ಅತಿ ದೊಡ್ಡ ಹೋಬಳಿ ಕಾನಾ ಹೊಸಹಳ್ಳಿ ಗ್ರಾಮದಲ್ಲಿ ಖಾಸಗಿ ಬಸ್ಸ್ ನಿಲ್ದಾಣವೇ ಇಲ್ಲ.
ಕಾನಾ ಹೊಸಹಳ್ಳಿ ನವೆಂಬರ್.23

ಕೂಡ್ಲಿಗಿ ತಾಲೂಕಿನ ಅತಿ ದೊಡ್ಡ ಹೋಬಳಿ ಹೊಸಹಳ್ಳಿ ಪಟ್ಟಣಕ್ಕೆ ಖಾಸಗಿ ಬಸ್ ನಿಲ್ದಾಣ ಇಲ್ಲದೆ ಜನರು ಪರ ದಾಡುವಂತಾಗಿದ್ದು, ಇದರ ಕುರಿತು ಸಂಬಂಧಪಟ್ಟವರು ಪರ್ಯಾಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಾಲಾ-ಕಾಲೇಜು, ವ್ಯಾಪಾರ, ಕೈಗಾರಿಕೆಗಳಲ್ಲಿನ ಕೆಲಸ, ಸರ್ಕಾರಿ ಕಚೇರಿಗಳು ಸೇರಿದಂತೆ ಹತ್ತಾರು ಕೆಲಸಗಳಿಗೆ ಹೋಬಳಿಗೆ ಪ್ರತಿನಿತ್ಯ ಬಸ್ಗಳಲ್ಲಿ ಸಾವಿರಾರು ಜನ ಬಂದು ಹೋಗುತ್ತಾರೆ. ಆದರೆ ಪಟ್ಟಣದಲ್ಲಿ ಬಸ್ಗಳಿಗಾಗಿ ಕಾದು ನಿಲ್ಲುವ ಪ್ರಯಾಣಿಕರು ಕುಳಿತು ಕೊಳ್ಳಲು ಇರಲಿ, ಕನಿಷ್ಠ ನಿಂತು ಕೊಳ್ಳಲು ನೆಲೆ ಇಲ್ಲದೆ ರಸ್ತೆ ಬದಿಗಳಲ್ಲಿ ನಿಂತು ಬಿಸಿಲಿಗೆ ಬಸವಳಿದು ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಖಾಸಗಿ ಬಸ್ಗಳು, ಗ್ರಾಮೀಣ ಭಾಗಕ್ಕೆ ತೆರಳುವ ಆಟೋ ರಿಕ್ಷಾಗಳು ತಾಸುಗಟ್ಟಲೇ ನಿಲ್ಲುತ್ತಿದ್ದು, ಇತರೆ ವಾಹನಗಳು ಹಾಗೂ ಜನ ಸಂಚಾರಕ್ಕೆ ತುಂಬ ಸಮಸ್ಯೆಯಾಗುತ್ತಿದೆ.

ಇದು ನಿನ್ನೆ, ಮೊನ್ನೆಯ ಸಮಸ್ಯೆಯಲ್ಲ, ಹಲವಾರು ವರ್ಷಗಳಿಂದಲೂ ಈ ಭಾಗವನ್ನು ಅನಧಿಕೃತ ರೀತಿಯಲ್ಲಿ ಬಸ್ ನಿಲ್ದಾಣವನ್ನಾಗಿ ಮಾಡಿ ಕೊಳ್ಳಲಾಗಿದೆ. ಇಲ್ಲಿ ಬಸ್ಗಳು ಪ್ರಯಾಣಿಕರನ್ನು ಹತ್ತಿಸಿ ಕೊಂಡು ಹೊರಟರೆ ಸಮಸ್ಯೆ ಆಗಲ್ಲ. ಆದರೆ, ಒಂದರ ಹಿಂದೆ ಒಂದರಂತೆ ಸಾಕಷ್ಟು ಹೊತ್ತು ನಿಲುಗಡೆ ಮಾಡಲಾಗುತ್ತದೆ. ಹೀಗೆ ಬೆಳಗ್ಗೆಯಿಂದ ರಾತ್ರಿ ತನಕ ಒಂದಿಲ್ಲೊಂದು ಬಸ್, ಆಟೋ ರಿಕ್ಷಾಗಳು ನಿಲುಗಡೆ ಮಾಡುವ ಮೂಲಕ ಜೋಡಿರಸ್ತೆಯ ಒಂದು ಭಾಗವನ್ನೇ ಆಕ್ರಮಿಸಿ ಕೊಳ್ಳುತ್ತಿವೆ. ಸಮಸ್ಯೆ ಹೀಗಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಜನತೆಯ ಆರೋಪ.*ಬಾಕ್ಸ್ ಐಟಂ:* ಹೊಸಹಳ್ಳಿ ಪಟ್ಟಣದಲ್ಲಿ ಐದು ವರ್ಷದ ಹಿಂದೆ ಎರಡು ಖಾಸಗಿ ಬಸ್ ನಿಲ್ದಾಣ ಇದ್ದವು, ಎರಡು ಬಸ್ ನಿಲ್ದಾಣವನ್ನು ತೆರೆವು ಗೊಳಿಸಿತ್ತು, ಅಂದಿನಿಂದಲೂ ಇಲ್ಲಿಯವರೆಗೂ ಬಸ್ ನಿಲ್ದಾಣದ ಜಾಗ ಹಾಗೂ ಬಸ್ ನಿಲ್ದಾಣ ಕಾಣೆಯಾಗಿದೆ, ಐದು,ಆರು ವರ್ಷ ಕಳೆದರೂ ಅಧಿಕಾರಿಗಳು ಮೌನ.*ಕೋಟ್:*ಸಾಕಷ್ಟು ಸಮಸ್ಯೆಗಳಿಂದ ನಲುಗಿರುವ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿಗೆ ಆಧಿಕಾರಿಗಳು ಕ್ರಮಕೈಗೊಂಡಿಲ್ಲ, ಖಾಸಗಿ ಬಸ್ಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ ಸಂಚಾರಕ್ಕೆ ತೊಂದರೆಯಾಗಿದೆ. ಬಸ್ ನಿಲ್ದಾಣದ ಅಭಿವೃದ್ಧಿಗೆ ಶಾಸಕರು, ಆಧಿಕಾರಿಗಳು ಕ್ರಮವಹಿಸಬೇಕು. ನಾಗೇಶ್ ಸಿ.ಬಿ ಸ್ಥಳೀಯ ನಾಗರಿಕರ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ