸಂಸ್ಥೆ ಇಂದು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ರ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಘೋಷಿಸಿದೆ. ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ. ನೀವು ಅವರನ್ನು ಅರಗಿಸಿ ಕೊಳ್ಳಲು ಆಗದಂತ ಅಸೂಯೆ..ಛೇ.… ನಮಗೆ ನೀವು ಹೇಳುವ ಸ್ವರ್ಗ, ದೇವರು, ಸ್ಮರಣೆ ಬೇಡ. ಅಂಬೇಡ್ಕರ್ ಹೆಸರೊಂದೇ ಸಾಕು. ನಮಗದೇ ಶಕ್ತಿ ನಮಗದೇ ಚೈತನ್ಯ ಮತ್ತು ಸ್ಫೂರ್ತಿ. ಸಾವಿರಾರು ವರ್ಷಗಳಿಂದ ನೀವು ಹೇಳುವ ದೇವರುಗಳನ್ನು ಪೂಜಿಸಿ ಸಾಕಾಯ್ತು. ನಿಮ್ಮ ದೇವರು ನಮ್ಮನ್ನು ದೂರವೇ ಇಟ್ಟ. ಕಡೆಗೆ ಎಲ್ಲರಂತೆ ದೇವಾಲಯ ದೊಳಕ್ಕೆ ಬಿಟ್ಟು ಕೊಳ್ಳಲಿಲ್ಲ ಅದಲ್ಲದೆ , ದೇವಾಲಯದ ಬಳಿಗೆ ಸುಳಿದರೂ ನಮಗೆ ಕಷ್ಟ ಕೊಡುತ್ತಿದ್ದ ನೀವುಗಳು ಅಂಬೇಡ್ಕರ್ ಬಂದ ಮೇಲೆಯೇ ನಮಗೆ ಸ್ವರ್ಗ, ಮೋಕ್ಷ ಎಲ್ಲವೂ.ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿ ಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರು ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಇದು ಸಮಸ್ತ ಜನರಿಗೆ ಗೊತ್ತು. ಆದರೆ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ದೂರದೃಷ್ಟಿಯ ಮೂಲಕ ಪ್ರತಿ ದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಮತ್ತ ಅವರ ಸಂವಿಧಾನ ಎಂಬುದನ್ನು ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ.ಭಾರತದ ಶೂಷಿತ ತಳ ಸಮುದಾಯಗಳ ತಾರತಮ್ಯ ನೊವುನ್ನು ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅನುಭವಿಸಿದ ನಮ್ಮ ಸಮುದಾಯದ, ಬೇರೆಯವರ ಹೆಸರನ್ನು ಹೇಳುತ್ತಾ ಹೋಗಿದ್ದರೆ ಇಷ್ಟೊತ್ತಿಗೆ ನಮ್ಮ ಗತಿ ಅಧೋಗತಿ ಯಾಗುತ್ತಿತ್ತು. ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿ ಸುವಂತಹ ಹೀನ ಭಂಡ ಧೈರ್ಯ ತೋರುತ್ತಿರುವ ಅಮಿತ್ ಶಾ ಅವರು ಸಮಸ್ತ ಭಾರತೀಯರ ಮುಂದೆ ಕ್ಷಮೆಯಾಚಿಸಿ ಬೇಕು ಇಲ್ಲಾ ಅಂದ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರೋಣ ದಲಿತ ಯುವ ಮುಖಂಡ ಅಂದಪ್ಪ ಮಾದರ ಆಕ್ರೋಶ ವ್ಯಕ್ತಪಡಿಸಿದರು.